ಬೆಂಗಳೂರು(ಡಿ. 03)  ನಿಮ್ಮ ನಿಮ್ಮ ಅಪಾರ್ಟ್ಮೆಂಟ್ ಗಳಲ್ಲಿ ಯಾರೂ ಯಾರೂ ವಾಸ ಮಾಡ್ತಾ ಇದ್ದಾರೆ ಎಂಬುದು ಎಲ್ಲಾ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳಿಗೆ ಗೊತ್ತಿರಬೇಕು, ಬೆಂಗಳೂರು ಸಿಟಿ ಬಾರ್ಡರ್ ಆಗಿರುವುದರಿಂದ ಇಂತವರು ಬಚ್ಚಿಟ್ಟು ಕೊಳ್ಳಲು ಹುಡುಕಿ ಕೊಂಡು ಬರುತ್ತಾರೆ..ಹೌದು ಇಂಥದ್ದೊಂದು ಎಚ್ಚರಿಕೆ  ತೆಗೆದುಕೊಳ್ಳಲೇಬೇಕು.

ಬೆಂಗಳೂರು ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದು ಅವರಿಂದ  50  ಲಕ್ಷ ರೂ. ಮೌಲ್ಯದ ಎಲ್‌ಎಸ್‌ಡಿ ಮತ್ತು  ಸ್ವಲ್ಪ ಗಾಂಜಾ ವಶಕ್ಕೆ ಪಡೆದಿದ್ದಾರೆ.  ಮಲ್ಲಸಂದ್ರದಲ್ಲಿ 21  ವರ್ಷದ ರಾಹುಲ್ ಮತ್ತು ದರ್ಶನ್ ಎಂಬುವರನ್ನು ಬಂಧಿಸಿ  ಅವರಿಂದ ಸಾವಿರಕ್ಕೂ ಅಧಿಕ ಎಲ್ ಎಸ್‌ಡಿ ಸ್ಟ್ರಿಪ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸೆಕ್ಸ್ ಪಾರ್ಟಿಯಲ್ಲಿ ಆಡಳಿತ ಪಕ್ಷದ ಸಂಸದ; ಕಿಟಕಿಯಿಂದಲೆ ಕಾಲು ಕಿತ್ತ

ಡಾರ್ಕ್ ವೆಬ್ ಮೂಲಕ ಇದನ್ನು ಪಡೆದುಕೊಂಡು ಬೇರೆಯವರಿಗೆ ನೀಡಲು ಮುಂದಾಗಿದ್ದರು. ವಿದೇಶದಿಂದ ಪೋಸ್ಟ್ ಮೂಲಕ ಈ ಸ್ಟ್ರಿಪ್ಸ್ ಬಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿತೀಯ ಪಿಯುಗೆ ದರ್ಶನ್ ಕಾಲೇಜು ತೊರೆದಿದ್ದರೆ  ರಾಹುಲ್ ವಾಣಿಜ್ಯ ವಿಭಾಗದಲ್ಲಿ ಡಿಗ್ರಿ ಮಾಡಿಕೊಂಡಿದ್ದ.  ಮಲ್ಲಸಂದ್ರದ ಮನೆ ಮೇಲೆ ದಾಳಿ ಮಾಡಿದಾಗ ಸಿಸಿಬಿಯಯವರಿಗೆ ಡ್ರಗ್ಸ್  ಲೋಕ ತೆರೆದುಕೊಂಡಿದೆ.

ಡ್ರಗ್ಸ್ ಮಾರಾಟ ಮಾಡಿ ಹಣ ಮಾಡಿಕೊಳ್ಳಲು ಮುಂದಾಗಿದ್ದರು.  ಇವರೊಂದಿಗೆ ಯಾರೆಲ್ಲ ಕೈಕಜೋಡಿಸಿದ್ದಾರೆ ಎಂಬುದನ್ನು ತನಿಖೆ ಮಾಡುತ್ತಿದ್ದೇವೆ.   ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.