ಮಂತ್ರಾಲಯದಲ್ಲಿ ರಾಯರ ಆಶೀರ್ವಾದ ಪಡೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪೋಷಕರು, ಸಾಥ್ ನೀಡಿದ ಸುಧಾಮೂರ್ತಿ!
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಜೊತೆಯಲ್ಲಿಯೇ ಭಾರತಕ್ಕೆ ಆಗಮಿಸಿದ್ದ ಅವರ ತಂದೆ ಯಶ್ವೀರ್ ಸುನಕ್ ಹಾಗೂ ತಾಯಿ ಉಷಾ ಸುನಕ್, ಬುಧವಾರ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಬೀಗತಿ ಸುಧಾಮೂರ್ತಿ ಕೂಡ ಸಾಥ್ ನೀಡಿದರು.
ರಾಯಚೂರು (ಸೆ.13): ಜಿ20 ಶೃಂಗಸಭೆಗಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ, ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಭಾರತಕ್ಕೆ ಆಗಮಿಸಿದ್ದರು. ಅವರೊಂದಿಗೆ ರಿಷಿ ಸುನಕ್ ಅವರ ತಂದೆ ಯಶ್ವೀರ್ ಸುನಕ್ ಹಾಗೂ ತಾಯಿ ಉಷಾ ಸುನಕ್ ಕೂಡ ಭಾರತಕ್ಕೆ ಬಂದಿದ್ದರು. ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ರಾಜ್ಯ ಭೇಟಿ ಎನಿಸಿದ್ದರೆ, ಇವರಿಬ್ಬರೂ ಖಾಸಗಿಯಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಸಾಥ್ ನೀಡಿರುವ ಬೀಗತಿ ಸುಧಾಮೂರ್ತಿ ರಾಜ್ಯದ ವಿವಿಧ ದೇವಾಲಯಗಳ ದರ್ಶನ ಮಾಡಿಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಶಾಸಕ ಉದಯ್ ಗರುಡಾಚಾರ್ ಅವರ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಯಶ್ವೀರ್ ಹಾಗೂ ಉಷಾ ಸುನಕ್ ಭಾಗಿಯಾಗಿದ್ದರು. ಈ ವೇಳೆ ಉಷಾ ಸುನಕ್ ಭಾರತೀಯ ಸಂಪ್ರದಾಯದಂತೆ ಅರಿಶಿನ ಕುಂಕುಮ ಸ್ವೀಕಾರ ಮಾಡಿದ್ದು ಮೆಚ್ಚುಗೆಗೆ ಕಾರಣವಾಗಿತ್ತು. ಈ ಸಮಯದಲ್ಲೂ ಕೂಡ ಇನ್ಫೋಸಿಸ್ ಫೌಂಡೇಷನ್ ಮಾಜಿ ಮುಖ್ಯಸ್ಥೆ ಸುಧಾ ಮೂರ್ತಿ ಉಪಸ್ಥಿತರಿದ್ದರು. ಆಧ್ಮಾತ್ಮಿಕತೆ ಹಾಗೂ ದೇವರಲ್ಲಿ ನಂಬಿಕೆ ಇರಿಸಿಕೊಂಡಿರುವ ಯಶ್ವೀರ್ ಹಾಗೂ ಉಷಾ ಸುನಕ್, ಬುಧವಾರ ಮಂತ್ರಾಲಯ ದೇವಸ್ಥಾನಕ್ಕೆ ಭೇಟಿ ನೀಡಿ ಗುರು ರಾಘವೇಂದ್ರರ ಆಶೀರ್ವಾದ ಪಡೆದರು.
ಮೊದಲು ರಾಯರ ಆಶೀರ್ವಾದ ಪಡೆದ ರಿಷಿ ಸುನಕ್ ಪಾಲಕರು, ಬಳಿಕ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಶ್ರೀಗರು ಕೂಡ ರಿಷಿ ಸುನಕ್ ಪಾಲಕರಿ ಆಶೀರ್ವಚನ ಮಾಡಿದರು. ನಂತರ ಮಂತ್ರಾಲಯದ ಪ್ರಸಾದ ಹಾಗೂ ಮಂತ್ರಾಕ್ಷತೆ ನೀಡಿ ಅವರಿಗೆ ಆಶೀರ್ವಾದ ನೀಡಿದರು. ಅದಲ್ಲದೆ, ಬ್ರಿಟನ್‌ಗೆ ತೆರಳಿದ ಬಳಿಕ ರಿಷಿ ಷುನಕ್ ಹಾಗೂ ಅಕ್ಷತಾ ಮೂರ್ತಿ ಅವರಿಗೆ ಮಂತ್ರಾಕ್ಷತೆ ಮತ್ತು ಪರಿಮಳ ಪ್ರಸಾದವನ್ನು ನೀಡುವಂತೆ ತಿಳಿಸಿದ್ದರು.
ಬೆಂಗಳೂರಿಗೆ ಬಂದು ಅರಿಶಿಣ-ಕುಂಕುಮ ಪಡೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಾಯಿ: ಬೀಗತಿ ಸುಧಾಮೂರ್ತಿ ಸಾಥ್
ಇನ್ನು ರಿಷಿ ಹಾಗೂ ಅಕ್ಷತಾ ಮೂರ್ತಿ ಕೂಡ ಜಿ20 ಶೃಂಗಸಭೆಯ ನಡುವೆಯೇ, ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಪೂಜೆ ಸಲ್ಲಿಸಿದ ದಂಪತಿಗಳು ಅಲ್ಲಿನ ಸಾಧು ಸಂತರೊಂದಿಗೆ ನಿಂತು ಫೋಟೋ ತೆಗೆಸಿಕೊಂಡಿದ್ದರು.
ನಿಮ್ಗೆ ಗಂಡನಾಗೋ ಮೊದ್ಲು ಆತ ತಾಯಿಗೆ ಮಗ, ಸೋ ಅತ್ತೆ ಜೊತೆ ಸ್ಪರ್ಧೆ ಮಾಡ್ಬೇಡಿ; ಸುಧಾಮೂರ್ತಿ
ಮಂತ್ರಾಲಯ ರಾಯರಿಂದ ಆಶೀರ್ವಾದ ಪಡೆದುಕೊಂಡ ಯಶ್ವೀರ್ ಸುನಕ್ ಮತ್ತು ಉಷಾ ಸುನಕ್
ಯಶ್ವೀರ್ ಸುನಕ್ ಅವರಿಗೆ ಶಾಲು ಹೊದಿಸಿ ಪೀಠಾಧಿಪತಿಗಳು ಸನ್ಮಾನಿಸಿದರು