ಸಲಿಂಗಿ ವಿವಾಹಕ್ಕೆ ಅಮೆರಿಕಾ ಸಂಸತ್ ಸಮ್ಮತಿ

ಅಮೆರಿಕಾದ ಸಂಸತ್‌ ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದೆ. 

US House Passes Same Sex Marriage Bill akb

ವಾಷಿಂಗ್ಟನ್: ಕೆಲ ದಿನಗಳ ಹಿಂದೆ ಗರ್ಭಪಾತದ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರ ತೀವ್ರ ವಿರೋಧದ ನಡುವೆಯೂ ಗರ್ಭಪಾತವನ್ನು ನಿಷೇಧಿಸುವ ಕಾಯಿದೆಯನ್ನು ಅಮೆರಿಕಾದಲ್ಲಿ ಜಾರಿಗೆ ತರಲಾಯಿತು. ಇದಾದ ಬಳಿಕ ಇಂತಹ ಹಲವು ಹಕ್ಕುಗಳಿಗೆ ಮುಂದೆ ಧಕ್ಕೆ ತರಬಹುದು ಎಂಬ ಕಳವಳ ವ್ಯಕ್ತವಾಗಿತ್ತು. ಈ ಆಶಾದಾಯಕ ಬೆಳವಣಿಗೆಯೊಂದರಲ್ಲಿ ಅಮೆರಿಕಾದ ಸಂಸತ್‌ ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದೆ. 

ಫೆಡರಲ್ ಕಾನೂನಿನಲ್ಲಿ ವಿವಾಹ ಸಮಾನತೆಯನ್ನು ಪ್ರತಿಪಾದಿಸುವ ಪರವಾಗಿ ಡೆಮೋಕ್ರಾಟ್‌ ಪಕ್ಷದ ಸಂಸದರು ತೀವ್ರವಾಗಿ ಮತ್ತು ವೈಯಕ್ತಿಕವಾಗಿ ಸಲಿಂಗ ವಿವಾಹದ ಪರ ವಾದಿಸಿದರು. ಆದರೆ ರಿಪಬ್ಲಿಕನ್ನರು ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವುದನ್ನು ತಿರಸ್ಕರಿಸಿದರು ಜೊತೆಗೆ ರಿಪಬ್ಲಿಕನ್ನರು ರಾಷ್ಟ್ರ ಎದುರಿಸುತ್ತಿರುವ ಇತರ ಪ್ರಮುಖ ಸಮಸ್ಯೆಗಳ ನಡುವೆ ಈ ಮಸೂದೆ ಅನಗತ್ಯವೆಂದು ಬಿಂಬಿಸಲು ಯತ್ನಿಸಿದರು.

5 ನಿಮಿಷದ ವಿಚಾರಣೆ: ಪೋಷಕರು ಬೇರ್ಪಡಿಸಿದ ಸಲಿಂಗಿ ಜೋಡಿಯ ಒಂದು ಮಾಡಿದ ಕೇರಳ ಹೈಕೋರ್ಟ್‌

ಆದಾಗ್ಯೂ ಸಲಿಂಗಿ ವಿವಾಹಕ್ಕೆ ಹಾಗೂ ಅಂತರ್‌ಜಾತಿಯ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವ ಈ ಕಾಯಿದೆಗೆ ಒಟ್ಟು ಡೆಮಾಕ್ರಟಿಕ್‌ ಪಕ್ಷದ ಸಂಸದರಲ್ಲದೇ 47 ರಿಪಬ್ಲಿಕನ್‌ ಸಂಸದರೂ ಕೂಡ ಮತ ಚಲಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಮೊಂಡೈರ್ ಜೋನ್ಸ್ ತಾನೊಬ್ಬ ಸಲಿಂಗಿಯಾಗಿದ್ದು, ಇದು ನನಗೆ ವೈಯಕ್ತಿಕವಾಗಿ ಖುಷಿ ನೀಡುವ ವಿಚಾರವಗಿದೆ ಎಂದು ಹೇಳಿದ್ದಾರೆ. ಸಲಿಂಗಿಗಳ ಮದುವೆಯ ಹಕ್ಕನ್ನು ಎತ್ತಿ ಹಿಡಿಯುವ 'ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್'ನ್ನು ಸುಲಭವಾಗಿ ಡೆಮಾಕ್ರಟಿಕ್ ಬಹುಮತದೊಂದಿಗೆ ಅಮೆರಿಕ ಸಂಸತ್‌ನಲ್ಲಿ ಅಂಗೀಕರಿಸಲ್ಪಟ್ಟಿದೆ. ಈ ಬಗ್ಗೆ ಮಾತನಾಡಿದ ಇನ್ನೊಬ್ಬ ರಿಪಬ್ಲಿಕನ್, ದಕ್ಷಿಣ ಕೆರೊಲಿನಾದ ಪ್ರತಿನಿಧಿ ನ್ಯಾನ್ಸಿ ಮೇಸ್ ಅವರು ಸಲಿಂಗಕಾಮಿ ದಂಪತಿಗಳು ಇತರರಂತೆ ಸಂತೋಷದಿಂದ  ಮದುವೆಯಾಗಲು ಬಯಸಿದರೆ ಅವರಿಗೆ  ಇದು ಹೆಚ್ಚಿನ ಶಕ್ತಿ ನೀಡುತ್ತದೆ ಎಂದರು. 

ಇತ್ತ ಅಮೆರಿಕಾ ಸಂಸತ್‌ನಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಸಮ್ಮತಿ ಸಿಗುತ್ತಿದ್ದಂತೆ ರಾಷ್ಟ್ರದ ಅತಿದೊಡ್ಡ ಸಲಿಂಗಕಾಮಿ ನಾಗರಿಕ ಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ಕ್ಯಾಂಪೇನ್ (HRC) ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮದುವೆಯ ಗೌರವ ಕಾಯಿದೆಯ ಉಭಯಪಕ್ಷೀಯ ಅಂಗೀಕಾರಕ್ಕೆ ಸಂಭ್ರಮಾಚರಣೆ ನಡೆಸಿತು. ಈ ವರ್ಷ ನಡೆದ PRRI ಯ ಇತ್ತೀಚಿನ ಸಮೀಕ್ಷೆಯು ಹತ್ತು ಅಮೆರಿಕನ್ನರಲ್ಲಿ ಏಳು (68%) ಮಂದಿ ಸಲಿಂಗಿಗಳಿಗೆ ಬೆಂಬಲವನ್ನು ಸೂಚಿಸಿದ್ದಾರೆ. ಇದು ಮದುವೆಯ ಸಮಾನತೆಯನ್ನು ಸಾಬೀತುಪಡಿಸುತ್ತದೆ. ಇದು ಹಿಂತೆಗೆದುಕೊಳ್ಳಲಾಗದ ಮತ್ತು ರಕ್ಷಿಸಬೇಕಾದ ಮೂಲಭೂತ ಹಕ್ಕು ಎಂದು ಜನ ಹೇಳುತ್ತಾರೆ.

2014ಕ್ಕೆ (54%) ಹೋಲಿಸಿದರೆ ಶೇಕಡಾ 14  ಸಲಿಂಗ ವಿವಾಹಕ್ಕೆ ಬೆಂಬಲ ಹೆಚ್ಚಾಗಿದೆ. ಈ ವಿಚಾರದಲ್ಲಿ ರಿಪಬ್ಲಿಕನ್‌ ಸಂಸದರ ನಡುವೆ ಅರ್ಧಕರ್ದಷ್ಟು ಜನ ವಿರೋಧ ಹಾಗೂ ಪರವಾಗಿ ಇದ್ದಾರೆ. ಶೇಕಡಾ 48% ಜನ ಬೆಂಬಲ ವ್ಯಕ್ತಪಡಿಸಿದರೆ ಶೇಕಡಾ 50% ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ 81% ಶೇಕಡಾ ಡೆಮೋಕ್ರಾಟ್ ಸಂಸದರು ಹಾಗೂ ಶೇಕಡಾ 73% ಸ್ವತಂತ್ರ ಸಂಸದರು ಈ ವಿವಾಹ ಕಾಯಿದೆಗೆ ಬಂಬಲ ವ್ಯಕ್ತಪಡಿಸಿದ್ದಾರೆ. 

ಸಲಿಂಗಿ ದಾಂಪತ್ಯಕ್ಕೆ ಕಾಲಿಟ್ಟ ಇಂಗ್ಲೆಂಡ್‌ ಕ್ರಿಕೆಟ್ ಆಟಗಾರ್ತಿ ನಥಾಲಿ ಶೀವರ್‌-ಕ್ಯಾಥರೀನ್ ಬ್ರಂಟ್‌

ಬಹುಪಾಲು ಅಮೆರಿಕನ್ನರು ಲಿಂಗ, ಲಿಂಗ, ಜನಾಂಗ ಅಥವಾ ಜನಾಂಗೀಯತೆಯನ್ನು ಲೆಕ್ಕಿಸದೆ ಮದುವೆಯಾಗುವ ಹಕ್ಕುಗಳನ್ನು ಸಂರಕ್ಷಿಸಲು ಒಲವು ತೋರುತ್ತಿದ್ದಾರೆ. ಹೀಗಾಗಿ ಅಮೆರಿಕಾ ಸಂಸತ್‌ನಲ್ಲಿ ಸಲಿಂಗಿ ವಿವಾಹಕ್ಕೆ ಅನುಮತಿ ನೀಡುವ ಕಾಯಿದೆ ಸಂಖ್ಯೆ 267-157 ಚುನಾವಣಾ ಪೂರ್ವದ ರಾಜಕೀಯ ತಂತ್ರಗಾರಿಕೆ ಎಂಬ ಮಾತು ಕೇಳಿ ಬರುತ್ತಿದೆ. 

Latest Videos
Follow Us:
Download App:
  • android
  • ios