ಸ್ವದೇಶೀ ಲಸಿಕೆ ಕೋವ್ಯಾಕ್ಸಿನ್ 4 ಕೋಟಿ ಡೋಸ್ ನಾಪತ್ತೆ ರಹಸ್ಯ ಏನು?

* ಕೋವ್ಯಾಕ್ಸಿನ್‌ನ 4 ಕೋಟಿ ಡೋಸ್‌ಗಳು ಮಿಸ್ಸಿಂಗ್‌

* 6 ಕೋಟಿ ಡೋಸ್‌ ಉತ್ಪಾದನೆ, 2 ಕೋಟಿ ಡೋಸ್‌ ಬಳಕೆ

* ಉತ್ಪಾದನೆಯಾಗಿ, ಬಳಕೆಗೆ ಲಭ್ಯವಾಗಲು 4 ತಿಂಗಳು ಬೇಕು: ಕೋವ್ಯಾಕ್ಸಿನ್‌ ಸ್ಪಷ್ಟನೆ

4 crore COVAXIN doses missing Mismatch in production availability reported pod

ನವದೆಹಲಿ(ಮೇ.29):  ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳ ಭಾರೀ ಕೊರತೆ ಬೆನ್ನಲ್ಲೇ, ಕೊರೋನಾ ಲಸಿಕೆ ಉತ್ಪಾದನೆ ಮತ್ತು ಬಳಕೆಯ ಮಧ್ಯೆ ಅಜಗಜಾಂತರ ವ್ಯತ್ಯಾಸವಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್‌ ಲಸಿಕೆಯ 6 ಕೋಟಿಯಷ್ಟುಡೋಸ್‌ಗಳು ಬಳಕೆಗೆ ಸಿದ್ಧವಾಗಿವೆ. ಆದರೆ ದೇಶದಲ್ಲಿ ಈ ಲಸಿಕೆಯ 2.1 ಕೋಟಿಯಷ್ಟೇ ಡೋಸ್‌ಗಳನ್ನು ಗುರುವಾರದವರೆಗೆ ಬಳಸಲಾಗಿದೆ. ಹೀಗಾಗಿ ಬಾಕಿ ಉಳಿದ 3ನೇ 2ರಷ್ಟುಡೋಸ್‌ಗಳ ಲೆಕ್ಕ ಏನಾಯಿತು ಎಂಬ ಬಗ್ಗೆ ಮಾತ್ರ ನಿಗೂಢವಾಗಿದೆ.

'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'

ಭಾರತ್‌ ಬಯೋಟೆಕ್‌ ಈವರೆಗೆ ಕೋವ್ಯಾಕ್ಸಿನ್‌ ಲಸಿಕೆಯ ಸುಮಾರು 8 ಕೋಟಿಯಷ್ಟುಡೋಸ್‌ಗಳನ್ನು ಉತ್ಪಾದಿಸಿದ್ದು, ಇದರಲ್ಲಿ ರಾಜತಾಂತ್ರಿಕ ಭಾಗವಾಗಿ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ನ 6.6 ಕೋಟಿ ಡೋಸ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. ಈ ಪೈಕಿ ಕೋವ್ಯಾಕ್ಸಿನ್‌ ಲಸಿಕೆಯ ಪ್ರಮಾಣ 2 ಕೋಟಿ ಅಂದುಕೊಂಡರೂ, ಉಳಿದ ಸುಮಾರು 6 ಕೋಟಿಯಷ್ಟುಡೋಸ್‌ಗಳು ಲಭ್ಯವಿರಬೇಕಿತ್ತು. ಆದರೆ ಈವರೆಗೆ 2.1 ಕೋಟಿ ಡೋಸ್‌ಗಳಷ್ಟೇ ಲಸಿಕೆಗಳು ಬಳಕೆಗೆ ಲಭ್ಯವಾಗಿವೆ ಎಂದು ವರದಿಗಳು ಹೇಳಿದ್ದವು.

ಇದಕ್ಕೆ ಸ್ಪಷ್ಟನೆ ರೂಪದಲ್ಲಿ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಭಾರತ್‌ ಬಯೋಟೆಕ್‌, ಲಸಿಕೆ ಉತ್ಪಾದನೆ ಅತ್ಯಂತ ಕ್ಲಿಷ್ಟಪ್ರಕ್ರಿಯೆ. ಲಸಿಕೆಯೊಂದು ಉತ್ಪಾದನೆಯಾಗಿ, ನೀಡುವ ಹಂತಕ್ಕೆ ಬರಲು ಕನಿಷ್ಠ 4 ತಿಂಗಳು ಬೇಕು. ಮಾಚ್‌ರ್‍ನಲ್ಲಿ ನಾವು ಉತ್ಪಾದಿಸುವ ಲಸಿಕೆ ಜೂನ್‌ನಲ್ಲಷ್ಟೇ ಬಳಕೆಗೆ ಲಭ್ಯವಾಗುತ್ತದೆ ಎಂದು ಹೇಳಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios