ಸ್ವಯಂ ಬಾಂಬ್‌ ತಯಾರಿಸಿಟ್ಟುಕೊಂಡ ವೃದ್ಧೆ: ಬರಲಿ ರಷ್ಯಾದವರು ಕಲಿಸುವೆ ಎಂದ ಉಕ್ರೇನ್ ಅಜ್ಜಿ

  • ಯೂಟ್ಯೂಬ್‌ ನೋಡಿ ಮೊಲೊಟೊವ್ ತಯಾರಿಸಿದ ವೃದ್ಧೆ
  • ರಷ್ಯಾದವರು ಬರಲಿ ಚೆನ್ನಾಗಿ ಸ್ವಾಗತಿಸುವೆ ಎಂದ ಉಕ್ರೇನ್‌ ಅಜ್ಜಿ
  • ಸ್ವಯಂ ನಿರ್ಮಿತ ಮೊಲೊಟೊವ್‌ ತೋರಿಸಿದ ಅಜ್ಜಿ
     
Ukrainian grandmother learn taunts Russian army shows off her self made Molotov cocktails akb

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣ 7ನೇ ದಿನವೂ ಮುಂದುವರೆದಿದೆ. ನೂರಾರು ಜನ ಸಾವನ್ನಪ್ಪಿದ್ದಾರೆ. ತಿನ್ನಲು ಆಹಾರ ಕುಡಿಯಲು ನೀರಿಲ್ಲದೇ ಜನ ಸಂಕಟ ಪಡುತ್ತಿದ್ದು, ಜನ ಜೀವನ ಸಂಪೂರ್ಣ ಹದಗೆಟ್ಟಿದೆ. ಆದಾಗ್ಯೂ ಇದ್ಯಾವುದೂ ಕೂಡ ಉಕ್ರೇನಿಯನ್ನರ ಆತ್ಮಸ್ಥೈರ್ಯವನ್ನು ಕುಗ್ಗಿಸಿಲ್ಲ ಎಂಬುದಕ್ಕೆ ಈ ವೃದ್ದೆಯೇ ಸಾಕ್ಷಿ. ವೃದ್ಧೆಯೊಬ್ಬರು ಯೂಟ್ಯೂಬ್‌ ನೋಡಿ ಸ್ಫೋಟಗೊಳ್ಳಬಲ್ಲಂತಹ ಮೊಲೊಟೊವ್‌ ಕಾಕ್ಟೇಲ್‌ ತಯಾರಿಸಿದ್ದು, ರಷ್ಯಾದವರು ಬರಲಿ ಬುದ್ದಿ ಕಲಿಸುವೆ ಎಂದಿದ್ದಾಳೆ. ಇಳಿ ವಯಸ್ಸಿನಲ್ಲೂ ಅಜ್ಜಿಯ ಈ ಧೈರ್ಯ ಹಾಗೂ ಸಾಹಸ ಎಲ್ಲರಿಗೂ ಮಾದರಿಯಾಗಿದ್ದು, ಉಕ್ರೇನ್‌ ಯುವ ಸಮೂಹವನ್ನು ಹೋರಾಟಕ್ಕೆ ಹುರಿದುಂಬಿಸುವಂತೆ ಮಾಡಿದೆ. 

ಪುಟ್ಟ ರಾಷ್ಟ್ರ ಉಕ್ರೇನ್‌ನ ಜನರು ರಷ್ಯಾಗೆ ತೀವ್ರ ಪ್ರತಿರೋಧವನ್ನು ಒಡ್ಡುತ್ತಿದ್ದು, ಇದು ಪ್ರಬಲ ರಷ್ಯಾಗೂ ಅಚ್ಚರಿಯ ಜೊತೆ ದಿಗ್ಭ್ರಮೆ ಮೂಡಿಸಿದೆ. ಉಕ್ರೇನ್‌ನ ಈ ಅಜ್ಜಿ ತಮ್ಮ ಬಳಿ ಇರುವ ಮೊಲೊಟೊವ್ ಕಾಕ್ಟೇಲ್‌ ಅನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದು, ರಷ್ಯಾ ಬಂದಲ್ಲಿ ಎದುರಿಸಲು ಸಿದ್ಧ ಎಂದು ಹೇಳಿದ್ದಾಳೆ. 

ಎರಡು ದಿನಗಳ ಹಿಂದೆ ಉಕ್ರೇನ್‌ನ ಪ್ರಸಿದ್ಧ ಮದ್ಯ ತಯಾರಕ ಸಂಸ್ಥೆ ಪ್ರವಾದ ಬ್ರೆವರೇಜಸ್‌ (Pravda Brewery)  ಯುದ್ಧಕ್ಕೆ ತನ್ನ ದೇಶದ ಜನರನ್ನು ಸಜ್ಜುಗೊಳಿಸುವ ಪ್ರಯತ್ನವಾಗಿ ಸಂಸ್ಥೆಯೂ ಬೀರ್‌ನಿಂದ ಮೊಲೊಟೊವ್ ಕಾಕ್ಟೇಲ್‌ ತಯಾರಿಸುವುದಾಗಿ ಹೇಳಿತ್ತು. ಅಲ್ಲದೇ ಅದಕ್ಕಾಗಿ ನೆರವಾಗುವಂತೆ ಮನವಿ ಮಾಡಿತ್ತು. ಉಕ್ರೇನ್‌ ದೇಶದ ಪಶ್ಚಿಮ ಭಾಗದಲ್ಲಿರುವ ಈ ಪ್ರವಾದ ಮದ್ಯ ತಯಾರಕ ಸಂಸ್ಥೆ ಸ್ವತಃ ತಾನು ಬೀರ್‌ನಿಂದ ತಯಾರಿಸಿದ ಸ್ಪೋಟಗೊಳ್ಳಬಲ್ಲಂತಹ ಮೊಲೊಟೊವ್ ಕಾಕ್ಟೇಲ್‌ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿತ್ತು. ಈಗ ಉಕ್ರೇನ್‌ನ ಅಜ್ಜಿಯೊಬ್ಬರು ಮೊಲೊಟೊವ್ ಕಾಕ್ಟೇಲ್‌ (Molotov cocktail) ತಯಾರಿಸಿಟ್ಟುಕೊಂಡಿದ್ದು, ರಷ್ಯಾ ಬಂದರೆ ಎದುರಿಸಲು ಸಿದ್ಧ ಎಂದಿದ್ದಾರೆ. 

Russia Ukraine Crisis: ರಷ್ಯಾ ಹಡಗುಗಳಿಗೆ ಬಾಗಿಲು ಮುಚ್ಚಿದ ಕೆನಡಾ!

ಈ ವೃದ್ಧೆ ರೈಸಾ ಸ್ಮಾಟ್ಕೊ (Raisa Smatko) ಅವರು ನಿವೃತ್ತ ಅರ್ಥಶಾಸ್ತ್ರಜ್ಞರಾಗಿದ್ದು, ಅವರು ತಮ್ಮ ದೇಶದ ಮೇಲೆ ರಷ್ಯಾದ ಆಕ್ರಮಣದ ನಡುವೆಯೂ ಸುಮ್ಮನೆ ಕುಳಿತುಕೊಂಡಿಲ್ಲ. ಉಕ್ರೇನಿಯನ್ ಅಧಿಕಾರಿಗಳು ಮೊಲೊಟೊವ್ ಕಾಕ್ಟೇಲ್‌ಗಳನ್ನು ತಯಾರಿಸಲು ಜನರನ್ನು ಒತ್ತಾಯಿಸಿದ ನಂತರ ಸ್ಮಾಟ್ಕೊ ತಾತ್ಕಾಲಿಕ ಸ್ಫೋಟಕ ಸಾಧನಗಳನ್ನು ಹೇಗೆ ನಿರ್ಮಿಸುವುದು ಎಂದು ಗೂಗಲ್‌ನಲ್ಲಿ ಹುಡುಕಿದ್ದಾರೆ. ಅಲ್ಲದೇ ಈಗ ಮೊಲೊಟೊವ್ ಕಾಕ್ಟೇಲ್‌ಗಳನ್ನು ತಯಾರಿಸುತ್ತ ತಮ್ಮ ದಿನಗಳನ್ನು ಕಳೆಯುತ್ತಿದ್ದಾರೆ.

Russia Ukraine Crisis: ಖಾರ್ಕೀವ್ ನಗರ ಧ್ವಂಸ, ಬೃಹತ್ ಕಟ್ಟಡಗಳಿಗೆ ಬೆಂಕಿ, ಹೆಚ್ಚಾಯ್ತು ಟೆನ್ಷನ್
ರಷ್ಯಾದವರು ಇಲ್ಲಿಗೆ ಬರಲಿ, ನಾವು ಅವರನ್ನು ಸ್ವಾಗತಿಸಲು ಸಿದ್ಧರಿದ್ದೇವೆ ಎಂದು ಅಜ್ಜಿ (grandmother)  ಆಕ್ರೋಶದ ನುಡಿಗಳನ್ನು ಆಡಿದ್ದು, ಇವರು ಮಾತನಾಡುತ್ತಿರುವ ವಿಡಿಯೋವನ್ನು ಸಿಎನ್‌ಎನ್‌ ವರದಿಗಾರರೊಬ್ಬರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅಜ್ಜಿಯೊಬ್ಬರ ಈ ಧೈರ್ಯದ ಮಾತುಗಳು ಜಗತ್ತಿನಾದ್ಯಂತ ಜನರಿಗೆ ಸ್ಫೂರ್ತಿ ತುಂಬುತ್ತಿದೆ. ಜನ ಅಜ್ಜಿಯ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ.

ಮೊಲೊಟೊವ್ ಕಾಕ್ಟೈಲ್ ಸರಳವಾದ ಸುಧಾರಿತ ಅಗ್ನಿಶಾಮಕ ಸಾಧನವಾಗಿದೆ. ಮೊಲೊಟೊವ್ ಕಾಕ್ಟೈಲ್ ಅನ್ನು ಪೆಟ್ರೋಲ್ ಬಾಂಬು, ಆಲ್ಕೊಹಾಲ್ ಬಾಂಬ್, ಬಾಟಲ್ ಬಾಂಬ್, ಬಡವನ ಗ್ರೆನೇಡ್ ಅಥವಾ ಸರಳವಾಗಿ ಮೊಲೊಟೊವ್ ಎಂದು ಕೂಡ ಕರೆಯಲಾಗುತ್ತದೆ. ಮೊಲೊಟೊವ್ ಕಾಕ್‌ಟೇಲ್‌ ಬೆಂಕಿ ಹತ್ತಿಕೊಳ್ಳಬಲ್ಲ ಕಚ್ಚಾ  ಸಾಧನವಾಗಿದ್ದು,  ಸಾಮಾನ್ಯವಾಗಿ ಸುಡುವ ದ್ರವದಿಂದ ತುಂಬಿದ ದಹನಶಾಲಿ ಬಾಟಲಿಯಾಗಿದೆ. ಇದು ಒಡೆಯಬಹುದಾದ ಗಾಜಿನ ಬಾಟಲಿಯಾಗಿದ್ದು, ಪೆಟ್ರೋಲ್, ಆಲ್ಕೋಹಾಲ್ ಅಥವಾ ನೇಪಾಮ್ ತರಹದ ಮಿಶ್ರಣದಂತಹ ಸುಡುವ ವಸ್ತುವನ್ನು ಒಳಗೊಂಡಿರುತ್ತದೆ.

Latest Videos
Follow Us:
Download App:
  • android
  • ios