ಆಕಸ್ಮಿಕವಾಗಿ ವಿಮಾನದಲ್ಲಿ ಮದುವೆಯಾದ ಜೋಡಿ ಜೋಡಿಯ ಆಸೆ ಈಡೇರಿಸಿದ ಫ್ಲೈಟ್ ಕ್ಯಾಪ್ಟನ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಇತ್ತೀಚೆಗೆ ವಿಭಿನ್ನವಾಗಿ ಮದುವೆಯಾಗುವುದು ಒಂದು ಟ್ರೆಂಡ್ ಎನಿಸಿದೆ. ಪ್ರತಿಯೊಬ್ಬರು ತಮ್ಮ ಮದುವೆ ಬೇರೆಯವರ ಮದುವೆಗಿಂತ ವಿಭಿನ್ನವಾಗಿರಬೇಕು ಎಂದು ಏನೇನೋ ಸಾಹಸಗಳನ್ನು ಮಾಡುತ್ತಿರುತ್ತಾರೆ. ಹಡಗಿನಲ್ಲಿ ನೀರಿನ ಮೇಲೆ ಮದುವೆಯಾಗುವುದು ಮದುವೆ ಮಂಟಪಕ್ಕೆ ಜೆಸಿಬಿ ಮೇಲೆ ಟ್ರಾಕ್ಟರ್‌ ಮೇಲೆ ಬರುವುದು ಇಂತಹ ಹಲವು ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಆದರೆ ಅಮೆರಿಕಾದ ಜೋಡಿಯೊಂದು ನಿರೀಕ್ಷಿಸದೆಯೇ ಫ್ಲೈಟ್‌ನಲ್ಲಿ ಮದುವೆಯಾಗಿದ್ದಾರೆ. ಕಮರ್ಷಿಯಲ್ ಫ್ಲೈಟ್‌ನಲ್ಲಿ ಮದುವೆಯಾಗುವ ಮೂಲಕ ತಮ್ಮ ಮದುವೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. 

ಸುದ್ದಿ ಸಂಸ್ಥೆ CNN ಪ್ರಕಾರ, ಪಾಮ್ ಪ್ಯಾಟರ್ಸನ್ (Pam Patterson) ಮತ್ತು ಜೆರೆಮಿ ಸಲ್ಡಾ (Jeremy Salda) ಅವರು ಆಗಸ್ಟ್ 2020 ರಿಂದ ಡೇಟಿಂಗ್ ನಡೆಸುತ್ತಿದ್ದರು. ಈ ತಿಂಗಳ ಆರಂಭದಲ್ಲಿ, ಕೆಲವು ಏರ್‌ಲೈನ್‌ಗಳಲ್ಲಿ ಮಾಸ್ಕ್‌ ಕಡ್ಡಾಯ ಎಂಬ ಆದೇಶವನ್ನು ತೆಗೆದು ಹಾಕಲಾಗಿದೆ ಎಂಬ ಸುದ್ದಿಯನ್ನು ಅವರು ಕೇಳಿದಾಗ, ಅವರು ಲಾಸ್ ವೇಗಾಸ್‌ಗೆ ಓಡಿಹೋಗುವ ಬಗ್ಗೆ ತಮಾಷೆ ಮಾಡಿಕೊಂಡಿದ್ದರು. ಅಲ್ಲದೇ ಅವರು ಆಗಸ್ಟ್‌ನಲ್ಲಿ ಮೆಕ್ಸಿಕೋದಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಅವರು ಭಾನುವಾರಕ್ಕೆ ಲಾಸ್‌ ವೇಗಾಸ್‌ಗೆ ತೆರಳಲು ವಿಮಾನವನ್ನು ಬುಕ್‌ ಮಾಡಿದ್ದರಿಂದ ಅವರ ತಮಾಷೆ ಶೀಘ್ರದಲ್ಲೇ ಗಂಭೀರವಾಯಿತು.

Bengaluru Crime: ವಿಮಾನದಲ್ಲಿ ಬೆಂಗ್ಳೂರಿಗೆ ಬಂದು ಕಳ್ಳತನ: ನಾಲ್ವರ ಬಂಧನ

ಸುಮಾರು ಒಂದೂವರೆ ಗಂಟೆಯೊಳಗೆ, ನಾವು ನಮ್ಮ ವಿಮಾನಗಳು ಮತ್ತು ಹೋಟೆಲ್ ಅನ್ನು ಬುಕ್ ಮಾಡಿದ್ದೇವೆ ಎಂದು ಸಾಲ್ಡಾ ಸಿಎನ್‌ಎನ್‌ಗೆ ತಿಳಿಸಿದ್ದಾರೆ. ಆದಾಗ್ಯೂ, ಈ ಲವ್‌ಬರ್ಡ್‌ಗಳು ಡಲ್ಲಾಸ್ ಫೋರ್ಟ್ ವರ್ತ್ ವಿಮಾನ (Dallas Fort Worth Airport) ನಿಲ್ದಾಣಕ್ಕೆ ಆಗಮಿಸಿದಾಗ ಅವರಿಗೆ ಅಲ್ಲಿ ಆಘಾತ ಕಾದಿತ್ತು. ಅವರು ಅಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದರು. ವೇಗಾಸ್‌ಗೆ ಅವರು ಬುಕ್‌ ಮಾಡಿದ್ದ ವಿಮಾನದ ಟಿಕೆಟ್‌ ರದ್ದುಗೊಂಡಿತ್ತು. ಹೀಗಾಗಿ ಟರ್ಮಿನಲ್‌ನಲ್ಲಿ ನಿಂತು ಕಾಯುತ್ತಿದ್ದಾಗ ಅಲ್ಲಿದ್ದ ಓರ್ವ ಪ್ರಯಾಣಿಕ ಹಾಗೂ ಧರ್ಮ ಪುರೋಹಿತ ಈ ಜೋಡಿಯ ಕಷ್ಟವನ್ನು ಕೇಳಿದರು. ಅಲ್ಲದೇ ಈ ಜೋಡಿಗೆ ತಾವೇ ಮುಂದೆ ನಿಂತು ಮದುವೆ ಮಾಡಿಸುವುದಾಗಿ ಹೇಳಿದರು.

Scroll to load tweet…
Scroll to load tweet…

ಇದಾದ ಬಳಿಕ ಓಕ್ಲಹೋಮಾ (Oklahoma) ಮೂಲದ ಈ ಜೋಡಿ ಹಾಗೂ ಧರ್ಮಗುರು, ಲಾಸ್‌ ವೇಗಾಸ್‌ಗೆ ಮೂರು ಟಿಕೆಟ್‌ಗಳನ್ನು ಖರೀದಿಸಿದರು. ನಂತರ ಈ ಜೋಡಿ ಇಡೀ ದಿನ ತಮ್ಮ ಮದುವೆಯ ಉಡುಪಿನಲ್ಲಿ ಪ್ರಯಾಣಿಸಲು ನಿರ್ಧಿರಿಸಿದರು. ಹೀಗಾಗಿ ಅವರು ವಿಮಾನವನ್ನು ಹತ್ತಿದಾಗ, ಪೈಲಟ್ ಮದುವೆಯ ಡ್ರೆಸ್ ಅನ್ನು ಗಮನಿಸಿ ಅದರ ಬಗ್ಗೆ ಪ್ಯಾಟರ್ಸನ್ ಅವರನ್ನು ಕೇಳಿದ್ದಾರೆ. ಈ ವೇಳೆ ಜೋಡಿ ತಮಗೆ ವಿಮಾನದಲ್ಲಿ ಮದುವೆಯಾಗುವ ಆಸೆ ಇದೆ ಎಂದು ವಿಮಾನದ ಕ್ಯಾಪ್ಟನ್‌ನೊಂದಿಗೆ ತಮಾಷೆಗೆಂದು ಹೇಳಿದರು. ಆದರೆ ಇದಕ್ಕೆ ಕ್ಯಾಪ್ಟನ್ ಸರಿ ನಾವು ಅದನ್ನು ಮಾಡೋಣ ಎಂದಿದ್ದಾರೆ ಇದರಿಂದ ಅವರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿದೆ.

ತಾಳ್ಮೆ ಕಳೆದುಕೊಂಡ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್: ಸಹ ಪ್ರಯಾಣಿಕನಿಗೆ ಸಖತ್ ಪಂಚ್‌ 

ನಂತರ ಇಡೀ ವಿಮಾನ ಸಿಬ್ಬಂದಿ ಈ ಜೋಡಿ ಮದುವೆಯಾಗಲು ಸಹಾಯ ಮಾಡಿದರು. ಟಾಯ್ಲೆಟ್ ಪೇಪರ್‌ಗಳನ್ನು ಅಲಂಕಾರಿ ವಸ್ತುವಿನಂತೆ ನೇತು ಹಾಕಿದರು. ಅಲ್ಲದೇ ಧರ್ಮಗುರುವಿಗೆ ಸ್ನ್ಯಾಕ್ ನೀಡಿದರು. ನಂತರ ತಾತ್ಕಾಲಿಕ ಅತಿಥಿ ಪುಸ್ತಕವಾಗಿ ಸಹಿ ಮಾಡಲು ಪ್ರಯಾಣಿಕರಿಗೆ ಹಳೆಯ ನೋಟ್‌ಬುಕ್ ಅನ್ನು ಕ್ಯಾಬಿನ್ ಸುತ್ತಲೂ ರವಾನಿಸಿದರು. ಜೊತೆಗೆ ಒಬ್ಬ ಫ್ಲೈಟ್ ಅಟೆಂಡೆಂಟ್ ವಧುವಿನ ಗೌರವಾನ್ವಿತ ಸೇವಕಿಯಾಗಿ ನಿಂತಿದ್ದಳು ಮತ್ತು ಅಧಿಕೃತ ಮದುವೆಯ ಫೋಟೋಗಳನ್ನು ತೆಗೆದುಕೊಳ್ಳಲು ಒಬ್ಬ ಕ್ಯಾಮರಾಮೆನ್‌ ವಿಮಾನದಲ್ಲಿದ್ದ. 

ಇದೆಲ್ಲವೂ ಹೇಗೆ ನಡೆಯಿತು ಎಂಬುದೇ ವಿಚಿತ್ರವಾಗಿದೆ ಎಂದು ವರ ಪ್ಯಾಟರ್ಸನ್ ಹೇಳಿದ್ದಾನೆ. ನಂತರ ಈ ನವ ವಿವಾಹಿತರು ತಮ್ಮ ಮದುವೆಯನ್ನು ಆಚರಿಸಲು ವೆಗಾಸ್‌ನಲ್ಲಿ ಹೆಚ್ಚುವರಿ ದಿನವನ್ನು ಕಳೆದಿದ್ದಾರೆ. ಅಲ್ಲದೇ ಅವರು ಆಗಸ್ಟ್‌ನಲ್ಲಿ ತಮ್ಮ ಮೂಲತಃ ಯೋಜಿಸಿದ್ದ ಸಮಾರಂಭವನ್ನು ಆಯೋಜಿಸಲು ನಿರ್ಧರಿಸಿದ್ದಾರೆ. ಮೆಕ್ಸಿಕೊದ (Mexico) ಕ್ಯಾಬೊ ಸ್ಯಾನ್ ಲ್ಯೂಕಾಸ್‌ನಲ್ಲಿ (Cabo San Lucas) ಕುಟುಂಬ ಮತ್ತು ಸ್ನೇಹಿತರೊಂದಿಗೆ ಅವರು ತಮ್ಮ ಮದುವೆಯನ್ನು ಆಚರಿಸಲಿದ್ದಾರೆ.