ರಷ್ಯಾ ಸೇನೆಯ ವಿರುದ್ಧ ಭಾರತ ಗರಂ
ಭಾರೀ ವೇತನ ನೀಡುವ ಉದ್ಯೋಗದ ಹೆಸರಲ್ಲಿ ಭಾರತೀಯರನ್ನು ನೇಮಕ ಮಾಡಿ ಅವರನ್ನು ಯುದ್ಧಭೂಮಿಗೆ ಕಳುಹಿಸುತ್ತಿರುವ ರಷ್ಯಾ ಸೇನೆಯ ಬಗ್ಗೆ ಕಿಡಿಕಾರಿದ ಭಾರತ
ನವದೆಹಲಿ(ಜೂ.12): ಜಾಗತಿಕವಾಗಿ ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮತ್ತೆ ಇಬ್ಬರು ಭಾರತೀಯರು ಹತ್ಯೆಗೀಡಾಗಿದ್ದಾರೆ. ಇತ್ತೀಚೆಗೆ ರಷ್ಯಾ ಸೇನೆಗೆ ಈ ಇಬ್ಬರನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಅವರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ನಡುವೆ ಭಾರೀ ವೇತನ ನೀಡುವ ಉದ್ಯೋಗದ ಹೆಸರಲ್ಲಿ ಭಾರತೀಯರನ್ನು ನೇಮಕ ಮಾಡಿ ಅವರನ್ನು ಯುದ್ಧಭೂಮಿಗೆ ಕಳುಹಿಸುತ್ತಿರುವ ರಷ್ಯಾ ಸೇನೆಯ ಬಗ್ಗೆ ಭಾರತದ ಕಿಡಿಕಾರಿದೆ.
30 ಅಂತಸ್ತಿನ ಬಿಲ್ಡಿಂಗ್ ಹತ್ತುವ ಸಾಹಸ, ಸ್ಪೈಡರ್ ಮ್ಯಾನ್‍ಗೆ ಕೊನೆಯ ಮಹಡಿಯಲ್ಲಿ ಕಾದಿತ್ತು ಶಾಕ್!
ಕೂಡಲೇ ರಷ್ಯಾ ಸೇನೆಯಲ್ಲಿರುವ ಉಳಿದ ಭಾರತೀಯರನ್ನು ಪತ್ತೆ ಹಚ್ಚಿ ಕೂಡಲೇ ತವರಿಗೆ ಕಳುಹಿಸುವಂತೆ ವಿದೇಶಾಂಗ ಸಚಿವಾಲಯ ವಕ್ತಾರರು ರಷ್ಯಾ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.