Asianet Suvarna News Asianet Suvarna News

ಗಗನಚುಂಬಿ ಕಟ್ಟಡದ ಭಾರ ತಾಳಲಾಗದೇ ಮುಳುಗುತ್ತಿದೆ ನ್ಯೂಯಾರ್ಕ್ ಸಿಟಿ.... ಏನಿದರ ಮರ್ಮ?

ಸಮುದ್ರ ನೀರಿನ ಮಟ್ಟ ಹೆಚ್ಚಾಗಿ ಜಾಗತಿಕ ಬಿಸಿ ಏರಿ ನಗರಗಳು ಮುಳುಗುವುದನ್ನು ಕೇಳಿದ್ದೇವೆ. ಆದರೆ, ಅಮೆರಿಕದ ನ್ಯೂಯಾರ್ಕ್ ನಗರವೂ ತನ್ನ ಗಗನಚುಂಬಿ ಕಟ್ಟಡದ ಭಾರದಿಂದ ಮುಳುಗುತ್ತಿದೆ ಎಂಬ ಆತಂಕಕಾರಿ ವಿಷಯವೊಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.

US New York City which have more then  10 lakh skyscrapers gets down 1.2 mm per year from the weight of skyscrapers buildings akb
Author
First Published May 19, 2023, 7:10 AM IST | Last Updated May 19, 2023, 7:10 AM IST

ನ್ಯೂಯಾರ್ಕ್: ಸಮುದ್ರ ನೀರಿನ ಮಟ್ಟ ಹೆಚ್ಚಾಗಿ ಜಾಗತಿಕ ಬಿಸಿ ಏರಿ ನಗರಗಳು ಮುಳುಗುವುದನ್ನು ಕೇಳಿದ್ದೇವೆ. ಆದರೆ, ಅಮೆರಿಕದ ನ್ಯೂಯಾರ್ಕ್ ನಗರವೂ ತನ್ನ ಗಗನಚುಂಬಿ ಕಟ್ಟಡದ ಭಾರದಿಂದ ಮುಳುಗುತ್ತಿದೆ ಎಂಬ ಆತಂಕಕಾರಿ ವಿಷಯವೊಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.  ನಗರದಲ್ಲಿನ 10 ಲಕ್ಷ ಕಟ್ಟಡಗಳು ಸುಮಾರು 77 ಸಾವಿರ ಕೋಟಿ ಕೇಜಿ ಗಿಂತಲೂ ಹೆಚ್ಚಿನ ಭಾರ ಇರುವ ಕಾರಣ ನ್ಯೂಯಾರ್ಕ್ ನಗರದ (New York City) ಭೂಮಿ ಪ್ರತಿವರ್ಷ 1.2 ಮಿಲಿಮೀಟರ್‌ ಕುಸಿಯುತ್ತಿದೆ. ಈ ಪೈಕಿ ಮ್ಯಾನ್‌ಹಾಟನ್‌ (Manhattan), ಬ್ರೂಕ್ಲಿನ್‌ ಹಾಗೂ ಕ್ವೀನ್ಸ್‌ (Queens)ಪ್ರದೇಶಗಳು ಅತಿ ಹೆಚ್ಚು ಆತಂಕದಲ್ಲಿರುವ ಪ್ರದೇಶಗಳಾಗಿವೆ.

ಇದರ ಪರಿಣಾಮ ಅಟ್ಲಾಂಟಿಕ್‌ ಸಾಗರವು (Atlantic Ocean) 3ರಿಂದ 4 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿ ನಗರಕ್ಕೆ ಪ್ರವಾಹ ಸಮಸ್ಯೆಯನ್ನು ತಂದೊಡ್ಡಲಿದೆ ಎಂದು ಅಮೆರಿಕ ಭೂಗರ್ಭ ಶಾಸ್ತ್ರ ಸವೇಕ್ಷಣಾ ಇಲಾಖೆ (US Geological Survey), ಭೂಗರ್ಭ ಶಾಸ್ತ್ರಜ್ಞರು (geologists) ಹಾಗೂ ರೋಡ್‌ ದ್ವೀಪ ವಿಶ್ವವಿದ್ಯಾಲಯ ಸಿದ್ಧಪಡಿಸಿದ ವರದಿ ಹೇಳಿದೆ.

ಭಯಂಕರ ಪ್ರೇಮಿ ಇವ: ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಗೆಳತಿಗೆ ಭಾರತೀಯನ ಸರ್‌ಪ್ರೈಸ್‌

Latest Videos
Follow Us:
Download App:
  • android
  • ios