ನಮ್ಮ ಲಸಿಕೆ ಶೇ.100ರಷ್ಟು ಪರಿಣಾಮಕಾರಿ, ಬಳಕೆಗೆ ಅನುಮತಿ ಕೊಡಿ: ಮಾಡೆರ್ನಾ| ಯುರೋಪ್‌ನಲ್ಲೂ ತುರ್ತು ಬಳಕೆಗೆ ಅನುಮತಿ ಕೋರಿದ ಕಂಪನಿ
ವಾಷಿಂಗ್ಟನ್(ಡಿ.03): ಕೊರೋನಾ ವೈರಸ್ ತಗಲದಂತೆ ತಡೆಯುವ ಲಸಿಕೆಗೆ ಫೈಝರ್ ಕಂಪನಿ ಕಳೆದ ವಾರವಷ್ಟೇ ಅಮೆರಿಕ ಸರ್ಕಾರದ ಬಳಿ ತುರ್ತು ಬಳಕೆಗೆ ಅನುಮತಿ ಕೇಳಿದ ಬೆನ್ನಲ್ಲೇ ಇದೀಗ ಇನ್ನೊಂದು ಪ್ರಮುಖ ಲಸಿಕೆ ತಯಾರಿಕಾ ಕಂಪನಿಯಾದ ಮಾಡೆರ್ನಾ ತನ್ನ ಲಸಿಕೆಗೂ ತುರ್ತು ಬಳಕೆಯ ಅನುಮತಿ ಕೇಳಿದೆ. ಅಲ್ಲದೆ, ಮಾಡೆರ್ನಾ ಕಂಪನಿ ತನ್ನ ಲಸಿಕೆಯು ತೀವ್ರತರದ ಕೊರೋನಾ ಸೋಂಕು ತಡೆಯುವಲ್ಲಿ ಶೇ.100ರಷ್ಟುಪರಿಣಾಮಕಾರಿ ಎಂದೂ ಹೇಳಿಕೊಂಡಿದ್ದು, ಯುರೋಪ್‌ನಲ್ಲೂ ತುರ್ತು ಬಳಕೆಗೆ ಅನುಮತಿ ಕೋರಿದೆ.
ಒಂದೂ ಲಸಿಕೆ ಬಿಡುಗಡೆ ಮಾಡಿರದ ಕಂಪನಿಯಿಂದ ಕೊರೋನಾಗೆ ಮದ್ದು!
ಫೈಝರ್ ಕಂಪನಿ ತನ್ನ ಲಸಿಕೆ ಶೇ.95ರಷ್ಟುಪರಿಣಾಮಕಾರಿ ಎಂದು ಹೇಳಿಕೊಂಡಿತ್ತು. ಆದರೆ, ಮಾಡೆರ್ನಾ ಕಂಪನಿ ತೀವ್ರತರದ ಕೊರೋನಾ ಸೋಂಕು ತಡೆಯುವಲ್ಲಿ ತನ್ನ ಲಸಿಕೆ ಶೇ.100 ಪರಿಣಾಮಕಾರಿ ಎಂದು ಹೇಳಿಕೊಂಡಿದೆ. ಅಲ್ಲದೆ, ಫೈಝರ್ ಕಂಪನಿಯ ಲಸಿಕೆಯನ್ನು -70 ಡಿಗ್ರಿಯಲ್ಲಿ ಶೇಖರಿಸಿಡಬೇಕಿದ್ದು, ಅದು ಲಸಿಕೆಯ ವಿತರಣೆಯನ್ನು ಕಷ್ಟವಾಗಿಸಲಿದೆ. ಆದರೆ, ಮಾಡೆರ್ನಾ ಲಸಿಕೆಯನ್ನು ಸಾಮಾನ್ಯ ಫ್ರೀಜರ್‌ನ ಕನಿಷ್ಠ ಉಷ್ಣತೆಯಲ್ಲೇ ಶೇಖರಿಸಬಹುದು. ಹೀಗಾಗಿ ಇದನ್ನು ವಿತರಿಸುವುದು ಸುಲಭವೆಂದು ಹೇಳಲಾಗುತ್ತಿದೆ.
ಕೋವ್ಯಾಕ್ಸಿನ್ ಟ್ರಯಲ್‌ಗೆ ಸಿಎಂ ಯಡಿಯೂರಪ್ಪ ಚಾಲನೆ
ಈ ಎರಡೂ ಕಂಪನಿಗಳ ಲಸಿಕೆಯನ್ನು ಅಮೆರಿಕದ ಸ್ವತಂತ್ರ ವಿಜ್ಞಾನಿಗಳು ಶೀಘ್ರದಲ್ಲೇ ಮೌಲ್ಯಮಾಪನ ನಡೆಸಲಿದ್ದಾರೆ. ನಂತರ ಫೈಝರ್ ಲಸಿಕೆಗೆ ಮೊದಲು ಹಾಗೂ ಮಾಡೆರ್ನಾ ಲಸಿಕೆಗೆ ಕೆಲ ದಿನಗಳ ನಂತರ ತುರ್ತು ಬಳಕೆಗೆ ಅನುಮತಿ ದೊರೆಯುವ ಸಾಧ್ಯತೆಯಿದೆ.
