Asianet Suvarna News Asianet Suvarna News

ಸುಳ್ಳು ಕೇಸ್ ಹಾಕ್ತಾರೆ ಹುಷಾರ್... ಪೊಲೀಸರ ಮೇಲೆ 750 ಲೈಂಗಿಕ ದೌರ್ಜನ್ಯ  ಪ್ರಕರಣ

* ಯುಕೆ ಪೊಲೀಸರ ವಿರುದ್ಧ ಸುಳ್ಳು ದೂರುಗಳು
* ನಿರಂತರವಾಗಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಿದೆ
* ಯಾರದ್ದೋ ಒತ್ತಡಕ್ಕೆ ಗುರಿಯಾಗಿ ಅಧಿಕಾರಿಗಳ ವಿರುದ್ಧ ಪ್ರಕರಣ
* ವ್ಯವಸ್ಥೆಯ ಲೋಪಗಳ ಬಗ್ಗೆಯೂ ತನಿಖೆಯಾಗಲಿದೆ

UK police officers face hundreds of sexual assault allegations mah
Author
Bengaluru, First Published Oct 12, 2021, 8:43 PM IST

ಲಂಡನ್ ( ಅ. 13)  ಇದೊಂದು ವಿಚಿತ್ರ ರೀತಿಯ ಪ್ರಕರಣ ಎಂದೇ ಹೇಳಬಹುದು.  ಕನಿಷ್ಠ  750ಕ್ಕೂ ಅಧಿಕ ಹುರುಳಿಲ್ಲದ ಲೈಂಗಿಕ ದೌರ್ಜನ್ಯ(sexual misconduct ) ಪ್ರಕರಣಗಳು  ಯುಕೆಯ ಪೊಲೀಸ್ ಅಧಿಕಾರಿಗಳ (UK police)ಮೇಲೆ ದಾಖಲಾಗಿದೆ. 2016  ರಿಂದ 2020 ನಡುವಿನ ಅವಧಿಯ ಡೇಟಾ ಇದನ್ನು ತೆರೆದಿರಿಸಿದೆ. ಬಹುತೇಕ ಪ್ರಕರಣಗಳು ಯಾರದ್ದೋ ಒತ್ತಾಯಕ್ಕೆ ಮಣಿದು ಅಧಿಕಾರಿಗಳ ತೇಜೋವಧೆ ಮಾಡಲು ಸಲ್ಲಿಸಿದ್ದೇ ಆಗಿವೆ. 

ಪಿಎ ಮೀಡಿಯಾ ರಾಡರ್ ಪೋರ್ಸಸ್ ಅಂಕಿ ಅಂಶಗಳನ್ನು ಪ್ರಕಟ ಮಾಡಿದೆ.  ಪುರುಷ ಪೊಲೀಸ್ ಅಧಿಕಾರಿಗಳ ಮೇಲೆ ಅತಿ ಹೆಚ್ಚಿನ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದೆ. ಪ್ರತಿಯೊಂದು ಪ್ರಕರಣವನ್ನು ಎರಡು ಕಡೆಯ ದೃಷ್ಟಿಯಿಂದಲೇ ದಾಖಲು ಮಾಡಿಕೊಳ್ಳಲಾಗಿದೆ.   ಇಂಥ ವರ್ತನೆಯನ್ನು ಯಾವ ಕಾರಣಕ್ಕೂ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ವಕ್ತಾರರೊಬ್ಬರು ಹೇಳಿದ್ದಾರೆ.  

ಹೆಣ್ಮಕ್ಕಳ ಕನ್ಯತ್ವ ಪರೀಕ್ಷಿಸುವ Two Finger Test: ಏನಿದು? ಭಾರತದಲ್ಲೇಕೆ ನಿಷೇಧ?

ಎಲ್ಲ ದೂರುಗಳನ್ನು ಒತ್ತಾಯಪೂರ್ವಕವಾಗಿ ನೀಡಿಲಾಗುತ್ತಿರುವುದು ಗೊತ್ತಾಗಿದೆ. ಸುಮಾರು 34  ಪ್ರಕರಣಗಳು ಹುರುಳಿಲ್ಲ ಎಂದು ಡಿಸ್ ಮಿಸ್ ಆಗಿವೆ.   ಕೆಲ ಪ್ರಕರಣಗಳಿಗೆ ತಲೆ ಬುಡವೇ ಇಲ್ಲ ಎಂಬುದನ್ನು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ತೇಜೋವಧೆ ಮಾಡುವ ಕಾರಣಕ್ಕೆ ಇಂಥ ಪ್ರಕರಣಗಳನ್ನು ದಾಖಲಿಸಲಾಗುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.  ಗೃಹ ಕಾರ್ಯದರ್ಶಿ ಪ್ರೀತಿ ಪಾಟೀಲ್ ಈ ಅಂಕಿ ಅಂಶಗಳನ್ನು ನೀಡಿದ್ದಾರೆ.  ವ್ಯವಸ್ಥೆಯಲ್ಲಿ ಏನು ಲೋಪಗಳಿವೆ ಎಂಬುದನ್ನು ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿಯೂ  ಈ ರೀತಿ ಸುಳ್ಳು ದೂರು ದಾಖಲಾಗಿರುವ ಉದಾಹರಣೆಗಳಿವೆ. ಬಾಲಿವುಡ್  ನಲ್ಲಿ ಇದೇ ಆಧಾರದ ಕತೆಯನ್ನು  ಇಟ್ಟುಕೊಂಡು ಅನೇಕ ಸಿನಿಮಾಗಳು ಬಂದಿವೆ.  ಉನ್ನತ ಸ್ಥಾನದಲ್ಲಿ ಇರುವವರ ತೇಜೋವಧೆ ಮಾಡುವುದಕ್ಕೆ ಈ ರೀತಿಯ ಅಸ್ತ್ರ ಬಳಸಿಕೊಳ್ಳುವುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. 

 

 

Follow Us:
Download App:
  • android
  • ios