ಟೈಟ್ ಜೀನ್ಸ್ ಧರಿಸಿ ಬೈಕ್ ಏರಿ ಬಂದ ಯುವತಿಯನ್ನು ಓರೆಗಣ್ಣಿನಲ್ಲಿ ನೋಡಿದ ಅಂಕಲ್
ಯುವತಿ ನೀಲಿ ಬಣ್ಣದ ಟೈಟ್ ಜೀನ್ಸ್, ಲೆದರ್ ಜಾಕೆಟ್ ಧರಿಸಿ ಬೈಕ್ ಮೇಲೆ ಕುಳಿತಿರೋದನ್ನು ನೋಡಬಹುದು. ಅಂಕಲ್ ಏನು ನೋಡ್ತಿದ್ದೀರಿ ಎಂಬ ಸಾಲಿನೊಂದಿಗೆ ವಿಡಿಯೋ ಶೇರ್ ಮಾಡಲಾಗುತ್ತಿದೆ.
ಇಂದಿನ 5ಜಿ ಯುಗದಲ್ಲಿ ಕೆಲವರು ರಾತ್ರೋ ರಾತ್ರಿ ಸ್ಟಾರ್‌ಗಳಾಗುತ್ತಾರೆ. ಬೆಳಗಾಗುವಷ್ಟರಲ್ಲಿ ಇಡೀ ಜಗತ್ತು ಇವರನ್ನು ಗುರುತಿಸಲು ಆರಂಭಿಸುತ್ತದೆ. ಒಂದು ಡೈಲಾಗ್, ಫೋಟೋ, ಲುಕ್ ಸಹ ಸದ್ದು ಮಾಡುತ್ತವೆ. ಇದೀಗ ಅಂತಹವುದೇ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟೈಟ್ ಜೀನ್ಸ್, ಲೆದರ್ ಜಾಕೆಟ್ ಹಾಕೊಂಡು, ಓಫನ್ ಹೇರ್ ಬಿಟ್ಕೊಂಡು ಬೈಕ್ ಏರಿಬಂದ ಯುವತಿಯನ್ನು ರಸ್ತೆ ಬದಿ ನಿಂತ ಮಧ್ಯ ವಯಸ್ಕ ವ್ಯಕ್ತಿ ನೋಡುತ್ತಿರುವ ಫೋಟೋ ಎಲ್ಲರ ಮೊಬೈಲ್ ತಲುಪುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು ಫನ್ನಿ ಸಾಲುಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋದಲ್ಲಿ ಯುವತಿ ನೀಲಿ ಬಣ್ಣದ ಟೈಟ್ ಜೀನ್ಸ್, ಲೆದರ್ ಜಾಕೆಟ್ ಧರಿಸಿ ಬೈಕ್ ಮೇಲೆ ಕುಳಿತಿರೋದನ್ನು ನೋಡಬಹುದು. ಯುವತಿ ಜೊತೆ ಒಬ್ಬ ಕ್ಯಾಮೆರಮ್ಯಾನ್ ಇದ್ದು, ಆಕೆಯ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದಾನೆ. ರಸ್ತೆ ಬದಿಯಲ್ಲಿ ನಿಂತ ಅಂಕಲ್ ಆಕೆಯನ್ನು ತದೇಕಚಿತ್ತದಿಂದ ನೋಡುತ್ತಿದ್ದಾರೆ. ಕಣ್ಣು ಕದಲಿಸದೇ ಯುವತಿಯನ್ನು ನೋಡಿದ ಅಂಕಲ್ ಇದೀಗ ಫೇಮಸ್ ಆಗಿದ್ದಾರೆ. ವಿಡಿಯೋದಲ್ಲಿ ಅಂಕಲ್ ಮುಖವನ್ನು ಜೂಮ್ ಮಾಡಿ ತೋರಿಸಲಾಗಿದೆ. ಅಂಕಲ್ ಏನು ನೋಡ್ತಿದ್ದೀರಿ ಎಂಬ ಸಾಲಿನೊಂದಿಗೆ ವಿಡಿಯೋ ಶೇರ್ ಮಾಡಲಾಗುತ್ತಿದೆ.
ಬರೀ ದೆವ್ವಗಳೇ ಇರೋ ಊರಿದೆ, ಹೆಸರಲ್ಲಿದೆ ಗಿನ್ನಿಸ್ ದಾಖಲೆ,ಕಥೆ ಕೇಳಿದ್ರೆ ಹುಟ್ಟುತ್ತೆ ನಡುಕ!
2 ಕೋಟಿಗೂ ಅಧಿಕ ವ್ಯೂವ್
ಕ್ರಿಸ್ಟಿನಾ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದ್ದು, 2.95 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಅಷ್ಟು ಮಾತ್ರವಲ್ಲದೇ 5.8 ಲಕ್ಷ ಲೈಕ್ಸ್ ಬಂದಿವೆ. ಕ್ರಿಸ್ಟಿನಾ ಇನ್‌ಸ್ಟಾಗ್ರಾಂನಲ್ಲಿ 20 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ ಮೂರು ಸಾವಿರಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ.
ಎಲ್ಲರಲ್ಲೂ ಇರ್ತಾರಂತೆ ಒಬ್ಬ ಅಂಕಲ್
ವಿಡಿಯೋ ನೋಡಿದ ನೆಟ್ಟಿಗರು, ಎಲ್ಲರಲ್ಲೂ ಈ ರೀತಿಯ ಒಬ್ಬ ಅಂಕಲ್ ಇರುತ್ತಾರೆ. ಸುಂದರವಾಗಿರೋದನ್ನು ನೋಡುವದರಲ್ಲಿ ತಪ್ಪೇನಿದೆ. ಬಹುಶಃ ಅಂಕಲ್ ಆಕೆ ಜೊತೆ ರೈಡ್ ಹೋದ್ರೆ ಹೇಗಿರಬಹದು ಎಂದು ಯೋಚನೆ ಮಾಡುತ್ತಿರಬಹುದು. ಹೀಗೆ ತರೇಹವಾರಿ ಕಮೆಂಟ್‌ಗಳು ವಿಡಿಯೋಗೆ ಬಂದಿವೆ. ಕ್ರಿಸ್ಟಿನಾ ತನ್ನನ್ನು ಬ್ಲಾಗರ್ ಎಂದು ಕರೆದುಕೊಂಡಿದ್ದು, ಇಡೀ ಪೇಜ್ ತುಂಬಾ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.
ಲೈಂಗಿಕ ಕ್ರಿಯೆ ಉತ್ತುಂಗದಲ್ಲಿರುವಾಗ ಕಾಂಡೋಮ್ ತೆಗೆದ ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆ!