ನವದೆಹಲಿ(ಡಿ.05): ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾ ಹಾಗೂ ಗಾಂಜಾ ಅಂಟನ್ನು ಹೊರಗಿಡುವ ಸಂಬಂಧ ವಿಶ್ವಸಂಸ್ಥೆ ನಿರ್ಧಾರ ಕೈಗೊಂಡಿದೆ. ಭಾರತ ಸೇರಿ ಹಲವು ದೇಶಗಳು ಪರವಾಗಿ ಮತ ಚಲಾವಣೆ ಮಾಡಿದ್ದರಿಂದ ನಿರ್ಣಯ ಸುಲಭವಾಗಿ ಅಂಗೀಕಾರವಾಗಿದೆ.

ಭಾರತದ ಮಾದಕ ವಸ್ತು ಹಾಗೂ ಅಮಲೇರಿಸುವ ವಸ್ತುಗಳ (ಎನ್‌ಡಿಪಿಎಸ್‌) ಕಾಯ್ದೆ 1985ರ ಪ್ರಕಾರ, ಗಾಂಜಾ ಉತ್ಪಾದನೆ, ವಶದಲ್ಲಿಟ್ಟುಕೊಳ್ಳುವುದು, ಮಾರಾಟ, ಖರೀದಿ, ಸಾಗಣೆ, ಬಳಕೆ ಶಿಕ್ಷಾರ್ಹ ಅಪರಾಧವಾಗಿದೆ. ಆದಾಗ್ಯೂ ಭಾರತ ವಿಶ್ವಸಂಸ್ಥೆ ನಿರ್ಣಯದ ಪರ ಮತ ಚಲಾವಣೆ ಮಾಡಿದೆ.

ಔಷಧೀಯ ಸಸ್ಯಪಟ್ಟಿಗೆ ಗಾಂಜಾ ಅಧೀಕೃತ ಸೇರ್ಪಡೆ; ಮಹತ್ವದ ಹೆಜ್ಜೆ ಇಟ್ಟ UN!

ಮಾದಕ ವಸ್ತುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಆಯೋಗದ 1961ರ ಒಪ್ಪಂದದ ನಾಲ್ಕನೇ ಅನುಚ್ಛೇದದಡಿ ಹೆರಾಯಿನ್‌ನಂತಹ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿ ಗಾಂಜಾ ಇತ್ತು. ಅದನ್ನು ಹೊರಗಿಡಲು ನಡೆದ ಪ್ರಕ್ರಿಯೆಯಲ್ಲಿ 53 ಸದಸ್ಯ ದೇಶಗಳು ಭಾಗಿಯಾಗಿದ್ದವು. ಭಾರತ, ಅಮೆರಿಕ, ಐರೋಪ್ಯ ಒಕ್ಕೂಟದ ಬಹುತೇಕ ದೇಶಗಳು ಸೇರಿ 27 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾವಣೆ ಮಾಡಿದವು. ಚೀನಾ, ಪಾಕಿಸ್ತಾನ, ರಷ್ಯಾ ಸೇರಿ 25 ದೇಶಗಳು ವಿರುದ್ಧ ಹಾಕಿದವು. ಉಕ್ರೇನ್‌ ತಟಸ್ಥವಾಗಿ ಉಳಿಯಿತು.

ದಾಳಿ ಮಾಡಿದ ಸಿಸಿಬಿಗೆ ಕಂಡಿದ್ದು ಡ್ರಗ್ಸ್ ಲೋಕ, ಸಾವಿರ LSD ಸ್ಟ್ರಿಪ್ಸ್ ಇಟ್ಟುಕೊಂಡಿದ್ದರು!

ಏನು ಪ್ರಯೋಜನ?:

ವಿಶ್ವಸಂಸ್ಥೆಯ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಗಾಂಜಾವನ್ನು ಹೊರಗಿಟ್ಟಿರುವುದರಿಂದ ಅದನ್ನು ಔಷಧೀಯ ಹಾಗೂ ಚಿಕಿತ್ಸಾ ಉದ್ದೇಶಕ್ಕೆ ಬಳಸಿಕೊಳ್ಳುವುದಕ್ಕೆ ಹಾದಿ ಸುಗಮವಾಗಲಿದೆ. ಇಲ್ಲಿವರೆಗೂ ಇದು ಕಷ್ಟವಾಗಿತ್ತು.