ರಿಷಿ ಸುನಕ್ ಆದೇಶ; ಇಂಗ್ಲೆಂಡ್‌ನಲ್ಲಿ ಈ ತಳಿಯ ಶ್ವಾನಗಳ ನಿಷೇಧ, ಏನು ಕಾರಣ?
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶುಕ್ರವಾರ ಮಹತ್ವದ ಘೋಷಣೆ ಮಾಡಿದ್ದಾರೆ. ಅಮೆರಿಕ ಮೂಲದ ಶ್ವಾನಗಳಿಗೆ ಬ್ರಿಟನ್‌ನಲ್ಲಿ ನಿಷೇಧ ಹೇರಿದ್ದಾರೆ.

ನವದೆಹಲಿ (ಸೆ.15): ಸರಣಿ ಭೀಕರ ದಾಳಿಯ ನಂತರ ಅಮೇರಿಕನ್ ಎಕ್ಸ್‌ಎಲ್ ಬುಲ್ಲಿ ಶ್ವಾನಗಳನ್ನು ಬ್ರಿಟನ್‌ನಲ್ಲಿ ನಿಷೇಧಿಸಲಾಗುವುದು ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಶುಕ್ರವಾರ ಘೋಷಿಸಿದ್ದಾರೆ.
"ಅಮೆರಿಕನ್ ಎಕ್ಸ್‌ಎಲ್ ಬುಲ್ಲಿ ಶ್ವಾನಗಳು ನಮ್ಮ ಸಮುದಾಯಗಳಿಗೆ, ವಿಶೇಷವಾಗಿ ನಮ್ಮ ಮಕ್ಕಳಿಗೆ ಅಪಾಯಕಾರಿಯಾಗಿದೆ' ಎಂದು ರಿಷಿ ಸುನಕ್ ಹೇಳಿದ್ದಾರೆ. ಇತ್ತೀಚಿನ ನಾಯಿಗಳ ದಾಳಿಯ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ, ಇನ್ನೆಂದೂ ಈ ಘಟನೆಗಳು ನಡೆಯಬಾರದು ಎಂದು ಈ ನಿರ್ಧಾರ ಕೈಗೊಂಡಿದ್ದಾರೆ. "ಇದು ಕೆಲವು ಕೆಟ್ಟ ತರಬೇತಿ ಪಡೆದ ನಾಯಿಗಳ ಬಗ್ಗೆ ಅಲ್ಲ. ಇದು ನಡವಳಿಕೆಯ ಮಾದರಿಯಾಗಿದೆ ಮತ್ತು ಅದು ಮುಂದುವರಿಯಲು ಸಾಧ್ಯವಿಲ್ಲ ”ಎಂದು ರಿಷಿ ಸುನಕ್ ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ. ಈ ದಾಳಿಗಳನ್ನು ನಿಲ್ಲಿಸುವ ಮಾರ್ಗಗಳ ಕುರಿತು ತಮ್ಮ ಸರ್ಕಾರವು ತುರ್ತಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಯುಕೆ ಪ್ರಧಾನ ಮಂತ್ರಿ ಸಾರ್ವಜನಿಕರಿಗೆ ಭರವಸೆ ನೀಡಿದರು. ರಿಷಿ ಸುನಕ್ ಅವರು ಮೊದಲು ಈ ದಾಳಿಯ ಹಿಂದೆ ಶ್ವಾನದ ತಳಿಯನ್ನು ಕಾನೂನುಬಾಹಿರಗೊಳಿಸುವ ದೃಷ್ಟಿಯಿಂದ ನಿಯಮಗಳನ್ನು ತರಲು ತನ್ನ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ವರದಿಯಾಗಿತ್ತು.
ಇದು ಪ್ರಸ್ತುತ ಕಾನೂನಿನಲ್ಲಿ ವ್ಯಾಖ್ಯಾನಿಸಲಾದ ತಳಿಯಲ್ಲ. ನಾವು ಅಪಾಯಕಾರಿ ಶ್ವಾನಗಳ ಕಾಯಿದೆಯಡಿಯಲ್ಲಿ ತಳಿಯನ್ನು ನಿಷೇಧಿಸುತ್ತೇವೆ. ಬ್ರಿಟನ್‌ನಲ್ಲಿ ಈ ತಳಿ ಸಂಪೂರ್ಣವಾಗಿ ಮುಕ್ತಾಯವಾಗುವವರೆಗೂ ಈ ಕಾನೂನು ಜಾರಿಯಲ್ಲಿರಲಿದೆ ಎಂದು ಮಾಹಿತಿ ನೀಡಿದ್ದಾರೆ. ಅಮೆರಿಕದ ಬುಲ್ಲಿ ಶ್ವಾನಗಳ ಸರಣಿ ದಾಳಿಯ ಹಿನ್ನೆಲೆಯಲ್ಲಿ ಈ ಘೋಷಣೆ ಹೊರಬಿದ್ದಿದೆ.
ಕಳೆದ ವಾರ ಬರ್ಮಿಂಗ್‌ಹ್ಯಾಂನಲ್ಲಿ ಬಾಲಕಿಯೊಬ್ಬಳಿ ಇದೇ ತಳಿಯ ಶ್ವಾನದಿಂದ ಗಾಯಗೊಂಡಿದ್ದಳು. ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ ದಾಳಿಯ ಸಮಯದಲ್ಲಿ ಮಧ್ಯಪ್ರವೇಶಿಸಿದ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಕೆಲವೇ ದಿನಗಳ ನಂತರ, ಸ್ಟೋನಾಲ್‌ನಲ್ಲಿ ಇದೇ ತಳಿಯ ಎರಡು ಶ್ವಾನಗಳ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ಶುಕ್ರವಾರ ಸಾವನ್ನಪ್ಪಿದರು. ಎರಡು ನಾಯಿಗಳು ಅಮೇರಿಕನ್ ಬುಲ್ಲಿ ಎಕ್ಸ್‌ಎಲ್‌ಗಳು ಎಂದು ವರದಿಯಾಗಿದೆ.
ಮಂತ್ರಾಲಯದಲ್ಲಿ ರಾಯರ ಆಶೀರ್ವಾದ ಪಡೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪೋಷಕರು, ಸಾಥ್ ನೀಡಿದ ಸುಧಾಮೂರ್ತಿ!
ಮೂಲತಃ ಅಮೇರಿಕನ್ ಪಿಟ್‌ಬುಲ್ ಟೆರಿಯರ್‌ನಿಂದ ಬೆಳೆಸಲಾದ ನಿರ್ದಿಷ್ಟ ನಾಯಿ ತಳಿಯನ್ನು ನಿಷೇಧಿಸಲು ಈಗಾಗಲೇ ಮನವಿಗಳು ಬಂದಿದವು. ಅವು ಪಿಟ್ ಬುಲ್‌ಗಳಿಗಿಂತ ಸ್ನಾಯುವಿನ ರಚನೆ ಮತ್ತು ಭಾರವಾದ ಮೂಳೆ ರಚನೆಯನ್ನು ಹೊಂದಿವೆ. ಇಂಗ್ಲೆಂಡ್‌ನಲ್ಲಿ ಇಲ್ಲಿಯವರೆಗೆ ನಾಲ್ಕು ತಳಿಗಳ ನಾಯಿಗಳನ್ನು ನಿಷೇಧಿಸಿದೆ- ಪಿಟ್‌ಬುಲ್ ಟೆರಿಯರ್, ಜಪಾನೀಸ್ ಟೋಸಾ, ಡೊಗೊ ಅರ್ಜೆಂಟಿನೋ ಮತ್ತು ಫಿಲಾ ಬ್ರೆಸಿಲಿರೊ ತಳಿಗಳು ನಿಷೇಧಕ್ಕೆ ಒಳಪಟ್ಟಿವೆ.
ಶೇಖ್ ಹಸೀನಾ ಜೊತೆ ಮಂಡಿಯೂರಿ ರಿಷಿ ಮಾತುಕತೆ: ಸುಧಾಮೂರ್ತಿ ಅಳಿಯನ ಸಂಸ್ಕಾರಕ್ಕೆ ಎಲ್ಲೆಡೆ ಶ್ಲಾಘನೆ