Asianet Suvarna News Asianet Suvarna News

ಟಿಪ್ಪು ಸಿಂಹಾಸನದ ಕಳಸ 15 ಕೋಟಿಗೆ ಹರಾಜು

  • ಮೈಸೂರು ಹುಲಿ ಟಿಪ್ಪು ಸುಲ್ತಾನ್‌ನ ಸಿಂಹಾಸನದಲ್ಲಿ ಅಳವಡಿಸಿದ್ದ, ದಶಕಗಳ ಹಿಂದೆ ಭಾರತದಿಂದ ಲೂಟಿ ಹೊಡೆಯಲಾಗಿದ್ದ ಸಿಂಹಾಸನನದ ಕಳಸ
  • ಕಳಸವೊಂದನ್ನು ಬ್ರಿಟನ್‌ ಸರ್ಕಾರ ಹರಾಜಿಗೆ ಇಟ್ಟಿದೆ. ಹುಲಿಯ ತಲೆಯುಳ್ಳ ಈ ಐತಿಹಾಸಿಕ ಈ ಕಳಸಕ್ಕೆ 15 ಕೋಟಿ ರು. ಬೆಲೆ ನಿಗದಿ
UK is Auctioning Tipu Sultans Throne Finial  snr
Author
Bengaluru, First Published Nov 17, 2021, 7:59 AM IST

ಲಂಡನ್‌ (ನ.17) : ಮೈಸೂರು ಹುಲಿ (Mysuru huli) ಟಿಪ್ಪು ಸುಲ್ತಾನ್‌ನ (Tipu sultan) ಸಿಂಹಾಸನದಲ್ಲಿ ಅಳವಡಿಸಿದ್ದ, ದಶಕಗಳ ಹಿಂದೆ ಭಾರತದಿಂದ (India) ಲೂಟಿ ಹೊಡೆಯಲಾಗಿದ್ದ ಸಿಂಹಾಸನನದ ಕಳಸವೊಂದನ್ನು ಬ್ರಿಟನ್‌ (Britain Govt) ಸರ್ಕಾರ ಹರಾಜಿಗೆ ಇಟ್ಟಿದೆ. ಹುಲಿಯ ತಲೆಯುಳ್ಳ ಈ ಐತಿಹಾಸಿಕ (Historical) ಈ ಕಳಸಕ್ಕೆ 15 ಕೋಟಿ ರು. ಬೆಲೆ ನಿಗದಿ ಪಡಿಸಲಾಗಿದೆ.

ಬ್ರಿಟನ್‌ನ ಸಂಸ್ಕೃತಿ ಇಲಾಖೆ ಇದನ್ನು ಹರಾಜಿಗೆ ಇಟ್ಟಿದೆಯಾದರೂ, ಇದರ ರಫ್ತಿಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಈ ಮೂಲಕ ಅದಕ್ಕೆ ಬ್ರಿಟನ್‌ನ ಖರೀದಿದಾರರನ್ನೇ ಹುಡುಕಿ ಆ ಮೂಲಕ ಕಳಸವನ್ನು ಬ್ರಿಟನ್‌ನಲ್ಲೇ ಉಳಿಸಿಕೊಳ್ಳುವ ಯತ್ನವನ್ನು ಸರ್ಕಾರ ಮಾಡಿದೆ.

18ನೇ ಶತಮಾನದಲ್ಲಿ ಮೈಸೂರು (mysuru) ರಾಜ್ಯವನ್ನು ಆಳುತ್ತಿದ್ದ ವೇಳೆ ಟಿಪ್ಪು ಸುಲ್ತಾನ್‌ ಬಳಸುತ್ತಿದ್ದ ಸಿಂಹಾಸನದಲ್ಲಿ ಒಟ್ಟು 9 ಕಳಸಗಳಿದ್ದವು. ಆ ಪೈಕಿ ಇದು ಕೂಡಾ ಒಂದು.

ಟಿಪ್ಪು ಇತಿಹಾಸ ಹೇಳಿದ ಸಿದ್ದರಾಮಯ್ಯ : 

ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್, ಬಿಟ್ ಕಾಯಿನ್ ಹಗರಣ ಹಾಗೂ ದಲಿತ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದು ಈ ಕೆಳಗಿನಂತಿದೆ.

ಟಿಪ್ಪು ಸುಲ್ತಾನ್ ಇತಿಹಾಸ ತಿಳಿಸಿದ ಸಿದ್ದು
ಟಿಪ್ಪು ಜಾತ್ಯತೀತ ದೊರೆ ಹಾಗೂ ಒಬ್ಬ ಜನನಾಯಕ ಆಗಿದ್ದ. ಟಿಪ್ಪು ಒಬ್ಬ ಹಿಂದೂ ವಿರೋಧಿಯಾಗಿದ್ದರೆ ತನ್ನ ಆಸ್ಥಾನದಲ್ಲಿ ಹಿಂದೂಗಳನ್ನು ದೀವಾನರಾಗಿ, ಮಂತ್ರಿಗಳಾಗಿ ಇಟ್ಟುಕೊಳ್ಳುತ್ತಿದ್ದನೇ? ಎಂದು ಪ್ರಶ್ನಿಸಿದರು.

ಟಿಪ್ಪು ಜಯಂತಿಗೆ ಕಾಂಗ್ರೆಸ್ ನಾಯಕ, ಮುಸ್ಲಿಂ ಮುಖಂಡ ಸಿಎಂ‌ ಇಬ್ರಾಹಿಂ ವಿರೋಧ

ಉಳುವವನೇ ಭೂಮಿಯ ಒಡೆಯ ಕಾನೂನನ್ನು ಮೊದಲಿಗೆ ಜಾರಿಗೆ ತಂದಿದ್ದು ಹೈದರಾಲಿ. ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್. ಹೀಗೆ ನಾಡಿಗೆ ಟಿಪ್ಪು ಮತ್ತು ಹೈದರಾಲಿ ಕೊಡುಗೆ ಅಪಾರವಾದುದ್ದು ಎಂದು ತಿಳಿಸಿದರು.

ಶೃಂಗೇರಿ ಸೇರಿ ಹಲವು ಮಠ, ಮಂದಿರಗಳಿಗೆ ಟಿಪ್ಪು ರಕ್ಷಣೆ, ನೆರವು ನೀಡಿರುವುದಕ್ಕೆ ಅಪಾರ ದಾಖಲೆಗಳಿವೆ. ಟಿಪ್ಪು ಎಲ್ಲೆಲ್ಲಿ ಮಸೀದಿ ಕಟ್ಟಿಸಿದ್ದರೋ ಅದರ ಪಕ್ಕದಲ್ಲೇ ದೇವಸ್ಥಾನಗಳನ್ನೂ ಕಟ್ಟಿಸುತ್ತಿದ್ದರು ಎನ್ನುವುದಕ್ಕೆ ದಾಖಲೆಗಳಿವೆ.  ಧರ್ಮದ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸುವ ಆರ್‌ಎಸ್‌ಎಸ್ ಎಂದಾದರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದೆಯೇ? ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಯಾರಾದರೂ ಆರ್‌ಎಸ್‌ಎಸ್ ನವರು ಪ್ರಾಣ ಬಿಟ್ಟ ಉದಾಹರಣೆಗೆ ಇದೆಯಾ? 

ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಹೋರಾಡಿ, ತಮ್ಮ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಬಗ್ಗೆ ನನಗೆ ಹೆಮ್ಮೆ ಇದೆ. ಇತಿಹಾಸ ಪುರುಷರನ್ನು ಧರ್ಮದ ಆಧಾರದ ಮೇಲೆ ದ್ವೇಷಿಸುವ ಆರ್.ಎಸ್.ಎಸ್ ನವರ ಮಾತುಗಳಿಗೆ "ಐ ಡೋಂಟ್ ಕೇರ್".
ಕೆಂಪೇಗೌಡ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಹೆಮ್ಮೆ ನಮ್ಮ ಸರ್ಕಾರದ್ದು. ಭಾರತವನ್ನು ದಾಸ್ಯಕ್ಕೆ ದೂಡಿದ ಬ್ರಿಟಿಷರ ಪರವಾಗಿ ನಾವು ಇರಬೇಕೋ? ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಹೋರಾಡಿದ ಟಿಪ್ಪು ಸುಲ್ತಾನ್ ಪರವಾಗಿ ಇರಬೇಕೋ?

ನಾಡಿನಲ್ಲಿ ರೇಷ್ಮೆ ಬೆಳೆ ಆರಂಭಿಸಿದ್ದು ಟಿಪ್ಪು ಸುಲ್ತಾನ್. ಆ ಕಾಲದಲ್ಲೇ ವಿದೇಶಿ ವಿನಿಮಯ ಪ್ರಾರಂಭಿಸಿ ವ್ಯಾಪಾರ ವಹಿವಾಟಿಗೆ ಮಹತ್ವ ನೀಡಿದ್ದಲ್ಲದೆ ಜಾತ್ಯತೀತ ಆಡಳಿತ ನೀಡಿ ಹಿಂದೂ ದಿವಾನರನ್ನು , ಮಂತ್ರಿಗಳನ್ನು ನೇಮಿಸಿಕೊಂಡು ಜನ ನಾಯಕ ಎನ್ನಿಸಿಕೊಂಡಿದ್ದರು.
ಈ ದೇಶ 136 ಕೋಟಿ ಭಾರತೀಯರಿಗೂ ಸೇರಿದ್ದು. ಕೇವಲ ಒಂದು ಜಾತಿಯವರಿಗೆ, ಒಂದು ಧರ್ಮಕ್ಕೆ ಮಾತ್ರ ಈ ದೇಶ ಸೇರಿದ್ದಲ್ಲ. ಸಂಕುಚಿತ ಸಿದ್ಧಾಂತಕ್ಕಾಗಿ ಭಾರತೀಯರ ನಡುವೆ ಬಿರುಕು ತರಬಾರದು. ಅಂಥವರ ಮಾತುಗಳ ಬಗ್ಗೆ ಜನ ಜಾಗೃತರಾಗಬೇಕು.

Follow Us:
Download App:
  • android
  • ios