ಉಕ್ರೇನ್‌ ಯೋಧ ತಂದೆ ಹಾಗೂ ಮಗುವಿನ ಸಮ್ಮಿಲನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಕಣ್ಣು ತೇವಗೊಳಿಸುವ ವಿಡಿಯೋ

ಉಕ್ರೇನ್ ಯೋಧ ಹಾಗೂ ಆತನ ಹಾಲುಗಲ್ಲದ ಕಂದನ ಸಮ್ಮಿಲನದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಹೃದಯವನ್ನು ಭಾರವಾಗಿಸುತ್ತಿದೆ. ಉಕ್ರೇನ್‌ ಮೇಲೆ ರಷ್ಯಾ ಅಧ್ಯಕ್ಷ ಪುಟಿನ್‌ ಹಠಕ್ಕೆ ಬಿದ್ದು ಯುದ್ಧ ಮುಂದುವರೆಸಿದ್ದಾರೆ. ಆದರೆ ಇದರ ಪರಿಣಾಮ ಮಾತ್ರ ಭಯಾನಕ ಎಷ್ಟೋ ತೊಟ್ಟಿಲು ಕೂಸುಗಳು ಈ ಯುದ್ಧದಿಂದ ತಮ್ಮ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾಗುತ್ತಿದ್ದಾರೆ. ರಷ್ಯಾ ಹಾಗೂ ಉಕ್ರೇನ್‌ ಎರಡೂ ಕಡೆಯೂ ಸಾವಿರಾರು ಯೋಧರು ಸಾವಿಗೀಡಾಗುತ್ತಿದ್ದಾರೆ. ಉಕ್ರೇನ್‌ ದೇಶದ ಜನರಂತೂ ಕುಡಿಯಲು ನೀರಿಲ್ಲದೇ ತಿನ್ನಲು ಅನ್ನಾಹಾರವಿಲ್ಲದೇ. ಬಳಲುತ್ತಿದ್ದಾರೆ. ಈ ಮಧ್ಯೆ ಉಕ್ರೇನ್ ಯೋಧ ಹಾಗೂ ಆತನ ಹಾಲುಗಲ್ಲದ ಕಂದನ ಸಮ್ಮಿಲನದ ದೃಶ್ಯ ಎಲ್ಲರನ್ನು ಭಾವುಕರನ್ನಾಗಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಿಡಿಯೋ ನೋಡಿದವರ ಕಣ್ಣು ತೇವಗೊಳ್ಳುತ್ತಿದೆ. 


ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ರೆಡ್ಡಿಟ್ ಪೋಸ್ಟ್ ಮಾಡಿದೆ. ತಂದೆ ಮನೆಗೆ ಬಂದಿದ್ದನ್ನು ಗಮನಿಸುವ ಮಗು ಓಡಿ ಬಂದು ತಂದೆಯನ್ನು ತಬ್ಬಿಕೊಳ್ಳುತ್ತಾನೆ. ಉಕ್ರೇನ್ ಸೇನೆಯ ಸಮವಸ್ತ್ರದಲ್ಲಿರುವ ತಂದೆಯ ಬಳಿ ಓಡಿ ಬಂದ ಮಗುವನ್ನು ತಂದೆ ಎತ್ತಿಕೊಂಡು ಮುದ್ದಾಡುತ್ತಾನೆ. ಇದೊಂದು ಬೆಳಕಿಗೆ ಬಂದಂತಹ ಸಣ್ಣ ನಿದರ್ಶನವಾಗಿದ್ದು, ಎಲ್ಲೂ ರೆಕಾರ್ಡ್‌ ಆಗದಂತಹ ಇಂತಹ ಹಲವು ಹೃದಯ ಭಾರವಾಗಿಸುವ ಘಟನೆಗಳಿಗೆ ಯುದ್ಧಪೀಡಿತ ಉಕ್ರೇನ್‌ ಸಾಕ್ಷಿಯಾಗಿದೆ.

Russia-Ukraine War: ಮೈ ಕೊರೆಯುವ ಚಳಿ, ನಮ್ಮನ್ನು ರಕ್ಷಿಸಿ ಎಂದು ಭಾರತೀಯರ ಆರ್ತನಾದ

ತಾವೆಷ್ಟೇ ಕಷ್ಟದಲ್ಲಿದ್ದರೂ ಮಾನವೀಯತೆ ಮರೆಯದ ಉಕ್ರೇನ್‌ ನಾಗರಿಕರು ನಿನ್ನೆಯಷ್ಟೇ ರಷ್ಯಾ ಯೋಧನೋರ್ವನಿಗೆ ತಿನ್ನಲು ಚಹಾ ಹಾಗೂ ಬನ್‌ ನೀಡುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ಸೆರೆಸಿಕ್ಕ ರಷ್ಯಾ ಯೋಧನಿಗೆ ಉಕ್ರೇನಿನ ಜನ ಕುಡಿಯಲು ಟೀ ಮತ್ತು ತಿನ್ನಲು ಬನ್‌ ನೀಡಿದ್ದಾರೆ. ಅಲ್ಲದೇ ಆತನ ತಾಯಿಗೆ ವಿಡಿಯೋ ಕಾಲ್‌ ಮಾಡಿ ಮಾತನಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪುಟಿನ್‌ನ ಕೌರ್ಯವನ್ನು ನೋಡಿದ್ದೀರಿ. ಉಕ್ರೇನ್‌ ಜನರ ಸ್ನೇಹಪರತೆಯನ್ನೂ ನೋಡಿ ಎಂದು ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದಕ್ಕೂ ಮೊದಲು ಉಕ್ರೇನ್‌ ಯೋಧನೊರ್ವ ತನ್ನ ಪುತ್ರಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಡುವ ಮುನ್ನ ಬಿಕ್ಕಿ ಬಿಕ್ಕಿ ಅತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಉಕ್ರೇನ್ ಪರಿಸ್ಥಿತಿ ಊಹಿಸಿಕೊಳ್ಳಲು ಅಸಾಧ್ಯವಾಗಿದೆ. ರಷ್ಯಾ(Russia Ukraine Crisis) ಸೇನೆ ಬಿಡುವಿಲ್ಲದೆ ದಾಳಿ(Attack) ನಡೆಸುತ್ತಲೇ ಇದೆ. ಕಟ್ಟಡಗಳು, ವಿಮಾನ ನಿಲ್ದಾಣ, ಸರ್ಕಾರಿ ಕಚೇರಿಗಳು ಧ್ವಂಸಗೊಳ್ಳುತ್ತಿದೆ. ಉಕ್ರೇನ್ ಸೈನಿಕರು, ನಾಗರೀಕರು ಬೀದಿ ಬೀದಿಯಲ್ಲಿ ಹೆಣವಾಗಿದ್ದಾರೆ. ಈ ಘನಘೋರ ಪರಿಸ್ಥಿತಿ ನಡುವೆ ನಾಗರೀಕರು ಉಕ್ರೇನ್ ತೊರೆಯುತ್ತಿದ್ದಾರೆ. ಇದರ ನಡುವೆ ಉಕ್ರೇನ್ ಘಟನೆ ವಿವರಿಸುವ ಸಣ್ಣ ವಿಡಿಯೋ ವೈರಲ್(Ukraine Viral Video ) ಆಗಿದೆ. ಅಪ್ಪ ಹಾಗೂ ಮಗಳು ಬಿಗಿದಪ್ಪಿ ಕಣ್ಣೀರು ಹಾಕುತ್ತಿರುವ ಹೃದಯ ವಿದ್ರಾವಕ ವಿಡೀಯೋ ಎಲ್ಲರ ಕಣ್ಣಲ್ಲೂ ಕಣ್ಣೀರು ಜಿನುಗಿಸುತ್ತಿದೆ.

Russia-Ukraine War: ನಾನು ದೇಶ ಬಿಟ್ಟು ಹೋಗಿಲ್ಲ ಎಂದ ಉಕ್ರೇನ್ ಅಧ್ಯಕ್ಷ

ಯುದ್ಧದ ಆರಂಭದಲ್ಲಿ ಉಕ್ರೇನ್‌ನಲ್ಲಿ ನಾಗರಿಕರನ್ನು ಸುರಕ್ಷಿತ ತಾಣಕ್ಕೆ ಕಳಹಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಹೀಗೆ ಬಸ್‌ನಲ್ಲಿ ತನ್ನ ಕುಟುಂಬವನ್ನು ಸುರಕ್ಷಿತ ತಾಣಕ್ಕೆ ಕಳುಹಿಸುತ್ತಿರುವ ಉಕ್ರೇನ್ ಸೈನಿಕ ತನ್ನ ಪುಟಾಣಿ ಪುತ್ರಿಯನ್ನು ಬಿಗಿದಪ್ಪಿ ಕಣ್ಣೀರು ಹಾಕಿದ ಘಟನೆ ಮನಕಲುಕುವಂತಿದೆ. ಪುತ್ರಿ ಹಾಗೂ ತಂದೆ ಇಬ್ಬರು ಕಣ್ಣೀರು ಹಾಕಿದ್ದರು. ಈ ನಡುವೆ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯ ಭರದಿಂದ ಸಾಗಿದೆ.