ವಾಷಿಂಗ್ಟನ್‌ (ಅ.31): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ವಾಣಿಜ್ಯಿಕ ಅಂಗಸಂಸ್ಥೆಯಾದ ‘ಆ್ಯಂಟ್ರಿಕ್ಸ್‌’ಗೆ ಅಮರಿಕ ನ್ಯಾಯಾಲಯವೊಂದು 1.2 ಶತಕೋಟಿ ಡಾಲರ್‌ (9000 ಕೋಟಿ ರು.) ದಂಡ ವಿಧಿಸಿದೆ. ಈ ದಂಡದ ಮೊತ್ತವನ್ನು ಬೆಂಗಳೂರು ಮೂಲದ ಸ್ಟಾರ್ಟಪ್‌ ಕಂಪನಿಯಾದ ದೇವಾಸ್‌ ಮಲ್ಟಿಮೀಡಿಯಾಗೆ ಪರಿಹಾರ ರೂಪದಲ್ಲಿ ನೀಡುವಂತೆ ಆದೇಶಿಸಿದೆ.

ಇಸ್ರೋ ಕಳುಹಿಸಿದ್ದ ರೋವರ್ ಸುರಕ್ಷಿತ ರೀತಿಯಲ್ಲಿ ಪತ್ತೆ

2005ರಲ್ಲಿ ಆ್ಯಂಟ್ರಿಕ್ಸ್‌ ಕಾರ್ಪೋರೆಷನ್‌, ಬೆಂಗಳೂರಿನ ದೇವಾಸ್‌ ಮಲ್ಟಿಮೀಡಿಯಾಗೆ 2 ಉಪಗ್ರಹ ಸಿದ್ಧಪಡಿಸಿ ಹಾರಿಸುವ ಹಾಗೂ 70 ಮೆಗಾ ಹಟ್ಸ್‌ರ್‍ ಎಸ್‌ ಬ್ಯಾಂಡ್‌ ಹಂಚಿಕೆ ಮಾಡುವ ಒಪ್ಪಂದ ಮಾಡಿಕೊಂಡಿತ್ತು. ಆದರೆ 2011ರಲ್ಲಿ ಒಪ್ಪಂದ ಮುರಿದುಕೊಂಡಿತ್ತು.

ಇದರ ವಿರುದ್ಧ ದೇವಾಸ್‌, ಭಾರತದ ಸುಪ್ರೀಂ ಕೋರ್ಟ್‌ ಹಾಗೂ ಅಮೆರಿಕ ಕೋರ್ಟ್‌ ಜಿಲ್ಲಾ ಕೋರ್ಟ್‌ ಮೊರೆ ಹೋಗಿತ್ತು. ಭಾರತದ ಸುಪ್ರೀಂ ಕೋರ್ಟ್‌ ಇದಕ್ಕಾಗಿ ನ್ಯಾಯಾಧಿಕರಣವನ್ನೂ ರಚಿಸಿತ್ತು. ಈ ನಡುವೆ, ಪ್ರಕರಣವು ಅಮೆರಿಕ ವ್ಯಾಪ್ತಿಗೆ ಬರದು ಎಂದು ಆ್ಯಂಟ್ರಿಕ್ಸ್‌ ವಾದಿಸಿತ್ತಾದರೂ, ಅದರ ವಾದ ತಳ್ಳಿ ಹಾಕಿದ ಕೋರ್ಟು, ಆ್ಯಂಟ್ರಿಕ್ಸ್‌ಗೆ ದಂಡ ಹಾಕಿದೆ.