Asianet Suvarna News Asianet Suvarna News

ಪಾಕ್‌ ನೆಲೆ ಬಳಸಿ ಅಫ್ಘಾನಿಸ್ತಾನ ಮೇಲೆ ಮತ್ತೆ ಅಮೆರಿಕ ದಾಳಿ?


-ಪಾಕಿಸ್ತಾನ ಸರ್ಕಾರದೊಂದಿಗೆ ಅಮೆರಿಕಾ ರಹಸ್ಯ ಒಪ್ಪಂದ
-ಅಮೆರಿಕದ ಜತೆ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ: ಪಾಕ್‌ ಸ್ಪಷ್ಟನೆ
-ಒಪ್ಪಂದವಿಲ್ಲದೆ ಏರ್ ಕಾರಿಡಾರ್‌ಗೆ ಪ್ರವೇಶವಿಲ್ಲ

US in talks with Pakistan to use airspace for military operations in Afghanistan
Author
Bengaluru, First Published Oct 24, 2021, 10:26 AM IST
  • Facebook
  • Twitter
  • Whatsapp

ನ್ಯೂಯಾರ್ಕ್: ಅಫ್ಘಾನಿಸ್ತಾನದಲ್ಲಿ (Afghanistan) ಸೋತು ಸುಣ್ಣವಾಗಿ ದೇಶ ತೊರೆದಿದ್ದ ಅಮೆರಿಕ(America), ಇದೀಗ ನೆರೆಯ ಪಾಕಿಸ್ತಾನದ (Pakistan) ಸೇನಾ ನೆಲೆಗಳನ್ನು ಬಳಸಿಕೊಂಡು, ಅಲ್ಲಿಂದಲೇ ಅಫ್ಘಾನಿಸ್ತಾನದ ಉಗ್ರರನ್ನು ಮಟ್ಟಹಾಕುವ ಕೆಲಸ ಪುನರಂಭಿಸುವ ಬಗ್ಗೆ ಚಿಂತನೆ ನಡೆಸಿದೆ. ಈ ಕುರಿತಂತೆ ಅದು ಪಾಕಿಸ್ತಾನ ಸರ್ಕಾರದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಯೊಂದು ತಿಳಿಸಿದೆ. ತಾಲಿಬಾನ್‌ ಧಾರ್ಮಿಕ ಭಯೋತ್ಪಾದಕರು(theocratic terrorists) ಕಾಬೂಲ್‌ನಲ್ಲಿ ಅಧಿಕಾರಕ್ಕೆ ಬಂದಾಗಿನಿಂದ, ಅಫ್ಘಾನಿಸ್ತಾನದ ಜನರು, ವಿಶೇಷವಾಗಿ ಇಲ್ಲಿನ ಮಹಿಳೆಯರು ಮತ್ತು ಹೆಣ್ಮಕ್ಕಳು ಊಹಿಸಲಾಗದ ಸಂಕಟವನ್ನು ಎದುರಿಸುತ್ತಿದ್ದಾರೆ.  ಆಗಸ್ಟ್ 30 ರಂದು ಅಫ್ಘಾನಿಸ್ತಾನದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಿದ ಅಮೆರಿಕಾ, ಆ ದೇಶದಿಂದ ನಿರ್ಗಮಿಸಲು ನೀಡಿದ ಗಡುವುಗಿಂತ ಒಂದು ದಿನ ಮುಂಚಿತವಾಗಿ ಹೊರ ಹೊಗಿತ್ತು.

ಇಂಡೋನೇಷ್ಯಾ ಅಧ್ಯಕ್ಷರ ಪುತ್ರಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ!

ಈಗ ತಾಲಿಬಾನಿಗಳಿಂದ ವಶಪಡಿಸಿಕೊಂಡ ಅಫ್ಘಾನಿಸ್ತಾನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು (Military Operations) ಮುಂದುವರಿಸಲು ಅಮೆರಿಕಾ ಪಾಕಿಸ್ತಾನದ ಜೊತೆ ಒಪ್ಪಂದವನ್ನು ಮಾಡಿಕೊಳ್ಳಲಿದೆ ಎಂದು ಅಮೆರಿಕಾ ಸಂಸದರಿಗೆ ಬಿಡೆನ್ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಒಪ್ಪಂದದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಫ್ಘನ್‌ನಲ್ಲಿ ಅಮೆರಿಕದ ಭದ್ರತಾ ಕಾರ್ಯಾಚರಣೆ ಮುಂದುವರಿಯಲಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸರ್ಕಾರ ಸಂಸದರಿಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ಭಯೋತ್ಪಾದನೆ ವಿರುದ್ಧ ತಾನು ನಡೆಸುತ್ತಿರುವ ಕಾರ್ಯಾಚರಣೆಗೆ ಅಮೆರಿಕ ಸೇನೆಯ ನೆರವು ಪಡೆದುಕೊಂಡು, ಅದರ ಬದಲಾಗಿ ಅಮೆರಿಕಕ್ಕೆ ತನ್ನ ಸೇನಾ ನೆಲೆ ಬಿಟ್ಟುಕೊಡುವ ಬಗ್ಗೆ ಪಾಕಿಸ್ತಾನ ಕೂಡಾ ಒಲವು ಹೊಂದಿದೆ. ಆದರೆ ಈ ಬಗ್ಗೆ ಇನ್ನೂ ಒಪ್ಪಂದ ಆಗಿಲ್ಲ ಎನ್ನಲಾಗುತ್ತಿದೆ.

ಅಮೆರಿಕಾ ಜತೆ ಒಪ್ಪಂದ ಇಲ್ಲ : ಪಾಕಿಸ್ತಾನ!

ತಾಲಿಬಾನ್‌ ಆಡಳಿತವಿರುವ ಆಫ್ಘನ್‌ನಲ್ಲಿ ಅಮೆರಿಕದ ಗುಪ್ತಚರ ಕಾರ್ಯಾಚರಣೆಗಾಗಿ ತನ್ನ ವಾಯು ನೆಲೆಗಳನ್ನು ಬಿಟ್ಟುಕೊಡುವ ಕುರಿತ ಒಪ್ಪಂದದ ವರದಿಯನ್ನು ಪಾಕಿಸ್ತಾನ ಅಲ್ಲಗೆಳೆದಿದೆ. ಈ ಕುರಿತು ಶನಿವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರ ರೂಪದ ಹೇಳಿಕೆ ಬಿಡುಗಡೆ ಮಾಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ, ಆಫ್ಘನ್‌ ಸರ್ಕಾರದ ವಿರುದ್ಧ ಅಮೆರಿಕದ ಗುಪ್ತಚರ ಮತ್ತು ಸೇನಾ ಚಟುವಟಿಕೆಗಳಿಗೆ ತನ್ನ ವಾಯುಪಡೆ ಬಿಟ್ಟುಕೊಡುವ ಕುರಿತಾದ ಒಪ್ಪಂದ ಏರ್ಪಟ್ಟಿಲ್ಲ. ಈ ಕುರಿತ ವರದಿಗಳು ಸುಳ್ಳು. ಆದರೆ, ಪ್ರಾಂತೀಯ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಉಭಯ ದೇಶಗಳ ನಡುವೆ ಮಾತುಕತೆಗಳು ಮತ್ತು ಸಹಕಾರಗಳು ದೀರ್ಘಕಾಲದಿಂದ ಮುಂದುವರಿದುಕೊಂಡು ಬಂದಿವೆ ಎಂದು ಹೇಳಿದೆ.

ಒಪ್ಪಂದವಿಲ್ಲದೆ ಏರ್ ಕಾರಿಡಾರ್‌ಗೆ ಪ್ರವೇಶವಿಲ್ಲ! 

ಪ್ರಸ್ತುತ, ಪಾಕಿಸ್ತಾನದ ವಾಯುಪ್ರದೇಶವನ್ನು ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಗುಪ್ತಚರ ಕಾರ್ಯಾಚರಣೆಗಳಿಗಾಗಿ ಬಳಸುತ್ತಿವೆ. ಆದಾಗ್ಯೂ, ಅಮೆರಿಕಾಗೆ ಅಫ್ಘಾನಿಸ್ತಾನವನ್ನು ತಲುಪಲು ಅಗತ್ಯವಾದ ವಾಯನೆಲೆಯ ಮುಖ್ಯ ಏರ್ ಕಾರಿಡಾರ್‌ಗೆ ಪ್ರವೇಶ ಪಡೆಯಲು ಪಾಕಿಸ್ತಾನದ ಜತೆ  ಒಪ್ಪಂದದ ಅಗತ್ಯವಿದೆ. ಅಫ್ಘಾನ್‌ನಲ್ಲಿರುವ ಉಳಿದ ಅಮೆರಿಕರನ್ನು ಸ್ಥಳಾಂತರಿಸಲು  ಕಾಬೂಲ್‌ಗೆ ತೆರಳುವ  ತನ್ನ ವಿಮಾನಗಳನ್ನು ಅಮೆರಿಕಾ  ಪುನರಾರಂಭಿಸಿದಾಗ ಈ ಏರ್ ಕಾರಿಡಾರ್‌ (Air Corridor) ಅತ್ಯಂತ ನಿರ್ಣಾಯಕವಾಗಲಿದೆ.

ಬ್ರಿಟನ್‌ನಲ್ಲಿ ಕೊರೋನಾ ಹೊಸ ವೈರಸ್: ಒಂದೇ ದಿನ 52,000 ಕೇಸ್‌!

ಅಮೆರಿಕಾದ ಜತೆ ಒಪ್ಪಂದವಿಲ್ಲದೆ, ಅಫ್ಘಾನಿಸ್ತಾನದ ಕಡೆಗೆ ಚಲಿಸುವ ಅಮೆರಿಕಾದ ಮಿಲಿಟರಿ ವಿಮಾನ ಮತ್ತು ಡ್ರೋನ್‌ಗಳಿಗೆ ಪಾಕಿಸ್ತಾನ ಪ್ರವೇಶವನ್ನು ನಿರಾಕರಿಸುವ ಸಾಧ್ಯತೆಯನ್ನು ಇದೆ. ಅಫ್ಘಾನಿಸ್ತಾನದಿಂದ ಅಮೆರಿಕಾ ಪಡೆಗಳ ನಿರ್ಗಮನವು ಅಲ್ಲಿ ಅವರ 20 ವರ್ಷಗಳ ಸುದೀರ್ಘ ಮಿಲಿಟರಿ ಉಪಸ್ಥಿತಿಯನ್ನು ಕೊನೆಗೊಳಿಸಿತ್ತು. ಆಗಸ್ಟ್ 15 ರಂದು ಕಾಬೂಲ್‌ನಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್ ಎರಡನೇ ಬಾರಿಗೆ ರಾಷ್ಟ್ರವನ್ನು ಆಳುತ್ತಿದೆ.

Follow Us:
Download App:
  • android
  • ios