Birthday Bumps: ಹೆಂಡ್ತಿಗೆ ಗಂಡ ನೀಡಿದ ದುಬಾರಿ ಕಾರು ಹೊಸದಲ್ಲ, ಕದ್ದ ಮಾಲು

ಜನಸಾಮಾನ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಣ್ಣಪುಟ್ಟ ಗಿಫ್ಟ್ ನೀಡಿ ತಮ್ಮ ಪತ್ನಿಯರನ್ನು ಖುಷಿಪಡಿಸುತ್ತಾರೆ. ಆದರೆ ಅಮೆರಿಕಾದಲ್ಲಿ ಹೀಗೆ ಪತ್ನಿ ಹುಟ್ಟುಹಬ್ಬಕ್ಕೆ ಪತಿ ನೀಡಿದ ಗಿಫ್ಟೊಂದು ಆತನ ಪಾಲಿಗೆ ತಲೆನೋವಾಗಿ ಕಾಡಿದೆ. 

Us man gifted stolened car as expensive birthday gift to his wife akb

ನ್ಯೂಯಾರ್ಕ್‌: ಹೆಂಡತಿ ಹುಟ್ಟುಹಬ್ಬದಂದು ಆಕೆಯನ್ನು ಖುಷಿ ಪಡಿಸಲು ಗಂಡನಾದವನು ಏನೆಲ್ಲಾ ಕಸರತ್ತುಗಳನ್ನು ಮಾಡುತ್ತಾರೆ. ತಮ್ಮ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ತಮ್ಮ ಪತ್ನಿಗೆ ಗಂಡಂದಿರು  ಗಿಫ್ಟ್ ನೀಡುತ್ತಾರೆ. ಉಳ್ಳವರು ಕೋಟ್ಯಾಂತರ ರೂ ವೆಚ್ಚ ಮಾಡಿದರೆ, ಜನಸಾಮಾನ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಣ್ಣಪುಟ್ಟ ಗಿಫ್ಟ್ ನೀಡಿ ತಮ್ಮ ಪತ್ನಿಯರನ್ನು ಖುಷಿಪಡಿಸುತ್ತಾರೆ. ಆದರೆ ಅಮೆರಿಕಾದಲ್ಲಿ ಹೀಗೆ ಪತ್ನಿ ಹುಟ್ಟುಹಬ್ಬಕ್ಕೆ ಪತಿ ನೀಡಿದ ಗಿಫ್ಟೊಂದು ಆತನ ಪಾಲಿಗೆ ತಲೆನೋವಾಗಿ ಕಾಡಿದೆ. 

ಹೌದು ಅಮೆರಿಕಾದ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದ ಜೇಸನ್ ಸ್ಕಾಟ್ ಎಂಬುವವರು ತಮ್ಮ ಪತ್ನಿಯ ಹುಟ್ಟುಹಬ್ಬದಂದು ಆಕೆಗೆ ಸರ್‌ಫ್ರೈಸ್ ನೀಡಲು ದುಬಾರಿ ಮೊತ್ತದ ಕಾರೊಂದನ್ನು ಕೊಂಡಿದ್ದರು. ಅದರ ಬೆಲೆ $68,000 ಡಾಲರ್ ಎಂದರೆ ಭಾರತದ 59 ಲಕ್ಷ ರೂಪಾಯಿಗಳಾಗಿತ್ತು. ಆದರೆ ಆ ದುಬಾರಿ ಕಾರು ಹೊಸದಲ್ಲ, ಎಲ್ಲೋ ಕದಿಯಲ್ಪಟ್ಟಿದ್ದು ಎಂಬುದು ಈಗ ಗೊತ್ತಾಗಿದ್ದು, ಅದನ್ನು ಪೊಲೀಸರು ಬಂದು ಹೊತ್ತುಕೊಂಡು ಹೋಗಿದ್ದಾರೆ. ಇತ್ತ ಹೆಂಡತಿಯ ಖುಷಿ ಪಡಲು ಅಷ್ಟು ಹಣ ನೀಡಿ ಕಾರು ಖರೀದಿಸಿದ ಜೇಸನ್‌ ಅವರಿಗೆ ಆತ ಕಾರು ಇಲ್ಲ, ಇತ್ತ ಹಣವೂ ಇಲ್ಲ ಎಂಬಂತಹ ಪರಿಸ್ಥಿತಿ ಬಂದಿದೆ. 

ಜೇಸನ್‌ ಸ್ಕಾಟ್ ಅವರು ಇತ್ತೀಚೆಗೆ , 2021ರ ಮಾಡೆಲ್‌ನ ಸೆಕೆಂಡ್ ಹ್ಯಾಂಡ್ ಮಾಸೆರೋಟಿ SUV ಕಾರನ್ನು  ಖರೀದಿಸಿದ್ದರು. ಆದರೆ  ನವೆಂಬರ್‌ನಲ್ಲಿ  ಸೆಕೆಂಡ್ ಹ್ಯಾಂಡ್ ಕಾರ್ ವೆಬ್‌ಸೈಟ್‌ನಲ್ಲಿಆ ಕಾರಿನ ಜಾಹೀರಾತು  ತಪ್ಪಾಗಿ ಪ್ರಕಟಿಸಲಾಗಿತ್ತು ಎಂಬುದು ಅವರಿಗೆ ತಿಳಿದು ಬಂದಿತ್ತು. ಅವರು ಉತ್ತರ ಕೆರೊಲಿನಾದ ( North Carolina) ಕ್ಯಾರವಾನ್ ಎಂಬ ಕಂಪನಿಯಿಂದ ಈ ಕಾರನ್ನು ಖರೀದಿಸಿದ್ದರು.  ಕಾರು ಖರೀದಿಸಿದಾಗ ಎಲ್ಲವೂ ಚೆನ್ನಾಗಿತ್ತು ಅದು ಬೆಟ್ಟದಿಂದ ಕೆಳಗಿಳಿಯುವುದು ಅದಕ್ಕಾಗಿ ಹೊರಗೆ ಕಾಯುವುದು ಹೀಗೆ ಎಲ್ಲವೂ ಚೆನ್ನಾಗಿತ್ತು. 

ಆದರೆ ಫೆಬ್ರವರಿಯಲ್ಲಿ ಇದನ್ನು ಸ್ಥಳೀಯ ಮಾಸೆರೋಟಿ ಡೀಲರ್‌ಶಿಪ್‌ನಲ್ಲಿ ಸರ್ವೀಸ್‌ಗೆ ನೀಡಿದಾಗ ಅವರಿಗೆ ಶಾಕ್ ಕಾದಿತ್ತು.  ಅಲ್ಲಿ ಕಾರ್ಯನಿರ್ವಹಿಸುವ ನೌಕರರು, ಈ ಕಾರು ಕಳ್ಳತನವಾಗಿದ್ದಂತಹ ಕಾರು ಎಂದು ಹೇಳಿದಾಗ ಜೇಸನ್‌ ಸ್ಕಾಟ್ ಹಾಗೂ ಅವರ ಪತ್ನಿಗೆ ಶಾಕ್ ಆಗಿತ್ತು.  ನಂತರ ಕಾರಿನಲ್ಲಿದ್ದ ಗುರುತಿನ ಸಂಖ್ಯೆಯನ್ನು ಪರಿಶೀಲಿಸಿದಾಗ ಕಾರು 2017ರ ಮಾಸೆರೋಟಿ ಮಾಡೆಲ್ ಆಗಿದ್ದು,  2021ರ ಮಾಸೆರೋಟಿ ಅಲ್ಲ ಎಂಬುದು ಮೆಕ್ಯಾನಿಕ್ಸ್‌ಗೆ ತಿಳಿದು ಬಂದಿದೆ. ಅಲ್ಲದೇ ಕಾರಿನ ಬಿಡಿಭಾಗಗಳನ್ನು ಗಮನಿಸಿದಾಗ ಅವು ಕೂಡ ಒಂದೇ ಮಾಡೆಲ್‌ಗೆ ಸೇರದೇ ಅದರಲ್ಲಿ ಬೇರೆ ಬೇರೆ ಬಿಡಿಭಾಗಳಿದ್ದಿದ್ದರಿಂದ ಕಾರು ಕದ್ದಿರುವುದು ಎಂಬ ಅನುಮಾನ ಇನ್ನಷ್ಟು  ಹೆಚ್ಚಾಯ್ತು.

ವಾಹನದ ಫ್ರೇಮ್‌ನಲ್ಲಿರುವ ವಿಐಎನ್ ಸಂಖ್ಯೆಯನ್ನು ಪರಿಶೀಲಿಸಿದಾಗ ವಾಹನವು ಕಳ್ಳತನವಾದದ್ದು ಎಂಬುದು ಮೆಕ್ಯಾನಿಕ್‌ಗಳ ತಂಡಕ್ಕೆ ಅರ್ಥವಾಗಿದೆ. ಕಾರಿನ ಕಿಟಕಿಯ ಮೇಲಿದ್ದ ಹಾಗೂ ಬಾಗಿಲ ಮೇಲಿದ್ದ VIN (Vehicle Identification Number) ನಂಬರ್ ಬೇರೆ ಬೇರೆಯಾಗಿತ್ತು. ಪರಿಣಾಮ ಜೇಸನ್ ಅವರು ಕಾರಿನ ಕೀಯನ್ನು ಪೊಲೀಸರಿಗೆ ನೀಡುವಂತಹ ಸ್ಥಿತಿ ಒದಗಿ ಬಂತು.  ವರದಿಗಳ ಪ್ರಕಾರ, ಸರ್ವೀಸ್ ಸೆಂಟರ್‌ನಲ್ಲಿದ್ದ ಮೆಕ್ಯಾನಿಕ್‌ಗಳು ಕಾರು ಕಳ್ಳತನವಾಗಿದ್ದು ಎಂಬುದನ್ನು ಕಂಡುಹಿಡಿದ ಸ್ವಲ್ಪ ಸಮಯದ ನಂತರ ಪೊಲೀಸರು ಬಂದು ಜೇಸನ್ ಅವರ ಈ ವಾಹನವನ್ನು ವಶಪಡಿಸಿಕೊಂಡಿದ್ದಾರೆ. 

ಜೇಸನ್‌ ಅವರು ಇದಕ್ಕೆ ಪರಿಹಾರ ನೀಡಲು ಆಗ್ರಹಿಸಿ ಕಾರು ಕೊಂಡಂತಹ ಕಾರ್ವಾನಾ ಪ್ರತಿನಿಧಿಯನ್ನು ಸಂಪರ್ಕಿಸಿದಾಗ ಅವರು ಪರಿಹಾರ ನೀಡುವುದಕ್ಕೆ ನಿರಾಕರಿಸಿದ್ದಾರೆ. ಇದರಿಂದ ಜೇಸನ್ ತಲೆನೋವು ಮತ್ತಷ್ಟು ಹೆಚ್ಚಾಗಿದೆ. ನೀವು ವಾಹನವನ್ನು ಹಿಂದಿರುಗಿಸುವವರೆಗೂ ನಾವು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಆಕೆ ಹೇಳಿದಳು. ಆದರೆ ವಾಹನ ಪೊಲೀಸರ ಬಳಿ ಇದೆ ಎಂದು ನಾನು ಹೇಳಿದೆ ಎಂದು ಜೇಸನ್ ಹೇಳಿರುವುದನ್ನು ಉಲ್ಲೇಖಿಸಿ ಡೈಲಿ ಮೇಲ್ ವರದಿ ಮಾಡಿದೆ.

ಇತ್ತ ಹೆಂಡತಿಗೆ ದುಬಾರಿ ಗಿಫ್ಟ್ ನೀಡಿದ ಬಗ್ಗೆ ಹೆಮ್ಮೆಯಿಂದ ಬೀಗಿಕೊಂಡಿದ್ದ ಜೇಸನ್‌ಗೆ ಘಟನೆಯಿಂದ ತೀವ್ರ ಮುಜುಗರವಾಗಿದ್ದು,  ಅವರೀಗ ಸೆಕೆಂಡ್ ಹ್ಯಾಂಡ್ ವೆಬ್‌ಸೈಟ್ ವಿರುದ್ಧ 1 ಮಿಲಿಯನ್ ಡಾಲರ್ ಪರಿಹಾರಕ್ಕೆ ಆಗ್ರಹಿಸಿ ದೂರು ದಾಖಲಿಸಿದ್ದಾರೆ.  ಹಣಕಾಸು ಹಾಗೂ ಘನತೆಗೆ ಹಾನಿಯಾಗಿದೆ (reputational loss) ಎಂದು ಅವರು ಪರಿಹಾರಕ್ಕೆ (compensation) ಆಗ್ರಹಿಸಿದ್ದಾರೆ. ಆದರೆ ಸಂಸ್ಥೆ ಮಾತ್ರ  ತಮಗೆ ಇದು ಕದ್ದ ವಾಹನ ಎಂಬ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಇದಾದ ಬಳಿಕ ಜೇಸನ್ (Jason) ವಕೀಲರಿಗೆ ಕಾರ್ವಾನಾದಿಂದ ಪತ್ರವೊಂದು ಬಂದಿದ್ದು,  ಅದರಲ್ಲಿ ಕಾರು ಕಳವು ಮಾಡಿರುವುದು ಎಂಬುದು ತಮಗೆ ತಿಳಿದಿಲ್ಲ ಎಂದಿದ್ದಾರೆ. ಅಲ್ಲದೇ ಕಾರನ್ನು ಖರೀದಿಸಲು ಖರ್ಚು ಮಾಡಿದ ಹಣವನ್ನು ಮರು ಪಾವತಿಸಲು ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಎಬಿಸಿ ನ್ಯೂಸ್ ವರದಿಯ ಪ್ರಕಾರ ಕಾರ್ವಾನಾ ವಿರುದ್ಧ 130 ದೂರುಗಳಿದ್ದು,  ಉತ್ತರ ಕೆರೊಲಿನಾ ಅಟಾರ್ನಿ ಜನರಲ್ (Carolina Attorney General) ಕಚೇರಿಯಿಂದ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 

Latest Videos
Follow Us:
Download App:
  • android
  • ios