Asianet Suvarna News Asianet Suvarna News

ಕೋಟ್ಯಾಧಿಪತಿಯಾದ್ರೂ ಮಿಡಲ್ ಕ್ಲಾಸ್ ಜೀವನ, ಕೋಟಿ ಕೋಟಿ ಲಾಟರಿ ಸತ್ಯ ಮುಚ್ಚಿಟ್ಟ ದಂಪತಿ!

ಹಣ ಗಳಿಸೋದು ಮಾತ್ರ ಮುಖ್ಯವಲ್ಲ. ಅದನ್ನು ಹೇಗೆ ಬಳಕೆ ಮಾಡ್ಬೇಕು ಎನ್ನುವ ಸತ್ಯ ಗೊತ್ತಿರಬೇಕು. ಅನೇಕರು ಹಣ ಬರ್ತಿದ್ದಂತೆ ಕೈ ಬಿಚ್ಚಿ ಎಲ್ಲವನ್ನು ಖಾಲಿ ಮಾಡಿಕೊಳ್ತಾರೆ. ಆದ್ರೆ ಈ ವ್ಯಕ್ತಿಯ ಬುದ್ದಿವಂತಿಕೆಗೆ ಮೆಚ್ಚಲೇಬೇಕು. 
 

Middle Class Couple Won Twenty Two Million Lottery Hid Everything From Kids roo
Author
First Published Oct 27, 2023, 1:26 PM IST

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಥ ರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎನ್ನುವ ಗಾದೆಯನ್ನು ನೀವು ಕೇಳಿರಬಹುದು. ಕೈತುಂಬಾ ಹಣ, ಶ್ರೀಮಂತಿಕೆ ಬಂದಾಗ ನಮ್ಮನ್ನು ಹಿಡಿಯೋದು ಕಷ್ಟ. ಲೆಕ್ಕಾಚಾರವಿಲ್ಲದೆ, ಖರ್ಚಿಗೆ ಕಡಿವಾಣ ಹಾಕದೆ ಜೀವನ ನಡೆಸ್ತೇವೆ. ಆದ್ರೆ ಕೆಲವರು ಈ ಸ್ವಭಾವಕ್ಕೆ ಭಿನ್ನವಾಗಿ ನಿಲ್ಲುತ್ತಾರೆ. ಕೈಯಲ್ಲಿ ಎಷ್ಟೇ ಹಣವಿರಲಿ, ಐಷಾರಾಮಿ ಬದುಕು ಸಾಗಿಸುವ ಅವಕಾಶವಿರಲಿ, ಅದನ್ನು ಬದಿಗಿಟ್ಟು ಸಾಮಾನ್ಯರಂತೆ ಬದುಕುತ್ತಾರೆ. ಅವರ ಬಳಿ ಇಷ್ಟೊಂದು ಹಣವಿದೆ ಎಂಬ ಸುಳಿವನ್ನು ತಮ್ಮ ಆಪ್ತರಿಗೆ, ಸ್ನೇಹಿತರಿಗೆ ಇರಲಿ ಮಕ್ಕಳಿಗೂ ಹೇಳೋದಿಲ್ಲ. ಈ ದಂಪತಿ ಕೂಡ ಅದೇ ಕೆಲಸ ಮಾಡಿದ್ದಾರೆ. ಕೋಟ್ಯಾಧಿಪತಿಯಾದ್ರೂ ಅವರು ಮಧ್ಯಮ ವರ್ಗದವರಂತೆ ಜೀವನ ನಡೆಸುತ್ತಿದ್ದಾರೆ. ದಂಪತಿ ಎಲ್ಲವನ್ನೂ ಮುಚ್ಚಿಟ್ಟು ಹೀಗೆ ಜೀವನ ನಡೆಸಲು ಮಹತ್ವದ ಕಾರಣವೊಂದಿದೆ.

ನ್ಯಾಶ್ವಿಲ್ಲೆ, ಟೆನ್ನೆಸ್ಸೀ ವ್ಯಕ್ತಿಯೊಬ್ಬರು ಜಾನ್ ನನ್ನ ಹೆಸರು ಎನ್ನುತ್ತ  ಹಣಕಾಸಿನ ರೇಡಿಯೊ (Radio) ಕಾರ್ಯಕ್ರಮವಾದ ದಿ ರೆಮ್ಸೆ ಶೋಗೆ ಕರೆ ಮಾಡಿದ್ದಾರೆ. ಜಾನ್ ವಯಸ್ಸು 50 ವರ್ಷ.  ಆತನಿಗೆ ಹದಿಹರೆಯದ ಮಕ್ಕಳಿದ್ದಾರೆ. ಆತ ಕೋಟ್ಯಾಧಿಪತಿ (Billionaire) . ಆದ್ರೆ ಈ ವಿಷ್ಯ ಆತನ ಪತ್ನಿಗೆ ಬಿಟ್ಟು ಮತ್ತೆ ಯಾರಿಗೂ ತಿಳಿದಿಲ್ಲ. ಇಬ್ಬರೂ ಮಧ್ಯಮ ವರ್ಗದವರಂತೆ ಜೀವನ ನಡೆಸುತ್ತಿದ್ದಾರೆ. 

ಮುಕೇಶ್ ಅಂಬಾನಿ ಮದುವೆಯಾಗಲು ನೀತಾ ಅಂಬಾನಿ ಒಪ್ಪಿಕೊಂಡಿದ್ದು ಇದೇ ಕಾರಣಕ್ಕಂತೆ!

ಲಾಟರಿ (Lottery) ಯಲ್ಲಿ ಸಿಕ್ಕಿತ್ತು ಇಷ್ಟೊಂದು ಹಣ : ಜಾನ್ ಪ್ರಕಾರ, ಅವರು ಲಾಟರಿ ಗೆದ್ದಿದ್ದರಂತೆ. ಲಾಟರಿಯಲ್ಲಿ  1.65 ಅರಬ್ ರೂಪಾಯಿ ಗೆದ್ದಿದ್ದಾರೆ. ಲಾಟರಿಯಲ್ಲಿ ಇಷ್ಟೊಂದು ಹಣ ಸಿಕ್ಕಿದ್ರೂ ಅದನ್ನು ಅವರು ಯಾರಿಗೂ ಹೇಳಿಲ್ಲ. ಅವರ ಮಕ್ಕಳಿಗೆ ಕೂಡ ಈ ವಿಷ್ಯ ತಿಳಿದಿಲ್ಲ. 

10 ವರ್ಷದ ನಂತ್ರ ಬೀದಿಗೆ ಬರ್ತಾರೆ ಜನರು : ಜಾನ್, ಲಾಟರಿ ಗೆದ್ದ ವಿಷ್ಯವನ್ನು ಮುಚ್ಚಿಡಲು ಮುಖ್ಯ ಕಾರಣವೊಂದಿದೆ. ಜಾನ್ ಪ್ರಕಾರ, ಲಾಟರಿ ಗೆದ್ದ ಮೇಲೆ ಜನರು ಎಲ್ಲರಿಗೂ ಈ ವಿಷ್ಯವನ್ನು ಹೆಮ್ಮೆಯಿಂದ ಹೇಳಿಕೊಳ್ತಾರೆ. ಅದನ್ನು ಕೇಳಿದ ಸಂಬಂಧಿಕರು ಒಂದೊಂದೇ ನೆಪ ಹೇಳಿಕೊಂಡು ಹಣದ ಸಹಾಯ ಕೇಳ್ತಾರೆ. ಆಗ ಮುಜುಗರಕ್ಕೆ ಸಿಗುವ ಇವರು, ಕೈನಲ್ಲಿರುವ ಹಣವನ್ನೆಲ್ಲ ಬೇರೆಯವರಿಗೆ ನೀಡಿ ಮತ್ತೆ ಖಾಲಿ ಕೈ ಮಾಡಿಕೊಳ್ತಾರೆ. ಇದು ಲಾಟರಿ ವಿಜೇತರ ದೊಡ್ಡ ತಪ್ಪು ಎನ್ನುತ್ತಾರೆ ಜಾನ್.

ಸಾಲ ಪಡೆದವರಿಗೆ ಬೆಳಗೆ 8ಕ್ಕೆ ಮೊದಲ ಸಂಜೆ 7 ರ ನಂತರ ಕರೆ ಮಾಡುವಂತಿಲ್ಲ: ಆರ್‌ಬಿಐ

ಮಕ್ಕಳಿಗೆ ಹೇಳದಿರಲು ಇದು ಕಾರಣ : ಜಾನ್ ಮಕ್ಕಳು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ತಂದೆ ಬಳಿ ಇಷ್ಟೊಂದು ಹಣವಿದೆ ಎಂಬುದು ಗೊತ್ತಾದ್ರೆ ಅದನ್ನು ಪಡೆಯಲು ಅವರು ಪಾಲಕರ ಸಾವನ್ನು ಕಾಯುತ್ತಾರೆ. ನಮ್ಮ ಸಾವಿಗೆ ಮಕ್ಕಳು ಕಾಯೋದು ನನಗೆ ಇಷ್ಟವಿಲ್ಲ ಎನ್ನುತ್ತಾರೆ ಜಾನ್. ಕಷ್ಟವೆಂದ್ರೆ ಏನು? ಹಣವನ್ನು ಹೇಗೆ ಗಳಿಸಬೇಕು, ಹೇಗೆ ಉಳಿಸಬೇಕು ಎಂಬುದು ಮಕ್ಕಳಿಗೆ ತಿಳಿದಿರಬೇಕು. ಅದಕ್ಕಾಗಿ ನಾವು ಈ ವಿಷ್ಯ ಮುಚ್ಚಿಟ್ಟಿದ್ದೇವೆ. ಮಕ್ಕಳು ದೊಡ್ಡವರಾಗಿ ಸಂಪಾದನೆ ಶುರು ಮಾಡಿದ್ಮೇಲೆ ಎಲ್ಲವನ್ನೂ ಹೇಳ್ತೇವೆ ಎನ್ನುತ್ತಾರೆ ಜಾನ್.

ಹಣ ಖರ್ಚು ಮಾಡಿದಾಗ ಮಕ್ಕಳಿಗೆ ಹೇಳೋದೇನು? : ಜಾನ್ ಪತ್ನಿಯ ತಮ್ಮ ಸಾವನ್ನಪ್ಪಿದ್ದಾನೆ. ಆಕೆಗೆ ಬೇರೆ ಯಾರೂ ರಕ್ತ ಸಂಬಂಧಿಕರಿಲ್ಲ. ಯಾವುದೇ ದೊಡ್ಡ ವಸ್ತುಗಳನ್ನು ಖರೀದಿ ಮಾಡಿದಾಗ, ಮಕ್ಕಳು ಹಣ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದ್ರೆ, ಮಾವನ ಹಣ ಸ್ವಲ್ಪ ಇತ್ತು. ಅದನ್ನು ಬಳಸಿಕೊಂಡಿದ್ದೇವೆ ಎಂದು ಜಾನ್ ಹೇಳ್ತಾರಂತೆ. ಜಾನ್, ಲಾಟರಿ ಹಣ ಬಳಸಿ ಅವರ ತಾಯಿಗೆ ಒಂದು ದೊಡ್ಡ ಮನೆ ಖರೀದಿ ಮಾಡಿದ್ದಾರಂತೆ. ಜಾನ್ ಈಗ್ಲೂ ಕೆಲಸ ಮಾಡ್ತಿದ್ದಾರೆ. ಕೆಲಸಕ್ಕೆ ಹೋಗೋದು ನನಗೆ ಇಷ್ಟ ಎನ್ನುತ್ತಾರೆ ಜಾನ್. 
 

Follow Us:
Download App:
  • android
  • ios