ಲಾಸ್‌ ಏಂಜಲೀಸ್‌(ಮೇ.29): ಕೋವಿಡ್‌ ಲಸಿಕೆ ಪಡೆಯುವ ಅಮೆರಿಕದ ಕ್ಯಾಲಿಫೋರ್ನಿಯಾದ ಪ್ರಜೆಗಳು 850 ಕೋಟಿ ರು. (116.5 ಮಿಲಿಯನ್‌ ಡಾಲರ್‌) ಬಹುಮಾನಕ್ಕೆ ಅರ್ಹವಾಗಿರಲಿದ್ದಾರೆ. ಇನ್ನೂ ಲಸಿಕೆ ಪಡೆಯದ ಅರ್ಹ ಕೋಟ್ಯಂತರ ಪ್ರಜೆಗಳಿಗೆ ಲಸಿಕೆ ಪಡೆಯುವುದನ್ನು ಉತ್ತೇಜಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವವರಿಗೆ ಭರ್ಜರಿ 850 ಕೋಟಿ ರು. ಬಹುಮಾನವನ್ನು ಘೋಷಿಸಲಾಗಿದೆ.

ಸ್ವದೇಶೀ ಲಸಿಕೆ ಕೋವ್ಯಾಕ್ಸಿನ್ 4 ಕೋಟಿ ಡೋಸ್ ನಾಪತ್ತೆ ರಹಸ್ಯ ಏನು?

ಅಮೆರಿಕದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಕ್ಯಾಲಿಫೋರ್ನಿಯಾದ ಒಟ್ಟಾರೆ 3.4 ಕೋಟಿ ಪ್ರಜೆಗಳ ಪೈಕಿ ಶೇ.63ರಷ್ಟುಜನರಿಗೆ ಲಸಿಕೆ ನೀಡಲಾಗಿದೆ. ಇನ್ನೂ 1.2 ಕೋಟಿ ಜನರಿಗೆ ಲಸಿಕೆ ನೀಡುವುದು ಬಾಕಿಯಿದೆ. ಏತನ್ಮಧ್ಯೆ, ಕೋವಿಡ್‌ ಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನಕ್ಕೂ ಹಿನ್ನಡೆಯಾಗಿದೆ. ಹೀಗಾಗಿ ಜನರನ್ನು ಲಸಿಕೆ ಪಡೆಯುವಂತೆ ಉರಿದುಂಬಿಸಲು ಕ್ಯಾಲಿಫೋರ್ನಿಯಾ ಸರ್ಕಾರ ಈ ಕ್ರಮ ಕೈಗೊಂಡಿದೆ.

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

ಲಸಿಕೆ ಪಡೆಯುವ ಅಭ್ಯರ್ಥಿಗಳಿಗೆ ಬಹುಮಾನ ಘೋಷಿಸುತ್ತಿರುವುದು ಮೊದಲೇನಲ್ಲ. ಆದಾಗ್ಯೂ, ಇಷ್ಟುದೊಡ್ಡ ಪ್ರಮಾಣದ ಹಣ ಘೋಷಿಸಿರುವುದು ಮಾತ್ರ ಇದೇ ಮೊದಲು. ಜೂ.15ಕ್ಕೆ ಘೋಷಿಸಲಾಗುವ ಪ್ರಥಮ ಬಹುಮಾನಕ್ಕೆ ಅರ್ಹರಾದವರಿಗೆ ತಲಾ 10 ಕೋಟಿ ರು. ನಗದು, ಆ ನಂತರ 30 ಮಂದಿಗೆ ತಲಾ 36 ಲಕ್ಷ ರು. ನೀಡಲಾಗುತ್ತದೆ. ಲಸಿಕೆ ಪಡೆಯುವ 12 ವರ್ಷ ಮತ್ತು ಮೇಲ್ಪಟ್ಟವರು ಈ ಬಹುಮಾನಕ್ಕೆ ಅರ್ಹವಾಗಿರಲಿದ್ದಾರೆ. ಅಲ್ಲದೆ ವ್ಯಾಕ್ಸಿನ್‌ ಪಡೆಯುವ 20 ಲಕ್ಷ ಮಂದಿಗೆ 3500 ರು. ಮೌಲ್ಯದ ಉಡುಗೊರೆಯ ಕಾರ್ಡ್‌ಗಳನ್ನು ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona