Russia Ukraine Crisis: "ಉಕ್ರೇನ್ ಸೇನೆಯಿಂದ ಭಾರತೀಯ ವಿದ್ಯಾರ್ಥಿಗಳ ಒತ್ತೆಯಾಳು" ಮೋದಿಗೆ ತಿಳಿಸಿದ ಪುಟಿನ್!

ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ರಷ್ಯಾದಿಂದಲೂ ಸಹಾಯ

ಖಾರ್ಕೋವ್ ನಲ್ಲಿರುವ ವಿದ್ಯಾರ್ಥಿಗಳನ್ನು ರಷ್ಯಾ ಮಾರ್ಗವಾಗಿ ರಕ್ಷಣೆ

ಪ್ರಧಾನಿ ಮೋದಿಗೆ ಭರವಸೆ ನೀಡಿದ ರಷ್ಯಾ ಅಧ್ಯಕ್ಚ ವ್ಲಾಡಿಮಿರ್ ಪುಟಿನ್

Ukraine has taken Indian students hostage says Russian President Putin to PM Modi san

ಮಾಸ್ಕೋ (ಮಾ.2): ಉಕ್ರೇನ್ ಸೇನೆಯು (Ukraine Army) ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರತೀಯ ವಿದ್ಯಾರ್ಥಿಗಳನ್ನು (Indian Students) ಒತ್ತೆಯಾಳುಗಳನ್ನಾಗಿ (hostage) ಇರಿಸಿಕೊಂಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ಭಾರತದ ಪ್ರಧಾನಿ ನರೇಂದ್ರ ಮೋದಿಗೆ (PM Modi) ತಿಳಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದ ಬಳಿಕ 2ನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವ್ಲಾಡಿಮಿರ್ ಪುಟಿನ್ 2ನೇ ಬಾರಿಗೆ ಮಾತುಕತೆ ನಡೆಸಿದ್ದಾರೆ.

ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ, ಪುಟಿನ್ ಹಾಗೂ ಮೋದಿ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾತನಾಡಿದರು ಎಂದಷ್ಟೇ ವಿವರ ನೀಡಿದ್ದರೆ, ರಷ್ಯಾ ಮಾತ್ರ ಪುಟಿನ ಹಾಗೂ ಮೋದಿ ಯಾವ ವಿಚಾರವಾಗಿ ಮಾತನಾಡಿದರು ಎನ್ನುವ ಸಂಪೂರ್ಣ ವಿವರಣೆ ಇರುವ ಪತ್ರಿಕಾ ಪ್ರಕಟಣೆಯನ್ನು ನೀಡಿದೆ.

ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ತಿಳಿಸಲಾಗಿದೆ. ಯುದ್ಧಪೀಡಿತ ಭಾರತೀಯರು ಸುರಕ್ಷಿತವಾಗಿ ತವರಿಗೆ ತೆರಳಬೇಕು ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ರಷ್ಯಾದ ಸೇನೆಗೆ ಸೂಚನೆ ನೀಡಲಾಗಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. ಖಾರ್ಕೋವ್ ನಗರದಿಂದ ರಷ್ಯಾಗೆ ತೆರಳುವ ಅತ್ಯಂತ ಕಡಿಮೆ ಅವಧಿಯ ಮಾರ್ಗದಲ್ಲಿ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಅತ್ಯಂತ ತ್ವರಿತವಾಗಿ ಆಗಬೇಕು ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುವಂತೆ ಸೇನೆಗೆ ಸೂಚಿಸಿದ್ದೇನೆ ಎಂದಿದ್ದಾರೆ.


ಇದರ ನಡುವೆ ನಮಗೆ ಸಿಕ್ಕಿರುವ ಮಾಹಿತಿಯಂತೆ, ಉಕ್ರೇನ್ ದೇಶದ ಸೇನೆ ಈ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. ರಷ್ಯಾ ಸೇನೆಯ ಮುಂದೆ ಭಾರತೀಯ ವಿದ್ಯಾರ್ಥಿಗಳನ್ನು ಹ್ಯೂಮನ್ ಶೀಲ್ಡ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ನಮ್ಮ ವಿರುದ್ಧ ಹೋರಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗೇನಾದರೂ ಇದ್ದಲ್ಲಿ ಇದರ ಸಂಪೂರ್ಣ ಜವಾಬ್ದಾರಿ ಕೈವ್ ನ ಅಧಿಕಾರಿಗಳದ್ದಾಗಿರಲಿದೆ' ಎಂದು ಪುಟಿನ್ ತಿಳಿಸಿದ್ದಾರೆ. ಅದರೊಂದಿಗೆ ಉಕ್ರೇನ್ ನಿಂದ ಭಾರತೀಯರನ್ನು ಹೊರತರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸೂಕ್ತ ಸಹಾಯವನ್ನು ಉಭಯ ದೇಶಗಳು ಮಾಡಲಿವೆ ಎಂದು ತಿಳಿಸಿದ್ದಾರೆ.

LRC: ಆಪರೇಷನ್ ಗಂಗಾ ಹೆಸರಲ್ಲೂ ಕಾಂಗ್ರೆಸ್ ರಾಜಕಾರಣ..  ಟೀಕೆಗೆ ಮಿತಿ ಇಲ್ವಾ!
ರಷ್ಯಾ ವಿರುದ್ಧ ಮತದಾನದಿಂದ ದೂರ ಉಳಿದ ಭಾರತ: ಉಕ್ರೇನ್‌ನಲ್ಲಿ ನಡೆಯುತ್ತಿರುವ ರಷ್ಯಾದ ಸೇನಾ ಕಾರ್ಯಾಚರಣೆ ಕುರಿತು ಬುಧವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ 11ನೇ ತುರ್ತು ವಿಶೇಷ ಅಧಿವೇಶನ ಮತ್ತು ನಾಲ್ಕನೇ ಸಮಗ್ರ ಸಭೆಯಲ್ಲಿ ರಷ್ಯಾ ವಿರುದ್ಧ ಮತದಾನದಿಂದ ಭಾರತ ದೂರ ಉಳಿದಿದೆ. ರಷ್ಯಾದ ಸೇನಾ ಕಾರ್ಯಾಚರಣೆಯ ವಿರುದ್ಧ ನಡೆದ ಮತದಾನದಲ್ಲಿ 141 ರಾಷ್ಟ್ರಗಳು ಇದರ ಪರವಾಗಿ ಮತ ಚಲಾವಣೆ ಮಾಡಿದರೆ, ಐದು ರಾಷ್ಟ್ರಗಳು ವಿರುದ್ಧವಾಗಿ ಮತದಾನ ಮಾಡಿದವು. 35 ದೇಶಗಳು ಮತದಾನದಿಂದ ದೂರ ಉಳಿದುಕೊಂಡವು.

ಉಕ್ರೇನ್ ನ ಮೇಲೆ ರಷ್ಯಾದ ಆಕ್ರಮಣದ ಖಂಡನಾ ನಿರ್ಣಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ  ಅದ್ಭುತವಾದ ಪ್ರತಿಕ್ಕರಿಯೆ ಬಂದಿದೆ. ತೀರಾ ಅಪರೂಪ ಎನ್ನುವಂತೆ ಸ್ಟ್ಯಾಂಡಿಂಗ್ ಓವಿಯೇಷನ್ ಕೂಡ ಈ ಬಾರಿ ದಾಖಲಾಗಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ತಿಳಿಸಿದೆ. ರಷ್ಯಾದ ಸೇನೆಯು ನಾಗರಿಕರು ಮತ್ತು ನಾಗರಿಕ ಸೌಲಭ್ಯಗಳ ಮೇಲೆ ದಾಳಿಗಳನ್ನು ನಡೆಸುತ್ತಿಲ್ಲ ಎಂದು ವಿಶ್ವಸಂಸ್ಥೆಯ ರಷ್ಯಾದ ಖಾಯಂ ಪ್ರತಿನಿಧಿ ವಾಸಿಲಿ ನೆಬೆಂಜಿಯಾ ಹೇಳಿದ್ದಾರೆ.

News Hour: ಮುಗಿಯದ ಭಾರತೀಯರ ಸಂಕಷ್ಟ,  ಎಲ್ಲದಕ್ಕೂ ಕೈ ಕ್ಯಾತೆ!
ನಮ್ಮ ವಿದ್ಯಾರ್ಥಿಗಳು ಸೇರಿದಂತೆ, ಭಾರತದ ಪ್ರಜೆಗಳು ಅದರಲ್ಲೂ ವಿಶೇಷವಾಗಿ ಖಾರ್ಕೀವ್ ಮತ್ತು ಇತರ ಸಂಘರ್ಷ ವಲಯಗಳಿಂದ ಸುರಕ್ಷಿತವಾಗಿ ಹಾಗೂ ತಡೆರಹಿತ ಮಾರ್ಗವನ್ನು ಭಾರತ ಬಯಸುತ್ತದೆ. ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಕ್ರೇನ್ ನ ನೆರೆಯ ದೇಶಗಳಿಲ್ಲಿ ಭಾರತ ಸರ್ಕಾರದ ಹಿರಿಯ ಮಂತ್ರಿಗಳನ್ನು ನಿಯೋಜಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios