ಗಾಂಜಾ ಬೆಳೆಯುವುದು, ಸೇವಿಸುವುದು, ಮಾರಾಟಮಾಡುವುದು ಭಾರತದಲ್ಲಿ ಅಪರಾಧವಾಗಿದೆ. ಆದರೆ ಇದೀಗ ಗಾಂಜಾವನ್ನು ಔಷಧೀಯ ಗುಣದ ಸಸ್ಯ ಎಂದು ವಿಶ್ವಸಂಸ್ಥೆ ಪರಿಗಣಿಸಿದೆ. ಈ ಕುರಿತು ವಿಶ್ವ ಸಂಸ್ಥೆ ತೆಗೆದುಕೊಂಡ ನಿರ್ಣಯವೇನು? ಇಲ್ಲಿದೆ ವಿವರ.
ನ್ಯೂಯಾರ್ಕ್(ಡಿಯ03): ವಿಶ್ವ ಸಂಸ್ಥೆ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಭಾರತ ಸೇರಿದಂತೆ ಹಲವು ದೇಶಗಳು ಗಾಂಜಾ ನಿಷೇಧಿಸಿದೆ. ಆದರೆ ವಿಶ್ವ ಸಂಸ್ಥೆ ಗಾಂಜಾದಲ್ಲಿರುವ ಔಷಧೀಯ ಮೌಲ್ಯವನ್ನು ಗುರುತಿಸಿದೆ. ವಿಶ್ವ ಸಂಸ್ಥೆಯ ನಡೆದ ಮಹತ್ವದ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಗಾಂಜಾ ಔಷಧೀಯ ಸಸ್ಯ ಎಂದು ಪರಿಗಣಿಸಲು ಮತ ಚಲಾಯಿಸಿದೆ. ಈ ಮೂಲಕ ಗಾಂಜಾ ಇದೀಗ ಔಷಧೀಯ ಸಸ್ಯಗಳ ಪಟ್ಟಿಗೆ ಅಧೀಕೃತವಾಗಿ ಸೇರಿಕೊಂಡಿದೆ.
ಹಾಸ್ಯನಟಿ ಭಾರತಿ ಸಿಂಗ್ ಬಂಧನ: ಮನೆ, ಕಚೇರಿಯಲ್ಲಿ 86 ಗ್ರಾಂ ಗಾಂಜಾ ಪತ್ತೆ!.
ಕ್ಯಾನಬಿಸ್(ಗಾಂಜಾ) ಸಾವಿರಾರು ವರ್ಷಗಳಿಂದ ಚಿಕಿತ್ಸೆಗಾಗಿ ಬಳಸುವ ಸಸ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಶಿಫಾರಸಿನ ಬಳಿಕ ಇದೀಗ ವಿಶ್ವ ಸಂಸ್ಥೆ ಗಾಂಜಾವನ್ನು ಔಷಧೀಯ ಗುಣವುಳ್ಳ ಸಸ್ಯ ಎಂದು ಪರಿಗಣಿಸಿದೆ. ಈ ಹಿಂದೆ ವಿಶ್ವ ಸಂಸ್ಥೆಯ ಮಾದಕ ದ್ರವ್ಯಗಳ ಆಯೋಗ, ಗಾಂಜಾದಲ್ಲಿ ಔಷಧೀಯ ಗುಣಗಳು ಕಡಿಮೆ. ಆದರೆ ಹೆರಾಯಿನ್ ಅಂಶ ಹೆಚ್ಚಾಗಿದೆ. ಹೀಗಾಗಿ ಇದನ್ನು ಔಷಧೀಯ ಸಸ್ಯ ಎಂದು ಪರಿಗಣಿಸಿರಲಿಲ್ಲ. ಆದರೆ ಇದೀಗ ಔಷಧೀಯ ಸಸ್ಯ ಎಂದು ಪರಿಗಣಿಸಲು ಹೆಚ್ಚಿನ ಮತ ಬಿದ್ದಿದೆ.
ಡ್ರಗ್ಸ್ ಘಾಟು: ದೀಪಿಕಾ ಮ್ಯಾನೇಜರ್ ಮನೆಯಲ್ಲಿ ಸಿಕ್ತು ಗಾಂಜಾ ಎಣ್ಣೆ
ಗಾಂಜಾ ಇದೀಗ ಔಷಧೀಯ ಸಸ್ಯ ಎಂದು ಪರಿಗಣಿಸಲ್ಪಟ್ಟರೂ, ವಿಶ್ವ ಸಂಸ್ಥೆಯ ಕಾನೂನಿನಡಿ ವೈದ್ಯಕಿಯೇತರ ಬಳಕೆಗೆ ಹೇರಿದ್ದ ನಿಷೇಧವನ್ನು ಮುಂದುವರಿಸಿದೆ. 1961ರ ಮಾದಕ ದ್ರವ್ಯ ಸಮಾವೇಶದಲ್ಲಿ IV ಪರಿಚ್ಚೇದದಿಂದ ಗಾಂಜಾವನ್ನು ತೆಗೆದುಹಾಕಲು ಎಲ್ಲಾ ಸದಸ್ಯ ರಾಷ್ಟ್ರಗಳು ಮತ ಚಲಾಯಿಸಿತ್ತು. ಆದರೆ ಚೀನಾ, ನೈಜಿರೀಯಾ ಹಾಗೂ ಪಾಕಿಸ್ತಾನ ಈ ನಡೆಯನ್ನು ವಿರೋಧಿಸಿತ್ತು.
ಕ್ರಿ.ಪೂ 15ನೇ ಶತಮಾಾನದಲ್ಲಿ ಗಾಂಜಾವನ್ನು ಔಷಧೀಯ ಕಾರಣಕ್ಕೆ ಬಳಕೆ ಮಾಡಲಾಗುತ್ತಿತ್ತು. ಪ್ರಾಚೀನ ಈಜಿಪ್ಟ್, ಗ್ರೀಸ್‌ನಲ್ಲಿ ಗಾಂಜಾವನ್ನು ಔಷಧೀಯ ಬಳಕೆಗೆ ಉಪಯೋಗ ಮಾಡುತ್ತಿರುವುದುವನ್ನು ದಾಖಲೆಗಳಲ್ಲಿ ಗಮನಿಸಬಹುದಾಗಿದೆ.
ವಿಶ್ವದಲ್ಲಿ 50ಕ್ಕೂ ಹೆಚ್ಚು ರಾಷ್ಟ್ರಗಳು ಗಾಂಜಾವನ್ನು ಔಷಧೀಯ ಗುಣಗಳ ಸಸ್ಯೆ ಎಂದು ಅಂಗೀಕರಿಸಿದೆ. ಕೆನಡಾ, ಉರುಗ್ವೆ ಹಾಗೂ ಯುಎಸ್ ರಾಷ್ಟ್ರಗಳು ನಶೆ ಹಾಗೂ ಮನರಂಜನಾ ಬಳಕೆಗೂ ಗಾಂಜಾವನ್ನು ಕಾನೂನುಬದ್ದಗೊಳಿಸಿವೆ.
ಇದೀಗ ವಿಶ್ವ ಸಂಸ್ಥೆ ಗಾಜಾವನ್ನು ಔಷಧೀಯ ಗುಣವುಳ್ಳ ಸಸ್ಯ ಎಂದು ಪರಿಗಣಿಸಿದ ಬೆನ್ನಲ್ಲೇ, ಚಿಕಿತ್ಸಕ ಉದ್ದೇಶಗಳಿಗಾಗಿ ಗಾಂಜಾವನ್ನು ಬಳಸುವ ಲಕ್ಷಾಂತರ ಜನರಲ್ಲಿ ಸಂತಸ ತಂದಿದೆ. ಗಾಂಜಾ ಆಧಾರಿತ ಔಷಧೀಯ ಉತ್ಪನ್ನಗಳ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಾಗಲಿದೆ ಎಂದು ಡ್ರಗ್ ರಿಫಾರ್ಮ್ NGo ಹೇಳಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 3, 2020, 2:46 PM IST