Asianet Suvarna News Asianet Suvarna News

ಕಾಬೂ​ಲ್‌​ನಿಂದ ಅಮೆ​ರಿಕ ಸೇನೆ ತೆರವು ಆರಂಭ!

* ಆಗಸ್ಟ್‌ 31ರೊಳಗೆ ತನ್ನ ಸೈನಿ​ಕರ ತೆರವು ಮಾಡು​ವು​ದಾಗಿ ಹೇಳಿದ್ದ ಅಮೆ​ರಿಕ

* ಕಾಬೂ​ಲ್‌​ನಿಂದ ಅಮೆ​ರಿಕ ಸೇನೆ ತೆರವು ಆರಂಭ

US on alert for further Kabul attacks in race to complete evacuations pod
Author
Bangalore, First Published Aug 29, 2021, 3:37 PM IST

ಕಾಬೂಲ್(ಆ.29): ಆಗಸ್ಟ್‌ 31ರೊಳಗೆ ತನ್ನ ಸೈನಿ​ಕರ ತೆರವು ಮಾಡು​ವು​ದಾಗಿ ಹೇಳಿದ್ದ ಅಮೆ​ರಿಕ, ಈಗ ಈ ನಿಟ್ಟಿ​ನಲ್ಲಿ ಕಾರ್ಯಾ​ರಂಭ ಮಾಡಿದೆ. ಕಾಬೂಲ್‌ ವಿಮಾನ ನಿಲ್ದಾ​ಣ​ದಿಂದ ಅಮೆ​ರಿಕ ಸೇನೆ ಹಿಂತೆ​ಗೆತ ಆರಂಭ​ವಾ​ಗಿದೆ ಎಂದು ಪೆಂಡ​ಗನ್‌ ವಕ್ತಾರ ಜಾನ್‌ ಕಿರ್ಬಿ ಶುಕ್ರ​ವಾರ ರಾತ್ರಿ ಹೇಳಿ​ದ್ದಾ​ರೆ.

ಈ ನಡುವೆ, ಒಂದೊಂದೇ ದೇಶ​ಗಳು ಆಫ್ಘ​ನ್‌​ನಿಂದ ಕಾಲ್ತೆ​ಗೆ​ಯು​ತ್ತಿ​ದ್ದಂತೆಯೇ ತಾಲಿ​ಬಾನ್‌ ಹೆಚ್ಚು ಪಡೆ​ಗ​ಳನ್ನು ಕಾಬೂಲ್‌ ಏರ್‌​ಪೋರ್ಟ್‌ ಸುತ್ತ ನಿಯೋ​ಜಿ​ಸಿ​ದೆ. ವಿಮಾನ ನಿಲ್ದಾಣದಲ್ಲಿ ಮತ್ತೊಂದು ದಾಳಿ ನಡೆಯುವ ಭೀತಿಯಿಂದಾಗಿ, ಹೆಚ್ಚು ಜನಸಂದಣಿ ಏರ್ಪಡದಂತೆ ತಡೆಯಲು ಹೆಚ್ಚು ಪಡೆಗಳನ್ನು ಕಾವ​ಲಿ​ರಿ​ಸಿ​ದೆ.

ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳಲ್ಲೂ ತಾಲಿಬಾನಿಗಳಿಂದ ಭಾರೀ ಭದ್ರತೆ ಏರ್ಪಡಿಸಲಾಗಿದ್ದು, ಆ.31ರ ಒಳಗಾಗಿ ಆಫ್ಘನ್‌ ತೊರೆದು ಇತರ ರಾಷ್ಟ್ರಗಳಿಗೆ ತೆರಳಬೇಕೆಂಬ ಜನರು ಏರ್‌ಪೋರ್ಟ್‌ಗೆ ತೆರಳುವುದೇ ದುಸ್ತರವಾಗಿ ಪರಿಣಮಿಸಿದೆ. ಇದರಿಂದಾಗಿ ಕಳೆದ 2 ವಾರಗಳಿಂದ ಇತರ ದೇಶಗಳಿಗೆ ತೆರಳುವ ವಿಶ್ವಾಸದಲ್ಲಿ ತುಂಬಿ ತುಳುಕುತ್ತಿದ್ದ ಸ್ಥಳಗಳು ಇದೀಗ ಬಿಕೋ ಎನ್ನುತ್ತಿವೆ.

 

Follow Us:
Download App:
  • android
  • ios