ಕೆಎಫ್‌ಸಿ ಚಿಕನ್‌ನಲ್ಲಿ ಕೋಳಿಯ ಇಡೀ ತಲೆ ಆಹಾರ ತಿನ್ನುತ್ತಿದ್ದಾಗ ಕೋಳಿ ತಲೆ ನೋಡಿ ಆಘಾತ ಇಂಗ್ಲೆಂಡ್‌ನ ಟ್ವಿಕನ್‌ಹ್ಯಾಮ್‌ನಲ್ಲಿ ಘಟನೆ

ಇಂಗ್ಲೆಂಡ್‌(ಡಿ.23): ಕೆಎಫ್‌ಸಿ ಚಿಕನ್‌ ಎಂದರೆ ಮಾಂಸಾಹಾರ ತಿನ್ನುವ ಎಲ್ಲರೂ ಬಾಯಲ್ಲಿ ನೀರೂರುವುದು ಸಾಮಾನ್ಯ ಆದರೆ ಈಗ ಈ ಸುದ್ದಿ ಕೇಳಿದರೆ ಕೆಎಫ್‌ಸಿ ಚಿಕನ್‌ ಅಭಿಮಾನಿಗಳು ಗಾಬರಿಯಾಗುವುದು ಸಾಮಾನ್ಯ. ಹೌದು ಯುನೈಟೆಡ್ ಕಿಂಗ್‌ಡಮ್‌ನಲ್ಲಿ(UK) ಕೆಎಫ್‌ಸಿ ಗ್ರಾಹಕರೊಬ್ಬರಿಗೆ ಕೋಳಿಯ ಇಡೀ ತಲೆಯೇ ಕೆಎಫ್‌ಸಿ ಟೇಕ್ ಅವೇ (KFC takeaway) ಬಾಕ್ಸ್‌ನಲ್ಲಿ ಸಿಕ್ಕಿದ್ದು, ಇದನ್ನು ನೋಡಿ ಅವರು ಗಾಬರಿಯಾಗಿದ್ದಾರೆ. ಕೆಎಫ್‌ಸಿಯಿಂದ ಚಿಕನ್‌ ಆರ್ಡರ್‌ ಮಾಡಿದ ಅವರು ಅರ್ಧ ತಿಂದ ನಂತರ ಒಳ ಭಾಗದಲ್ಲಿ ಕೋಳಿಯ ಕಣ್ಣು ಕೊಕ್ಕು ಇರುವಂತಹ ಇಡೀ ತಲೆ ಕಾಣಿಸಿಕೊಂಡಿದ್ದು, ಆಹಾರವನ್ನು ಅರ್ಧಕ್ಕೆ ಬಿಟ್ಟು ಮೇಲೆದಿದ್ದಾರೆ. ತಮ್ಮ ಈ ಹಾರರ್‌ ಅನುಭವವನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ.

ಗ್ಯಾಬ್ರಿಯಲ್‌ (Gabrielle) ಹೆಸರಿನ ಗ್ರಾಹಕರೊಬ್ಬರು ಇಂಗ್ಲೆಂಡ್‌ (England)ನ ಟ್ವಿಕನ್‌ಹ್ಯಾಮ್‌ (Twickenham) ನಲ್ಲಿರುವ ಕೆಎಫ್‌ಸಿ ಶಾಫ್‌ವೊಂದರಿಂದ ಆಹಾರವನ್ನು( takeaway meal ) ಆರ್ಡರ್‌ ಮಾಡಿದ್ದಾರೆ. ಈ ಬಾರಿ ಎಂದಿನಂತೆ ಕೆಎಫ್‌ಸಿಯ ರುಚಿಗೆ ಖುಷಿ ಪಡುವ ಬದಲು ಗಾಬರಿಯಾಗುವ ಸರದಿ ಅವರದಾಗಿತ್ತು. ಜಸ್ಟ್‌ಈಟ್‌ ಡಾಟ್‌ನಲ್ಲಿ (JustEast.) ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ನನ್ನ ಆಹಾರದ ಮಧ್ಯದಲ್ಲಿ ಫ್ರೈ ಮಾಡಲಾದ ಕೋಳಿಯ ಇಡೀ ತಲೆ ಇತ್ತು. ಇದನ್ನು ನೋಡಿ ಆಹಾರ ಸೇವಿಸುತ್ತಿದ್ದ ನಾನು ಉಳಿದ ಆಹಾರವನ್ನು ಅಲ್ಲೇ ಬಿಡುವಂತಾಯಿತು ಎಂದು ಬರೆದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಟೇಕ್‌ ಅವೇ ಟ್ರೂಮಾ (Takeawaytrauma) ಎಂಬ ಪೇಜ್‌ ಮಾಡಿ ಆಕೆ ತನ್ನ ಅನುಭವವನ್ನು ಅಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕೆಎಫ್‌ಸಿ ಪ್ರಿಯರು ಗಾಬರಿಗೊಳಗಾಗಿರುವುದಂತು ನಿಜ

View post on Instagram

ಆದರೆ ಕೆಎಫ್‌ಸಿ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ಸುಳ್ಳು, ಹೇಗೆ ಕೋಳಿಯ ಇಡೀ ತಲೆ ಗ್ರಾಹಕರಿಗೆ ನೀಡಲು ಸಾಧ್ಯ. ಹೀಗೆ ದೂರುವ ಮಹಿಳೆ ತುಂಬಾ ಉದಾರಿಯಾಗಿದ್ದು, ಇದುವರೆಗೆ ನಮಗೆ ಕೇವಲ 2 ಸ್ಟಾರ್‌ ರಿವೀವ್‌ ನೀಡಿದ್ದಾಳೆ ಎಂದು ವ್ಯಂಗ್ಯವಾಡಿದೆ. ಈ ಫೋಟೋದಿಂದ ನಾವು ನಿಜವಾಗಿಯೂ ಆಶ್ಚರ್ಯಗೊಂಡಿದ್ದೇವೆ. ಗೇಬ್ರಿಯೆಲ್ ನಮ್ಮ ಸಂಪರ್ಕಕ್ಕೆ ಬಂದಾಗಿನಿಂದ, ಅದು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ನಾವು ನೋಡುತ್ತಿದ್ದೇವೆ ಎಂದು ಕಂಪನಿಯು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದೆ. 

Food Delivery stats ನಿಮಿಷಕ್ಕೆ 115 ಪ್ಲೇಟ್ ಬಿರಿಯಾನಿ ಆರ್ಡರ್ to 6,000 ರೂ ಟಿಪ್ಸ್, 2021ರ ಸ್ವಿಗ್ಗಿಯ ಅಚ್ಚರಿ ಸುದ್ದಿ!

ಪೂರೈಕೆದಾರರು, ಪಾಲುದಾರರು ಮತ್ತು ತಂಡಗಳೊಂದಿಗೆ ಕಟ್ಟುನಿಟ್ಟಾದ ಪ್ರಕ್ರಿಯೆಗಳೊಂದಿಗೆ ಮತ್ತು ಆಯಾ ಸ್ಥಳದಲ್ಲಿ ತಪಾಸಣೆಗಳ ಮೂಲಕ ಕೆಎಫ್‌ಸಿ ಆಹಾರ ಪೂರೈಕೆ ನಡೆಸುತ್ತದೆ. ಈ ವಿಚಾರವನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸಿದ್ದೇವೆ. ಇಂತಹ ಘಟನೆ ಮುಂದೆ ನಡೆಯದಂತೆ ತಡೆಯಲು ನಾವು ನಮ್ಮ ತಂಡಕ್ಕೆ ಮರು ತರಬೇತಿ ನೀಡುತ್ತಿದ್ದೇವೆ ಎಂದು ಕೆಎಫ್‌ಸಿ ಹೇಳಿದೆ. ಮಹಿಳೆ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಕೆಎಫ್‌ಸಿ ಬಗ್ಗೆ ಬರೆದ ಬಳಿಕ ಅವಳ ಬಳಿ ತೆರಳಿದ ಕೆಎಫ್‌ಸಿ ಸಂಸ್ಥೆ ಆಕೆಗೆ ಕೆಲವು ಉಚಿತ ಆಹಾರ ನೀಡುವ ಆಫರ್ ಮಾಡಿತ್ತು. ಅಲ್ಲದೇ ಟೇಕ್‌ಅವೇ ಆಹಾರ ಎಲ್ಲಿ ಯಾವ ರೀತಿ ತಯಾರಿಸುತ್ತಾರೆ ಎಂದು ತಿಳಿದು ಕೊಳ್ಳಲು ಆಕೆಯ ಇಡೀ ಕುಟುಂಬವನ್ನು ಆ ಸ್ಥಳಕ್ಕೆ ಆಹ್ವಾನಿಸಿದೆ ಎಂದು ತಿಳಿದು ಬಂದಿದೆ. 

Food Trend 2021: ಮ್ಯಾಗಿ ಮಿಲ್ಕ್ ಶೇಕ್, ಚಿಕನ್ ಗೋಲ್‌ಗಪ್ಪಾ, 2021ರ ವಿಚಿತ್ರ ಆಹಾರಗಳಿವು