Asianet Suvarna News Asianet Suvarna News

ಅತ್ತಿದ್ದಕ್ಕೆ ಮಹಿಳೆಗೆ 3100 ದಂಡ ವಿಧಿಸಿದ ಆಸ್ಪತ್ರೆ

  • ಅತ್ತಿದ್ದಕ್ಕೆ ಮಹಿಳೆಯೊಬ್ಬರಿಗೆ 3,100 ದಂಡ ವಿಧಿಸಿದ ಆಸ್ಪತ್ರೆ
  • ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡ ಮಹಿಳೆ
  • ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ಘಟನೆ
US hospital charges woman Rs 3100 for crying during medical tests akb
Author
Bangalore, First Published May 19, 2022, 4:43 PM IST

ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆಗೆ (medical tests) ಶುಲ್ಕ ವಿಧಿಸುವುದು ಸಾಮಾನ್ಯ. ಆದರೆ ಅತ್ತಿದ್ದಕ್ಕೆ ನಕ್ಕಿದ್ದಕ್ಕೆ ಎಲ್ಲಾದರು ಶುಲ್ಕ ವಿಧಿಸಿದ್ದನ್ನು ಕೇಳಿದ್ದೀರಾ. ಇಲ್ಲವೆಂದಾದರೆ ಅಮೆರಿಕಾದಲ್ಲಿ (US) ಅಂತಹ ಘಟನೆಯೊಂದು ಕೂಡ ನಡೆದಿದೆ. ತಪಾಸಣೆ ವೇಳೆ ಭಾವುಕಳಾಗಿದ್ದಕ್ಕೆ ಮಹಿಳೆಗೆ ಶುಲ್ಕ ವಿಧಿಸಿದ್ದಾರೆ. ಆಸ್ಪತ್ರೆಯೊಂದು ಅತ್ತ ಕಾರಣಕ್ಕೆ ಮಹಿಳೆಯೊಬ್ಬರಿಗೆ 3,100 ದಂಡ ವಿಧಿಸಿದ ಘಟನೆ ಅಮೆರಿಕಾದ ಆಸ್ಪತ್ರೆಯಲ್ಲಿ ನಡೆದಿದೆ. ಅಮೆರಿಕಾದ ಮಹಿಳೆಯೊಬ್ಬರು ಈ ಆರೋಪ ಮಾಡಿದ್ದಾರೆ. ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆಹೋಗಿದ್ದ ವೇಳೆ ಅತ್ತಿದ್ದಕ್ಕೆ ತನ್ನ ಸಹೋದರಿಗೆ ಆಸ್ಪತ್ರೆ 40 ಡಾಲರ್ ಅಂದರೆ 3,100 ದಂಡ ವಿಧಿಸಿದೆ ಎಂದು ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. 

ಕಮಿಲ್ಲೆ ಜಾನ್ಸನ್‌ (Camille Johnson) ಅವರು ಆಸ್ಪತ್ರೆ ಶುಲ್ಕದ ರಶೀದಿಯನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮಹಿಳೆಗೆ ಮಾಡಿದ ಹಲವು ತಪಾಸಣೆಗಳ ಪಟ್ಟಿ ಇದೆ. ಆ ಶುಲ್ಕದ ಪಟ್ಟಿಯಲ್ಲಿ ತುಂಬಾ ಇಮೋಷನಲ್ ಬಿಹೇವಿಯರ್ ಎಂದು 40 ಡಾಲರ್ ದಂಡ ವಿಧಿಸಿದ್ದಾರೆ. ನನ್ನ ಸಹೋದರಿ ನಿಜವಾಗಿಯೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಹಾಗೂ ಕೊನೆಗೂ ನಿಧಾನವಾಗಿ ವೈದ್ಯರನ್ನು ಭೇಟಿಯಾಗಲು ನಿರ್ಧರಿಸಿದಳು. ಈ ವೇಳೆ ವೈದ್ಯರು ಆಕೆಗೆ ಅತ್ತಿದ್ದಕ್ಕೆ 40 ಡಾಲರ್ ಶುಲ್ಕ ವಿಧಿಸಿದ್ದರು ಎಂದು ಜಾನ್ಸನ್‌ ಟ್ವಿಟ್‌ನಲ್ಲಿ ಬರೆದುಕೊಂಡಿದ್ದಾರೆ. 
ಆಕೆ ತುಂಬಾ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಳು ಹಾಗೂ ಕಾಳಜಿಗಾಗಿ ಹೋರಾಡುತ್ತಿದ್ದಳು. ಆಕೆ ಹತಾಶೆ ಮತ್ತು ಅಸಹಾಯಕತೆಯ ಕಾರಣದಿಂದ ಭಾವುಕಳಾಗಿದ್ದಳು. ಅಲ್ಲದೇ ಕಣ್ಣೀರಿಟ್ಟ ಆಕೆಗೆ ಯಾವ ಕಾರಣಕ್ಕೆ ಅಳುತ್ತಿದ್ದೀಯಾ ಎಂಬುದನ್ನು ಕೂಡ ವಿಚಾರಿಸದೇ. ಆಕೆಗೆ ಸಹಾಯ ಮಾಡಲು ಪ್ರಯತ್ನಿಸದೇ ಆಕೆಗೆ 40 ಡಾಲರ್ ದಂಡ ವಿಧಿಸಿದರು. 

ಅವರು ದೃಷ್ಟಿ ಮೌಲ್ಯಮಾಪನ ಪರೀಕ್ಷೆಗೆ ವಿಧಿಸಿದ ಶುಲ್ಕಕ್ಕಿಂತ ಹೆಚ್ಚು, ಹಿಮೋಗ್ಲೋಬಿನ್ ಪರೀಕ್ಷೆಗೆ ಪಡೆಯುವ ಶುಲ್ಕಕ್ಕಿಂತ ಹೆಚ್ಚು, ಆರೋಗ್ಯದ ಅಪಾಯದ ಬಗ್ಗೆ ಮೌಲ್ಯಮಾಪನಕ್ಕೆ ಪಡೆಯುವ ಶುಲ್ಕಕ್ಕಿಂತ ಹೆಚ್ಚು ಅಳುವುದಕ್ಕೆ ಅವಳಿಗೆ ಶುಲ್ಕ ವಿಧಿಸಿದರು. ಇದಕ್ಕೆ ನೆಟ್ಟಿಗರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಇದು ನಿಜವಾಗಿಯೂ ಹಾಸ್ಯಾಸ್ಪದ, ಅವರು 40 ಡಾಲರ್ ಪಡೆದರು ಮಾಡಿದ್ದು ಮಾತ್ರ ಏನೂ ಇಲ್ಲ ಇದು ನಿಜವಾಗಿಯೂ ವಿಚಿತ್ರ ಎಂದು ಕೆಲ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 

RIP chetana raj ಈ ರೀತಿಯ ಸರ್ಜರಿ ಯಾರೂ ಮಾಡಿಸಿಕೊಳ್ಳಬೇಡಿ, ಸಾವಿಗೀಡಾದ ಚೇತನಾ ಸ್ನೇಹಿತನ ಮನವಿ!

ಅವರಿಗೆ ಯಾವುದೇ ಸಹಾನುಭೂತಿ ಇಲ್ಲ. ನೀವು ಈ ಬಿಲ್ ಬಗ್ಗೆ ಅವರಲ್ಲಿ ಕೇಳಬೇಕಿತ್ತು ಎಂದು ಓರ್ವರು ಸಲಹೆ ನೀಡಿದ್ದಾರೆ. ಮಹಿಳೆಗೆ ಅತ್ತಿದ್ದಕ್ಕೆ ಶುಲ್ಕ ವಿಧಿಸಿಲ್ಲ, ತುಂಬಾ ಭಾವುಕಳಾಗಿದ್ದಕ್ಕೆ ಶುಲ್ಕ ವಿಧಿಸಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆರೋಗ್ಯ ಸೇವೆ ಒದಗಿಸುವವರು ಮೌಲ್ಯಮಾಪನದ ಸಮಯದಲ್ಲಿ ರೋಗಿಯ ಮಾನಸಿಕ ಸ್ಥಿತಿಯ ಬಗ್ಗೆ ಕೆಲವು ವಾಡಿಕೆಯ ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವು ವೈದ್ಯರು ನಿಜವಾಗಿಯೂ ಮೌಲ್ಯಮಾಪನ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು ಬಯಸುತ್ತಾರೆ. ಇತರರು ಶುಲ್ಕ ಪಡೆಯುವುದಕ್ಕಷ್ಟೇ ಮೀಸಲಾಗಿರುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಅಮೆರಿಕಾದಲ್ಲಿ ವೈದ್ಯರು ಇದೇ ರೀತಿ ಹೆಚ್ಚುವರಿ ಶುಲ್ಕ ಪಡೆಯುತ್ತಾರೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.

Vijayapura: ಸಿಜೇರಿಯನ್‌ ಹೊಲಿಗೆ ಬಿಚ್ಚಿ ಬಾಣಂತಿಯರ ನರಳಾಟ, ಆಸ್ಪತ್ರೆಗೆ ಡಿಸಿ ಭೇಟಿ

Follow Us:
Download App:
  • android
  • ios