ಜೋ ಬೈಡೆನ್‌ ಕೋರ್‌ ಟೀಮ್‌ನಲ್ಲಿ ಇಬ್ಬರು ಭಾರತೀಯ ಸಂಜಾತರು | ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಜೋ ಬೈಡೆನ್ | ಪ್ರಮುಖ ವಿಷಯಗಳ ಬಗ್ಗೆ ಬೈಡೆನ್‌ಗೆ ಸಲಹಾಗಾರರಾಗಿ ಸೇವೆ |ಭಾರತೀಯ ಮೂಲಕ ಡಾ. ವಿವೇಕ್ ಮೂರ್ತಿ, ರಾಜ್‌ ಚೆಟ್ಟಿ

ವಾಷಿಂಗ್‌ಟನ್ (ಅ. 31): ಅಮೆರಿಕಾ ಬಹಳಷ್ಟು ವಿಚಾರಗಳಲ್ಲಿ ಭಾರತೀಯರನ್ನು ಅವಲಂಬಿಸಿದೆ. ಈ ಬಾರಿ ಅಮೆರಿಕಾದ ಉಪಾಧ್ಯಕ್ಷೀಯ ಅಭ್ಯರ್ಥಿ ಕೂಡಾ ಭಾರತೀಯ ಸಂಜಾತೆ ಕಮಲಾ ಹ್ಯಾರಿಸ್‌ ಎಂಬುವುದು ನಮಗೆ ತಿಳಿದಿರುವ ವಿಚಾರ.

ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್‌ ಕೋರ್‌ ಟೀಮ್‌ನಲ್ಲಿ ಮತ್ತಿಬ್ಬರು ಭಾರತೀಯ ಮೂಲದ ವ್ಯಕ್ತಿಗಳಿದ್ದಾರೆ. ಹೌದು, ಅಮೆರಿಕಾದ ಮಾಜಿ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಮತ್ತು ಅರ್ಥಶಾಸ್ತ್ರಜ್ಞ ರಾಜ್‌ ಚೆಟ್ಟಿ, ಬೈಡನ್‌ಗೆ ಪ್ರಮುಖ ಸಲಹಗಾರರಾಗಿದ್ದಾರೆ.

"

ಈ ಭವಿಷ್ಯ ನಿಜವಾದರೆ ಅಮೆರಿಕಾದಲ್ಲಿ ಗೆಲ್ಲೋರ್ಯಾರು? 13 KEY ಯಲ್ಲಿ ಅಡಗಿದೆ ರಹಸ್ಯ!

ಕೊರೋನಾವೈರಸ್ ನಿರ್ವಹಣೆ, ಆರೋಗ್ಯ ಕ್ಷೇತ್ರ, ಆರ್ಥಿಕತೆ, ವಿದೇಶಾಂಗ ನೀತಿಗಳು ಮತ್ತು ಕ್ಲೈಮೇಟ್‌ ಚೇಂಜ್‌ ಬಗ್ಗೆ ಇವರೇ ಬೈಡೆನ್‌ಗೆ ಸಲಹೆ ನೀಡ್ತಾರೆ. ಡಾ. ವಿವೇಕ್ ಮೂರ್ತಿ ಈ ಹಿಂದೆ ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ ಅವರ ಜೊತೆ ಕೆಲಸ ಮಾಡಿ ಅನುಭವ ಹೊಂದಿರುವವರು. ರಾಜ್‌ ಚೆಟ್ಟಿ ಹಾರ್ವರ್ಡ್‌ ವಿವಿಯಲ್ಲಿ ಅರ್ಥಶಾಸ್ತ್ರಜ್ಞರಾಗಿದ್ದಾರೆ.

ಕೊರೋನಾ ಪಿಡುಗು ಶುರುವಾದಗಿನಿಂದ, ಜೋ ಬೈಡೆನ್‌ ಡಾ. ಮೂರ್ತಿಯವರಿದಂದ ಪ್ರತಿದಿನ ಸಲಹೆ ಪಡೆಯುತ್ತಿದ್ದಾರೆ. ಕೊರೋನಾ ಚಿಕಿತ್ಸೆ, ಲಸಿಕೆ, ನಿರ್ವಹಣೆ ಮತ್ತಿತರ ವಿಚಾರಗಳ ಬಗ್ಗೆ ಅವಶ್ಯಾನುಸಾರ ಸಮಗ್ರ ವಿವರಗಳನ್ನು ಡಾ. ಮೂರ್ತಿ ನೀಡುತ್ತಿದ್ದಾರೆ. ಇನ್ನೊಂದು ಕಡೆ, ಕೊರೋನಾದಿಂದ ನರಳುತ್ತಿರುವ ಆರ್ಥಿಕತೆ, ಮತ್ತು ಅದನ್ನು ಮೇಲೆತ್ತುವ ನೀತಿಗಳ ಬಗ್ಗೆ ರಾಜ್‌ ಚೆಟ್ಟಿಯವರು ಜೋ ಬೈಡೆನ್‌ಗೆ ಸಲಹೆ ನೀಡುತ್ತಿದ್ದಾರೆ.