ವಾಷಿಂಗ್ಟನ್‌(ಮೇ.30): ಕೊರೋನಾ ವೈರಸ್‌ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಚೀನಾ ಪರ ಪಕ್ಷಪಾತ ಮಾಡುತ್ತಿದೆ ಎಂದು ನಿರಂತರವಾಗಿ ದೂರಿಕೊಂಡು ಬಂದಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಡಬ್ಲ್ಯುಎಚ್‌ಒ ಜತೆಗಿನ ಸಂಬಂಧವನ್ನು ಅಮೆರಿಕ ಕಡಿದುಕೊಂಡಿದೆ ಎಂದು ಘೋಷಿಸಿದ್ದಾರೆ.

ಪ್ರತಿ ವರ್ಷ ಡಬ್ಲ್ಯುಎಚ್‌ಒಗೆ ಚೀನಾ 300 ಕೋಟಿ ರು. ನೀಡುತ್ತಿದೆ. ಆದರೆ ನಾವು 3000 ಕೋಟಿ ರು. ನೀಡುತ್ತಿದ್ದೇವೆ. ಆದಾಗ್ಯೂ ಡಬ್ಲ್ಯುಎಚ್‌ಒ ಮೇಲೆ ಚೀನಾ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಅವರು ಶುಕ್ರವಾರ ಕಿಡಿಕಾರಿದರು. ಡಬ್ಲ್ಯುಎಚ್‌ಗೆ ನೀಡುವ ಹಣವನ್ನು ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಇತರೆ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಹೇಳಿದರು.

ಕೊರೋನಾಗೆ ಅಂತ್ಯ ಹಾಡಿದ ನ್ಯೂಜಿಲೆಂಡ್; ವೈರಸ್ ಮುಕ್ತ ಮೊದಲ ದೇಶ !

ಕೊರೋನಾ ವೈರಸ್‌ ಹರಡುವಿಕೆಯನ್ನು ಆರಂಭೀಕ ಹಂತದಲ್ಲೇ ತಡೆಯಲು ವಿಫಲವಾಗಿದೆ ಎಂಬ ಕಾರಣ ನೀಡಿ ಡಬ್ಲ್ಯುಎಚ್‌ಒ ವಿರುದ್ಧ ಟ್ರಂಪ್‌ ಕಿಡಿಕಾರುತ್ತಲೇ ಬಂದಿದ್ದಾರೆ. ಅಲ್ಲದೇ ಆ ಸಂಸ್ಥೆಯನ್ನು ಚೀನಾದ ತುತ್ತೂರಿ ಎಂದು ದೂಷಿಸಿ, ಈಗಾಗಲೇ ಅನುದಾನವನ್ನು ಸ್ಥಗಿತಗೊಳಿಸಿದ್ದಾರೆ.

ಚೀನಾ ವಿರುದ್ಧವೂ ಗುಡುಗು:

ಹಾಂಕಾಂಗ್‌ಗೆ ಅಮೆರಿಕ ಈವರೆಗೆ ನೀಡಿಕೊಂಡು ಬಂದಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಿದೆ. ಚೀನಾ ರೀತಿಯೇ ಅದನ್ನೂ ಕಾಣಲಿದೆ. ಅಮೆರಿಕ ವಿವಿ ಹಾಗೂ ಕಾಲೇಜುಗಳಲ್ಲಿ ಕೆಲ ಚೀನಾ ವಿದ್ಯಾರ್ಥಿಗಳ ಪ್ರವೇಶಕ್ಕೆ ತಡೆಯೊಡ್ಡಲಾಗುತ್ತದೆ ಎಂದು ಹೇಳಿದ್ದಾರೆ.