ಸ್ಕ್ಯಾಮ್ ಅಂತ ಮೇಲ್ ನಿರ್ಲಕ್ಷಿಸಿದವನಿಗೆ ಅಚ್ಚರಿ: ಗೆದ್ದ ಭರ್ಜರಿ ಮೊತ್ತದ ಲಾಟರಿ
ಅಮೆರಿಕಾದ ವ್ಯಕ್ತಿಯೊಬ್ಬರಿಗೆ ತಾವು ಲಾಟರಿ ಗೆದ್ದಿರುವುದಾಗಿ ಆಗಾಗ ಮೆಸೇಜ್ ನೊಟೀಫಿಕೇಷನ್ ಬರುತ್ತಲೇ ಇತ್ತು ಆದರೆ ಅವರು ಇಷ್ಟೊಂದು ಮೊತ್ತ ಗೆಲ್ಲುವುದು ಸಾಧ್ಯವಿಲ್ಲವೆಂದು ನಂಬದೇ ಸುಮ್ಮನಾಗಿದ್ದರು. ಆದರೂ ಮತ್ತೊಮ್ಮೆ ಪರಿಶೀಲನೆ ನಡೆಸಿದಾಗ ಖುಷಿಯಿಂದ ಆಕಾಶದಲ್ಲಿ ತೇಲುವ ಸ್ಥಿತಿ ಅವರದಾಗಿದೆ.
ಮಿಚಿಗನ್: ಸಾಮಾನ್ಯವಾಗಿ ಮೇಲ್‌ಗೆ ಮೊಬೈಲ್ ಫೋನ್‌ಗೆ ನೀವು ಇಷ್ಟು ಸಾವಿರ ಗೆದ್ದಿದ್ದಿರಿ, ಇಷ್ಟು ಲಕ್ಷ ನಿಮ್ಮ ಖಾತೆಗೆ ಬಂದಿದೆ ಲಾಗಿನ್ ಆಗಿ ಹೀಗೆ ಸಂದೇಶಗಳು ಬರುತ್ತಿರುತ್ತವೆ. ಇದೆಲ್ಲಾ ಬಹುತೇಕ ಸ್ಕ್ಯಾಮ್‌ಗಳೇ ಆಗಿರುತ್ತವೆ. ಅದೇ ರೀತಿ ಅಮೆರಿಕಾದ ವ್ಯಕ್ತಿಯೊಬ್ಬರಿಗೆ ಇದೇ ರೀತಿ ಸಂದೇಶ ಬಂದಿತ್ತು. ತಾವು ಲಕ್ಷಾಂತರ ಡಾಲರ್ ಮೊತ್ತದ ಹಣ ಗಳಿಸಿದ್ದಾಗಿ ಅವರ ಖಾತೆಗೆ ಇಮೇಲ್ ಬಂದಿತ್ತು. ಆದರೆ ಮೇಲ್ ರಿಸೀವ್ ಮಾಡಿದ ವ್ಯಕ್ತಿ ಇದು ಸ್ಕ್ಯಾಮ್ ಎಂದು ಭಾವಿಸಿ ಸುಮ್ಮನಾಗಿದ್ದಾರೆ. ಆದರೆ ಅವರೀಗ ಅಮೆರಿಕಾದ ರಾಜ್ಯ ಲಾಟರಿಯಲ್ಲಿ ಬಹುಕೋಟಿ ಮೊತ್ತದ ಹಣ ಗೆದ್ದಿದ್ದಾರೆ.
ಇವರಿಗೆ ತಾವು ಲಾಟರಿ ಗೆದ್ದಿರುವುದಾಗಿ ಆಗಾಗ ಮೆಸೇಜ್ ನೊಟೀಫಿಕೇಷನ್ ಬರುತ್ತಲೇ ಇತ್ತು ಆದರೆ ಅವರು ಇಷ್ಟೊಂದು ಮೊತ್ತ ಗೆಲ್ಲುವುದು ಸಾಧ್ಯವಿಲ್ಲವೆಂದು ನಂಬದೇ ಸುಮ್ಮನಾಗಿದ್ದರು. ಆದರೂ ಮತ್ತೊಮ್ಮೆ ಪರಿಶೀಲನೆ ನಡೆಸಿದಾಗ ಖುಷಿಯಿಂದ ಆಕಾಶದಲ್ಲಿ ತೇಲುವ ಸ್ಥಿತಿ ಅವರದಾಗಿದೆ. ಮಿಚಿಗನ್ ಲಾಟರಿ ಸಂಸ್ಥೆಯ ಪ್ರಕಾರ, 67 ವರ್ಷದ ಅನಾಮಧೇಯ ವ್ಯಕ್ತಿಯೊಬ್ಬರಿಗೆ ಲಾಟರಿ ಮಗುಚಿದ್ದು, ಅವರು ಅನಾಮಧೇಯರಾಗಿಯೇ ಉಳಿಯಲು ಬಯಸಿದ್ದರಿಂದ ಸಂಸ್ಥೆ ಅವರ ಗುರುತಿನ ಬಗ್ಗೆ ಹೇಳಿಲ್ಲ,
ಕೋಟ್ಯಾಧಿಪತಿಯಾದ್ರೂ ಮಿಡಲ್ ಕ್ಲಾಸ್ ಜೀವನ, ಕೋಟಿ ಕೋಟಿ ಲಾಟರಿ ಸತ್ಯ ಮುಚ್ಚಿಟ್ಟ ದಂಪತಿ!
ಅಕ್ಟೋಬರ್ 11 ರಂದು ನಡೆದ ಲಾಟರಿ ಡ್ರಾದಲ್ಲಿ ಅವರು ವಿಜಯಶಾಲಿಯಾಗಿದ್ದು 416,322 ಡಾಲರ್ (3,46,56,933 ಭಾರತೀಯ ರೂಪಾಯಿ) ಗೆದ್ದಿದ್ದಾರೆ. ಇವರು ಇದಕ್ಕೂ ಮೊದಲು ಜಾಕ್ಪಾಟ್ ಆನ್‌ಲೈನ್ ಆಟಗಳಲ್ಲಿ ಗೆಲ್ಲುವ ಮೂಲಕ ಈ ಬೃಹತ್ ಮೊತ್ತದ ಲಾಟರಿ ಟಿಕೆಟ್‌ಗೆ ಅರ್ಹತೆ ಪಡೆದಿದ್ದರು.
ನಾನು ಆನ್‌ಲೈನ್‌ನಲ್ಲಿ ಬಹಳಷ್ಟು ಆಟಗಳನ್ನು ಆಡಿದ್ದೆ ಆದರೆ ಕೆಲವು ಆಟಗಳನ್ನು ಆಡುವಾಗ ನಾನು ಎರಡನೇ ಅವಕಾಶದ ಕೊಡುಗೆಯನ್ನು ಗಳಿಸುವೆ ಎಂಬುದು ನನಗೆ ತಿಳಿದಿರಲಿಲ್ಲಎಂದು ಈ ಅನಾಮಧೇಯ ವ್ಯಕ್ತಿ ಹೇಳಿಕೊಂಡಿದ್ದಾರೆ. ನಾನು ಮಿಚಿಗನ್ ಲಾಟರಿಯಿಂದ $ 416,322 ಎರಡನೇ ಬಹುಮಾನವನ್ನು ಗೆದ್ದಿದ್ದೇನೆ ಎಂದು ಹೇಳುವ ಇಮೇಲ್ ಅನ್ನು ನೋಡಿದೆ, ಮತ್ತು ನಾನು ಉಡುಗೊರೆಯನ್ನು ನಮೂದಿಸದ ಕಾರಣ ಇದು ಸ್ಕ್ಯಾಮ್ ಇ-ಮೇಲ್ ಎಂದು ನಾನು ಭಾವಿಸಿದ್ದೆ.
ನಂತರ ಮಿಚಿಗನ್ ಲಾಟರಿ ಸಂಸ್ಥೆಗೆ ಕರೆ ಮಾಡಿದಾಗ ನಾನು ನನಗೆ ತಿಳಿಯದೆಯೇ ನಾನು ಲಾಟರಿ ಗೆಲ್ಲುವ ಅವಕಾಶ ಪಡೆದಿದ್ದೇನೆ ಎಂದು ತಿಳಿಯಿತು. ನನಗೆ ಈಗಲೂ ಅದನ್ನು ನಿಜ ಎಂದು ನಂಬಲಾಗುತ್ತಿಲ್ಲ, ಇಷ್ಟೊಂದು ದೊಡ್ಡ ಮೊತ್ತದ ಗೆಲುವಿನ ಈ ಅನುಭವ ಒಂದು ರೀತಿ ಕ್ರೇಜಿ ಫೀಲಿಂಗ್ ಎಂದು ಅವರು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಇವರು ಲಾಟರಿ ಕಚೇರಿಗ ತೆರಳಿ ತಮ್ಮ ಬಹುಮಾನದ ಮೊತ್ತವನ್ನು ಪಡೆದುಕೊಂಡಿದ್ದಾರೆ. ಈ ಹಣವನ್ನು ಅವರು ತಮ್ಮ ಕುಟುಂಬದೊಂದಿಗೆ ಹಂಚಿಕೊಂಡು ಉಳಿದ ಹಣವನ್ನು ಸೇವ್ ಮಾಡುವುದಾಗಿ ಹೇಳಿದ್ದಾರೆ.
ಯುಎಇ ಲಾಟರಿ ಗೆದ್ದ ಭಾರತೀಯ: ಚೆನ್ನೈನ ಮಗೇಶ್‌ಗೆ 16 ಕೋಟಿಯ ಜಾಕ್‌ಪಾಟ್