Asianet Suvarna News Asianet Suvarna News

ಇಂಡೋನೇಷ್ಯಾ ಅಧ್ಯಕ್ಷರ ಪುತ್ರಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ!

* ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಮುಂದಾದ ಸೊಕರ್ನೊ ಪುತ್ರಿ

* ಹಿಂದೂ ಧರ್ಮಕ್ಕೆ ಸೇರಲಿದ್ದಾರೆ ಇಂಡೋನೇಷ್ಯಾದ ಸುಕ್ಮಾವತಿ ಸೂಕರ್ಣಪುತ್ರಿ

* ಇಂಡೋನೇಷ್ಯಾದ ಐದನೇ ಅಧ್ಯಕ್ಷೆ ಮೇಗಾವತಿ ಸೂಕರ್ಣೋಪುತ್ರಿಯ ಸಹೋದರಿ ಈಕೆ

Indonesia founding president Sukarno daughter Sukmawati Sukarnoputri to convert to Hinduism from Islam pod
Author
Bangalore, First Published Oct 23, 2021, 5:42 PM IST
  • Facebook
  • Twitter
  • Whatsapp

ಜಕಾರ್ತ(ಅ.23) ಇಂಡೋನೇಷ್ಯಾದ(Indonesia) ಸುಕ್ಮಾವತಿ ಸೂಕರ್ಣಪುತ್ರಿ(Sukmawati Soekarnoputri) ಪ್ರಸಿದ್ಧರಾಗಿರುವ ದಿಯಾ ಮುತಿಯಾರಾ ಸುಕ್ಮಾವತೀ ಸೋಕರ್ಣೋಪುತ್ರೀ ತಮ್ಮ ಘೋಷಣೆಯೊಂದರ ಮೂಲಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಹೌದು ಸುಕ್ಮಾವತಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ಸುಕ್ಮಾವತಿ ಯಾರು? ಅವರಿಗೆ ಯಾಕಿಷ್ಟು ಮಹತ್ವ ನೀಡಲಾಗುತ್ತಿದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಹೀಗಿರುವಾಗ ಈಕೆ ಇಂಡೋನೇಷ್ಯಾದ ಸ್ಥಾಪಕ-ಅಧ್ಯಕ್ಷ ಸೊಕರ್ನೊ ಮತ್ತು ಅವರ 3 ನೇ ಪತ್ನಿ ಫಾತ್ಮವತಿಯವರ ಮಗಳು, ಅಲ್ಲದೇ ಇಂಡೋನೇಷ್ಯಾದ ಐದನೇ ಅಧ್ಯಕ್ಷೆ ಮೇಗಾವತಿ ಸೂಕರ್ಣೋಪುತ್ರಿಯ(Megawati Soekarnoputri) ಸಹೋದರಿ ಕೂಡಾ ಹೌದು.

ದಿವಂಗತ ಬಲಿನೀಸ್ ಅಜ್ಜಿ ಇಡಾ ಆಯು ನ್ಯೋಮನ್ ರೈ ಶ್ರೀಂಬೆನ್ (1881-1958) ಪ್ರಭಾವದಿಂದಾಗಿ 69 ವರ್ಷದ ಇಂಡೋನೇಷಿಯನ್ ನ್ಯಾಷನಲ್ ಪಾರ್ಟಿಯ (Partai Nasional Indonesia-PNI) ಸುಕ್ಮಾವತಿ  ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆನ್ನಲಾಗಿದೆ. "ಐಬು ಶ್ರೀಂಬೆನ್" 1887 ರಲ್ಲಿ ಜಾವಾನೀಸ್ ಶಿಕ್ಷಕ, ರಾಡೆನ್ ಸೂಕೆಮಿ ಸೊಸ್ರೊಡಿಹಾರ್ಡ್ಜೊ ಅವರನ್ನು ವಿವಾಹವಾದರು. 1901 ರಲ್ಲಿ ಜಾವಾದಲ್ಲಿ ಭವಿಷ್ಯದ ಅಧ್ಯಕ್ಷರಾದ ಸೂಕರ್ನೊಗೆ ಜನ್ಮ ನೀಡಿದರು.

ಇಸ್ಲಾಂಗೆ ಮತಾಂತರಗೊಳ್ಳಿ, ಇಲ್ಲಿವೇ ದೇಶ ಬಿಡಿ: ಸಿಖ್ಖರಿಗೆ ಧಮಕಿ!

ಅಕ್ಟೋಬರ್ 26ರಂದು ಸುಕ್ಮಾವತಿಯವರು ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ.  ಈ ನಿಟ್ಟಿನಲ್ಲಿ ಬಾಲಿ ಅಗುಂಗ್ ಸಿಂಗರಾಜದಲ್ಲಿ ಸುಧಿ ವಡಾನಿಯು ಹೆಸರಿನ ಹಿಂದೂ ಸಮಾರಂಭ ಆಯೋಜಿಸಲಾಗಿದ್ದು, ಇಲ್ಲೇ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ. ಉತ್ತರ ಬಾಲಿಯಲ್ಲಿರುವ ತನ್ನ ಅಜ್ಜಿಯ ಮನೆಯ ಬಳಿ ನಿರ್ಮಿಸಲಾದ ಆಕೆಯ ದಿವಂಗತ ತಂದೆಯ ಸ್ಮಾರಕವೂ ಇದೆ.

ಇನ್ನು ಮತಾಂತರ ಸಮಾರಂಭ ಆಯೀಜಿಸಲಾದ ದಿನದಂದು ಸುಕ್ಮಾವತಿ ತಮ್ಮ 70 ನೇ ಹುಟ್ಟುಹಬ್ಬವನ್ನೂ ಆಚರಿಸಲಿದ್ದಾರೆ. 

ಸುಕ್ಮಾವತಿಯವರ ವಕೀಲರಾದ ವಿಟಾರಿಯೊನೊ ರೆಜ್ಸೊಪ್ರೊಜೊ ಶುಕ್ರವಾರ, 22 ಅಕ್ಟೋಬರ್ 2021 ರಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡುತ್ತಾ, “ಹೌದು, ಬಂಗ್ ಕರ್ನೊನ ತಾಯಿ ಇದಾ ನ್ಯೋಮನ್ ಪ್ರಭಾವದಿಂದಾಗಿ ಅವರು ಮತಾಂತರಗೊಳ್ಳುತ್ತಿದ್ದಾರೆ. ಅವರೊಬ್ಬ ಉದಾತ್ತ ವ್ಯಕ್ತಿ ಎಂದಿದ್ದಾರೆ. ಇದೇ ವೇಳೆ ತನ್ನ ಕಕ್ಷಿದಾರರು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ. ಹಿಂದೂ ಧರ್ಮಶಾಸ್ತ್ರದ ವಿಷಯಗಳಲ್ಲಿ ಚೆನ್ನಾಗಿ ಓದಿದ್ದಾರೆ ಎಂದು ವಿಟರಿಯೊನೊ ಹೇಳಿದ್ದಾರೆ.

ಇನ್ನು ಸುಕ್ಮಾವತಿ ಔಪಚಾರಿಕವಾಗಿ ಮತಾಂತರಗೊಂಡ ಬಳಿಕ ಬಾಲಿಯಲ್ಲೇ ಶಾಶ್ವತವಾಗಿ ಉಳಿಯುತ್ತಾರಾ? ಇಲ್ಲವಾ ಎಂಬ ಪ್ರಶ್ನೆಗೆ ವಕೀಲರಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಕಳೆದ 19 ವರ್ಷಗಳಲ್ಲಿ, PNI ಮತ್ತು ದಿ ಸೋಕರ್ನೋ ಸೆಂಟರ್ ನಡೆಸಿದ ಅನೇಕ ಕಾರ್ಯಕ್ರಮಗಳಲ್ಲಿ ಸುಕ್ಮಾವತಿ ಸೂಕರ್ಣೋಪುತ್ರಿಯೊಂದಿಗೆ ಅವರು ಹೇಗೆ ಜೊತೆಗಿದ್ದರು ಎಂಬುದನ್ನು ವಕೀಲರು ವಿವರಿಸಿದ್ದಾರೆ. ಬಾಲಿಗೆ ನೀಡಿದ ಹಿಂದಿನ ಭೇಟಿ ವೇಳೆ, ಸುಕ್ಮಾವತಿ ಆಗಾಗ್ಗೆ ಹಿಂದೂ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ಹಿಂದೂ ಧಾರ್ಮಿಕ ವ್ಯಕ್ತಿಗಳೊಂದಿಗೆ ವಿಸ್ತೃತ ಚರ್ಚೆಗಳನ್ನು ನಡೆಸುತ್ತಿದ್ದರು.

'ಐ ವನ್' ಮದುವೆಯಾಗಿದ್ದು ಕೇಸರಿ ಹೆಣ್ಮಗಳನ್ನ: ಶ್ರೀ ರಾಜಶೇಖರಾನಂದ ಸ್ವಾಮೀಜಿ

Okezone.com ವರದಿಯನ್ವಯ ಸುಕ್ಮಾವತಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರಕ್ಕೆ ಆಕೆಯ ಸಹೋದರರು ಮತ್ತು ಸಹೋದರಿಯ ಮಾಜಿ ಅಧ್ಯಕ್ಷೆ ಮೇಗಾವತಿ ಸೂಕರ್ಣಪುತ್ರಿ, ಗುಂಟೂರು ಸೂಕರ್ಣಪುತ್ರ ಮತ್ತು ಗುರು ಸೂಕರ್ಣಪುತ್ರ ಒಪ್ಪಿಗೆ ಇದೆ ಎನ್ನಲಾಗಿದೆ.

ಈ ಮತಾಂತರವನ್ನು ಆಕೆಯ ಮಕ್ಕಳೂ ಒಪ್ಪಿಕೊಂಡಿದ್ದಾರೆ ಮತ್ತು ಒಪ್ಪಿಕೊಂಡಿದ್ದಾರೆ. ಹತ್ತು ವರ್ಷಗಳ ದಾಂಪತ್ಯದ ನಂತರ 1984 ರಲ್ಲಿ ರಾಜಕುಮಾರ ಮತ್ತು ಸುಕ್ಮಾವತಿ ವಿಚ್ಛೇದನ ಪಡೆದಿದ್ದರೆಂಬುವುದು ಉಲ್ಲೇಖನೀಯ. 

Follow Us:
Download App:
  • android
  • ios