ಲಂಡನ್(ಡಿ.03)‌: ಬ್ರಿಟನ್‌ ಸರ್ಕಾರ ಫೈಝರ್‌- ಬಯೋಎನ್‌ಟೆಕ್‌ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಕೊರೋನಾ ನಿಗ್ರಹಕ್ಕೆ ಬಳಸಲು ಅನುಮತಿ ನೀಡುವುದರೊಂದಿಗೆ, ಅಂತೂ ಕೊರೋನಾ ವಿರುದ್ಧ ವೈದ್ಯಕೀಯ ಸಮುದಾಯದ ಹೋರಾಟ ನಿರ್ಣಾಯಕ ಘಟ್ಟಕ್ಕೆ ತಲುಪಿದಂತಾಗಿದೆ.

ನಮ್ಮ ಲಸಿಕೆ ಶೇ.100ರಷ್ಟು ಪರಿಣಾಮಕಾರಿ, ಬಳಕೆಗೆ ಅನುಮತಿ ಕೊಡಿ: ಮಾಡೆರ್ನಾ!

ಆದರೆ ಅಚ್ಚರಿಯ ವಿಷಯವೆಂದರೆ ಇಂಥದ್ದೊಂದು ಲಸಿಕೆಯನ್ನು ಇಷ್ಟುಅಲಾವಧಿಯಲ್ಲಿ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜರ್ಮನಿ ಮೂಲದ ಬಯೋಎನ್‌ಟೆಕ್‌ ಕಂಪನಿ, ಇದುವರೆಗೆ ಜಾಗತಿಕ ಮಾರುಕಟ್ಟೆಗೆ ಒಂದೇ ಒಂದು ಲಸಿಕೆಯನ್ನು ಕೂಡಾ ಬಿಡುಗಡೆ ಮಾಡಿದ ಇತಿಹಾಸ ಹೊಂದಿಲ್ಲ. ಆದರೂ ಕೊರೋನಾ ವಿರುದ್ಧದ ಹೋರಾಟದಲ್ಲಿ ಅದು ಜಗತ್ತಿಗೆ ಮುಂಚೂಣಿಯಾಗಿ ಹೊರಹೊಮ್ಮುವ ಮೂಲಕ ಎಲ್ಲೆಡೆ ಸದ್ದು ಮಾಡಿದೆ.

ಈ ಲಸಿಕೆ ಅಭಿವೃದ್ಧಿಯಲ್ಲಿ ಅಮೆರಿಕ ಮೂಲದ ಫೈಝರ್‌ ಹೆಸರು ಪ್ರಮುಖವಾಗಿ ಕೇಳಿಬಂದಿದೆಯಾದರೂ, ಲಸಿಕೆ ಅಭಿವೃದ್ಧಿಸಲು ಕಾರಣವಾದ ಹೊಸ ತಂತ್ರಜ್ಞಾನದ ಹಿಂದಿನ ಶಕ್ತಿ ಜರ್ಮನ್‌ ಮೂಲದ ಕೇವಲ 1500 ಸಿಬ್ಬಂದಿ ಹೊಂದಿರುವ ಬಯೋಎನ್‌ಟೆಕ್‌ ಎಂಬ ಪುಟ್ಟ ಕಂಪನಿ.

ಕೋವ್ಯಾಕ್ಸಿನ್‌ ಟ್ರಯಲ್‌ಗೆ ಸಿಎಂ ಯಡಿಯೂರಪ್ಪ ಚಾಲನೆ

ಬಯೋಎನ್‌ಟೆಕ್‌ ಮೂಲತಃ ಕ್ಯಾನ್ಸರ್‌ಗೆ ಇಮ್ಯುನೋಥೆರಪಿ ಅಭಿವೃದ್ಧಿಪಡಿಸುವುದರಲ್ಲಿ ತೊಡಗಿಸಿಕೊಂಡ ಕಂಪನಿ. ಆ ಚಿಕಿತ್ಸೆಯಲ್ಲಿ ಅದು ಜೀವಕೋಶದಲ್ಲಿರುವ ಪ್ರೋಟಿನ್‌ ಕಣಗಳನ್ನು ಬಳಸಿಕೊಂಡು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಸಂಶೋಧನೆ ನಡೆಸುತ್ತಿದೆ. ರೈಬೋನ್ಯೂಕ್ಲಿಯಿಕ್‌ ಆಮ್ಲ (ಆರ್‌ಎನ್‌ಎ) ಆಧಾರಿತವಾದ ತನ್ನ ಕ್ಯಾನ್ಸರ್‌ ಚಿಕಿತ್ಸೆ ತಂತ್ರಜ್ಞಾನವನ್ನೇ ಆಧರಿಸಿ ಫä್ಲಗೆ ಲಸಿಕೆ ಕಂಡುಹಿಡಿಯಲು ಬಯೋಎನ್‌ಟೆಕ್‌ ಕಂಪನಿ 2018ರಲ್ಲಿ ಫೈಝರ್‌ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.

ರಾಜ್ಯದಲ್ಲಿ ಹೊಸ ವರ್ಷಾಚರಣೆ ನಿಷೇಧ ಸಾಧ್ಯತೆ: ರಾತ್ರಿ ಕರ್ಫ್ಯೂ ಜಾರಿ?

ಈ ನಡುವೆ 2019ರ ಅಂತ್ಯದಲ್ಲಿ ದಿಢೀರನೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎರಡೂ ಕಂಪನಿಗಳು ತಮ್ಮ ಗಮನವನ್ನು ಕೊರೋನಾಗೆ ಲಸಿಕೆ ಕಂಡುಹಿಡಿಯಲು ತಿರುಗಿಸಿಕೊಂಡವು. ಅದರ ಪರಿಣಾಮ ಕೆಲವೇ ತಿಂಗಳಲ್ಲಿ ಲಸಿಕೆ ಸಿದ್ಧವಾಗಿ ಮೂರೂ ಹಂತದ ಪ್ರಯೋಗಕ್ಕೆ ಒಳಪಟ್ಟು ಶೇ.95ರಷ್ಟುಪರಿಣಾಮಕಾರಿಯಾಗಿ ಇದೀಗ ಜಗತ್ತಿನ ಮುಂದೆ ಬಂದು ನಿಂತಿದೆ.