Speed of 350 km /h: ಹೊಸ ಹೈ-ಸ್ಪೀಡ್ ರೈಲು ಕೇವಲ 30 ನಿಮಿಷಗಳಲ್ಲಿ 100 ಕಿಮೀ ಕ್ರಮಿಸಲಿದೆ. ಈ ರೈಲು ಗಂಟೆಗೆ 350 ಕಿಮೀ ವೇಗದಲ್ಲಿ ಚಲಿಸುತ್ತದೆ, ಇದು ಭಾರತದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಿಂತ ಗಮನಾರ್ಹವಾಗಿ ವೇಗವಾಗಿದೆ.
ನವದೆಹಲಿ: ಭಾರತೀಯ ರೈಲ್ವೆಯ ಜನಪ್ರಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುತ್ತದೆ. ಆದ್ರೆ ಇಂದು ನಾವು ಹೇಳುತ್ತಿರುವ ರೈಲು ಗಂಟೆಗೆ 350 ಕಿಮೀ ವೇಗದಲ್ಲಿ ಚಲಿಸುತ್ತದೆ. ಹೌದು, ಈ ರೈಲನ್ನು ಭವಿಷ್ಯದ ಸ್ಮಾರ್ಟ್ ಸಾರಿಗೆಗಳಲ್ಲಿ ಮಹತ್ವದ ಹೆಜ್ಜೆಯನ್ನಿರಿಸಿದೆ. ಒಂದು ರೈಲು ಗರಿಷ್ಠ ಎಷ್ಟು ವೇಗದಲ್ಲಿ ಚಲಿಸಬಹುದು ಎಂಬುದಕ್ಕೆ ಈ ರೈಲು ಉದಾಹರಣೆಯಾಗಲಿದೆ. ಹೈ ಸ್ಪೀಡ್ ರೈಲು ಆರಂಭಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮುಂದಾಗಿದೆ. ಅಬುಧಾಬಿ ಮತ್ತು ದುಬೈಗೆ ಸಂಪರ್ಕಿಸುವ ಹೊಸ ಹೈ-ಸ್ಪೀಡ್ ರೈಲು ಯೋಜನೆಯೊಂದನ್ನು ಯುಎಇ ಘೋಷಿಸಿದೆ. ಈ ಹೈಸ್ಪೀಡ್ ರೈಲಿನ ಮೂಲಕ ಸ್ಮಾರ್ಟ್ ಸಾರಿಗೆಯಲ್ಲಿ ಜಾಗತಿಕ ನಾಯಕನಾಗುವತ್ತ ಯುನೈಟೆಡ್ ಅರಬ್ ಎಮಿರೇಟ್ಸ್ ಮುಂದಾಗುತ್ತಿದೆ. ಯುಎಇ ಯೋಜನೆಯ ಪ್ರಕಾರ, ಈ ಹೈ ಸ್ಪೀಡ್ ರೈಲು ಕೇವಲ 30 ನಿಮಿಷದಲ್ಲಿ 100 ಕಿಮೀ ಕ್ರಮಿಸುತ್ತದೆ. ಭಾರತದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಿಂತ ಈ ಹೈಸ್ಪೀಡ್ ರೈಲು ಹೇಗೆ ಭಿನ್ನ ಎಂಬುದರ ಮಾಹಿತಿ ಇಲ್ಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನ ಹೈ ಸ್ಪೀಡ್ ರೈಲನ್ನು 'ಬುಲೆಟ್ ಟ್ರೈನ್ ' ಅಂತಾನೂ ಕರೆಯಲಾಗುತ್ತದೆ. ಈ ಬುಲೆಟ್ ಟ್ರೈನ್ 350 ಕಿಮೀ / ಗಂಟೆ ವೇಗದಲ್ಲಿ ಚಲಿಸುತ್ತದೆ. ಅಂದ್ರೆ ಗಂಟೆಗೆ 200 ಕಿಮೀ ದೂರವನ್ನು ಕ್ರಮಿಸುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಈ ಹೊಸ ರೈಲು ಯೋಜನೆ ಮಧ್ಯಪ್ರಾಚ್ಯದಲ್ಲಿ ಸಾರಿಗೆ ಮೂಲಸೌಕರ್ಯವನ್ನು ಸುಧಾರಿಸಲು ಸಹಾಯ ಮಾಡಲಿದೆ. ಈ ರೈಲು ಮೂಲಕ ಪ್ರಯಾಣಿಕರು, ದುಬೈನಿಂದ ಅಬುದಾಬಿಗೆ ಕೇವಲ 30 ನಿಮಿಷದಲ್ಲಿ ಪ್ರಯಾಣಿಸಬಹುದು.
ದುಬೈನಿಂದ ಅಬುದಾಬಿಗೆ ಸಂಪರ್ಕಿಸುವ ಈ ಯೋಜನೆ ಕಾರ್ಯಕ್ಕೆ ದುಬೈ ಸರ್ಕಾರ ಟೆಂಡರ್ ಸಹ ನೀಡಿದೆ. ಮಾರ್ಗ ಮತ್ತು ನೆಟ್‌ವರ್ಕ್ ಡಿಸೈನ್‌ಗೆ ಅನುಮೋದನೆಯನ್ನು ನೀಡಲಾಗಿದ್ದು, ಯೋಜನೆ ಅಭಿವೃದ್ಧಿ ಪ್ರಗತಿಯಲ್ಲಿದೆ. ಸುಗಮ ಕಾರ್ಯನಿರ್ವಹಣೆ ಸಾರಿಗೆ ಬಗ್ಗೆ ಈ ಯೋಜನೆ ಭರವಸೆಯನ್ನು ಮೂಡಿಸಿದೆ. ದುಬೈ ಟು ಅಬುದಾಬಿ ನಡುವೆ ಚಲಿಸುವ ಹೈಸ್ಪೀಡ್ ರೈಲು, ಅನೇಕ ಪ್ರಮುಖ ಸ್ಥಳಗಳು ಮತ್ತು ಪ್ರವಾಸಿ ತಾಣಗಳ ಮೂಲಕ ಹಾದುಹೋಗುತ್ತದೆ. ಹಾಗಾಗಿ ಪ್ರವಾಸಿಗರಿಗೂ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ. ವಂದೇ ಭಾರತ್ ರೈಲುಗಳಿಗೆ ಹೋಲಿಸಿದರೆ, ಇದು ಭಾರತದಲ್ಲಿ ಓಡುವ ಅತ್ಯಂತ ವೇಗದ ರೈಲು ಮತ್ತು ಗಂಟೆಗೆ ಗರಿಷ್ಠ 160 ಕಿಮೀ ವೇಗದಲ್ಲಿ ಚಲಿಸಬಹುದು, ಯುಎಇ ಬುಲೆಟ್ ರೈಲು ಗಂಟೆಗೆ 350 ಕಿಮೀ ವೇಗದಲ್ಲಿ ಚಲಿಸಬಹುದು.
ಇದನ್ನೂ ಓದಿ: ಇನ್ಮುಂದೆ ಸಲೀಸಾಗಿ ಸಿಗುತ್ತೆ ಕನ್ಫರ್ಮ್ ಟಿಕೆಟ್; ಭಾರತೀಯ ರೈಲ್ವೆಯಿಂದ ಮಹತ್ವದ ನಿರ್ಧಾರ
ಯುಎಇ ಪ್ರವಾಸದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್
ವವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮೂರು ದಿನಗಳ ಯುಎಇ ಪ್ರವಾಸದಲ್ಲಿದ್ದಾರೆ. ಉಭಯ ದೇಶಗಳ ನಡುವಿನ ನಿಕಟ ಪಾಲುದಾರಿಕೆಯನ್ನು ಪರಿಶೀಲಿಸಲು ಮತ್ತು ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಸುಧಾರಿಸಲು ಯುಎಇ ನಾಯಕರನ್ನು ಜೈ ಶಂಕರ್ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಜೈ ಶಂಕರ್ ಅವರ ಈ ಭೇಟಿಯು ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮುಂದುವರಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹೊಸ ವೇಗ ನೀಡಲಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಬುಲೆಟ್ ರೈಲು
ಜಪಾನ್ ತಂತ್ರಜ್ಞಾನವನ್ನೇ ಬಳಸಿಕೊಂಡು ಭಾರತವು ಅಹಮದಾಬಾದ್- ಮುಂಬೈ ನಡುವೆ ದೇಶದ ಮೊದಲ ಬುಲೆಟ್ ರೈಲು ಮಾರ್ಗ ನಿರ್ಮಾಣ ಮಾಡುತ್ತಿದೆ. ಗಂಟೆಗೆ 320 ಕಿ.ಮೀ. ವೇಗದಲ್ಲಿ ರೈಲುಗಳು ಇಲ್ಲಿ ಸಂಚರಿಸುತ್ತವೆ. ಅದೇ ಮಾರ್ಗದಂತೆ ದೇಶದ ಉತ್ತರ, ದಕ್ಷಿಣ ಹಾಗೂ ಪೂರ್ವ ಭಾಗದಲ್ಲೂ ಬುಲೆಟ್ ರೈಲು ಸಂಚಾರ ಆರಂಭಿಸುವುದಾಗಿ ಇತ್ತೀಚೆಗೆ ಪ್ರಧಾನಿ ಘೋಷಿಸಿದ್ದು, ಅಲ್ಲಿ ಸ್ವದೇಶಿ ಬುಲೆಟ್ ರೈಲು ಬಳಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ರೈಲು ಚಕ್ರಗಳ ತೂಕ ಎಷ್ಟು? ಬೆಲೆ ಎಷ್ಟು ಗೊತ್ತಾ?
