Asianet Suvarna News Asianet Suvarna News

ಅಮೆರಿಕದಲ್ಲಿ ದಿನಕ್ಕೆ 1 ಲಕ್ಷ ಕೊರೋನಾ ಕೇಸಿನ ಭೀತಿ!

ಅಮೆರಿಕದಲ್ಲಿ ದಿನಕ್ಕೆ 1 ಲಕ್ಷ ಕೇಸಿನ ಭೀತಿ!| ಜನರು ಹೀಗೇ ವರ್ತಿಸಿದರೆ ಅಪಾಯ: ಸಂಸತ್ತಿಗೆ ತಜ್ಞರ ಮಾಹಿತಿ

US coronavirus cases could hit 1 lakh a day
Author
Bangalore, First Published Jul 2, 2020, 12:40 PM IST

ವಾಷಿಂಗ್ಟನ್(ಜು.02): ಕೊರೋನಾ ವೈರಸ್‌ ಹಾವಳಿಯಿಂದ ತತ್ತರಿಸಿರುವ ಅಮೆರಿಕದಲ್ಲಿ ಸದ್ಯ ಪ್ರತಿದಿನ ಸರಾಸರಿ 40 ಸಾವಿರ ಹೊಸ ಸೋಂಕಿತರು ಪತ್ತೆಯಾಗುತ್ತಿದ್ದು, ಇದು 1 ಲಕ್ಷಕ್ಕೆ ಏರುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ| ಆ್ಯಂಟನಿ ಫೌಸಿ ಎಂಬುವರು ಈ ಕುರಿತು ಅಮೆರಿಕದ ಸಂಸತ್ತಿಗೆ ವಿವರಣೆ ನೀಡಿದ್ದಾರೆ.

ಅಮೆರಿಕನ್ನರು ಸಾಮಾಜಿಕ ಅಂತರ ಹಾಗೂ ಮಾಸ್ಕ್‌ ಧರಿಸುವ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ. ಎಲ್ಲೆಂದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಒಂದೆಡೆ ಸೇರುತ್ತಿದ್ದಾರೆ. ಸದ್ಯ ನಮಗೆ ಕೊರೋನಾ ಮೇಲೆ ಯಾವುದೇ ನಿಯಂತ್ರಣವಿಲ್ಲ. ಹೀಗೇ ಮುಂದುವರೆದರೆ ಮುಂದೆ ಪ್ರತಿದಿನ 1 ಲಕ್ಷ ಹೊಸ ಸೋಂಕಿತರು ಪತ್ತೆಯಾದರೂ ಅಚ್ಚರಿಯಿಲ್ಲ ಎಂದು ಡಾ

ಫೌಸಿ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಶಾಲೆ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಪುನಾರಂಭಿಸಬಹುದೇ ಎಂದು ಸಲಹೆ ಕೇಳಲು ಸೆನೆಟ್‌ ಸಮಿತಿಯು ಡಾ| ಫೌಸಿ ಅವರನ್ನು ಮಂಗಳವಾರ ಕರೆಸಿತ್ತು. ಆಗ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದಲ್ಲಿ ಫೆä್ಲೕರಿಡಾ, ಅರಿಜೋನಾ, ಟೆಕ್ಸಾಸ್‌ ಮತ್ತು ಕ್ಯಾಲಿಫೋರ್ನಿಯಾ ಈ ನಾಲ್ಕು ರಾಜ್ಯಗಳಲ್ಲೇ ದೇಶದ ಅರ್ಧಕ್ಕರ್ಧ ಕೊರೋನಾ ಪ್ರಕರಣಗಳಿವೆ. ಈ ರಾಜ್ಯಗಳೂ ಸೇರಿದಂತೆ ಇನ್ನೂ ಹಲವಾರು ರಾಜ್ಯಗಳಲ್ಲಿ ಭಾಗಶಃ ಲಾಕ್‌ಡೌನ್‌ ರೀತಿಯ ವಾತಾವರಣವಿದೆ. ಅದನ್ನು ಸಡಿಲಿಸಲು ಮತ್ತು ಶಾಲೆಗಳನ್ನು ಪುನಾರಂಭಿಸಲು ಸರ್ಕಾರಗಳು ಚಿಂತನೆ ನಡೆಸುತ್ತಿವೆ. ಹೀಗಾಗಿ ಸೆನೆಟ್‌ ಸಮಿತಿಯು ತಜ್ಞರ ಅಭಿಪ್ರಾಯ ಸಂಗ್ರಹಿಸುತ್ತಿದೆ.

ಕೊರೋನಾ ನಿಯಂತ್ರಣಕ್ಕೆ ನಿರ್ಬಂಧಗಳನ್ನು ವಿಧಿಸುವುದು ಅಮೆರಿಕದಲ್ಲಿ ರಾಜಕೀಯ ವಿಷಯವಾಗಿ ಮಾರ್ಪಾಡಾಗಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪರ ಇರುವ ಜನರು ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರವೂ ಸೇರಿದಂತೆ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಟ್ರಂಪ್‌ ವಿರುದ್ಧ ಇರುವವರು ಹಾಗೂ ರೋಗದ ಬಗ್ಗೆ ಭೀತಿಯಿರುವವರು ಮಾತ್ರ ನಿಯಮಗಳನ್ನು ಪಾಲಿಸುತ್ತಿದ್ದಾರೆ. ರಾಜ್ಯ ಸರ್ಕಾರಗಳ ಗವರ್ನರ್‌ಗಳೂ ಇದೇ ಧೋರಣೆಯಿಂದಲೇ ಕೊರೋನಾ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Follow Us:
Download App:
  • android
  • ios