ತಮಿಳುನಾಡಿನ ಅಂಬರ್‌ ಮೂಲದ ಮಗೇಶ್‌ ನಟರಾಜನ್‌ (49) ಅವರು ಯುಎಇಯ ಫಾಸ್ಟ್‌5 ಲಕ್ಕಿ ಡ್ರಾ ಗ್ರ್ಯಾಂಡ್‌ ಪ್ರೈಜ್‌ನಲ್ಲಿ ಭರ್ಜರಿ 16 ಕೋಟಿ ರು. ಬಹುಮಾನ ಗೆದ್ದಿದ್ದಾರೆ. 

ಚೆನ್ನೈ: ಇಲ್ಲಿನ ಅಂಬರ್‌ ಮೂಲದ ಮಗೇಶ್‌ ನಟರಾಜನ್‌ (49) ಅವರು ಯುಎಇಯ ಫಾಸ್ಟ್‌5 ಲಕ್ಕಿ ಡ್ರಾ ಗ್ರ್ಯಾಂಡ್‌ ಪ್ರೈಜ್‌ನಲ್ಲಿ ಭರ್ಜರಿ 16 ಕೋಟಿ ರು. ಬಹುಮಾನ ಗೆದ್ದಿದ್ದಾರೆ. ಆದರೆ ಈ ಹಣವನ್ನು ಅವರಿಗೆ ಒಟ್ಟಿಗೆ ನೀಡಲಾಗುವುದಿಲ್ಲ. ಬದಲಾಗಿ ಮುಂದಿನ 25 ವರ್ಷಗಳ ಕಾಲ ಪ್ರತಿ ತಿಂಗಳಿಗೆ 5.5 ಲಕ್ಷ ರು.ನಂತೆ ಹಣ ನೀಡಲಾಗುವುದು. ಬಾಲ್ಯದಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದು, ಈ ಬೃಹತ್‌ ಮೊತ್ತದ ಹಣವನ್ನು ತನ್ನ ಸಮುದಾಯದ ಏಳಿಗೆಗೆ ವಿನಿಯೋಗಿಸುವ ಯೋಚನೆ ಮಾಡಿದ್ದೇನೆ. ಅಲ್ಲದೆ ನನ್ನ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುವ ಮೂಲಕ ಕುಟುಂಬದ ಭವಿಷ್ಯ ಉಜ್ವಲ ಮಾಡುವ ನಿಟ್ಟಿನಲ್ಲಿ ವಿನಿಯೋಗಿಸುತ್ತೇನೆ ಎಂದು ಮಗೇಶ್‌ತಿಳಿಸಿದ್ದಾರೆ.

ಸುಮ್ನೆ ಅಲ್ಲ ಹಿಟ್ಲರ್‌ ಯಹೂದಿಗಳ ಮರಣಹೋಮ ಮಾಡಿದ್ದು ಎಂದ ಬ್ಯಾಂಕ್ ಉದ್ಯೋಗಿ ಮನೆಗೆ

ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ