ಆತ ರಿಯಲ್ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿಗೊಂಡಿದ್ದ. ಹಲವು ಗಗನಚುಂಬಿ ಕಟ್ಟಡಗಳನ್ನು ಸಲೀಸಾಗಿ ಹತ್ತಿ ಇಳಿದಿದ್ದ. ಇದೀಗ ಬರೋಬ್ಬರಿ 30 ಅಂತಸ್ತಿನ ಕಟ್ಟಡ ಹತ್ತಲು ಆರಂಭಿಸಿದ್ದ ಸ್ಪೈಡರ್ ಮ್ಯಾನ್‌ಗೆ ಅಂತಿಮ ಹಂತದಲ್ಲಿ ಕಾದಿತ್ತು ಶಾಕ್.
ಅರ್ಜೆಂಟೈನಾ(ಜೂ.12) ಬಂಡೆ, ಕಟ್ಡಗಳನ್ನು ಹತ್ತುವ ಅಪಾಯಾಕಾರಿ ಸಾಹಸ ಹೊಸದೇನಲ್ಲ. ಕರ್ನಾಟಕದಲ್ಲಿ ಕೋತಿ ರಾಜ್ ಪದೇ ಪದೆ ಈ ರೀತಿಯ ಸಾಹಸದಿಂದ ಸುದ್ದಿಯಾಗುತ್ತಾರೆ. ಇದೀಗ ರಿಯಲ್ ಸ್ಪೈಡರ್‌ಮ್ಯಾನ್ ಎಂದೇ ಖ್ಯಾತಿಗೊಂಡಿರುವ ಮ್ಯಾಕಿನ್ ಬ್ಯಾನೋಟ್ ಬರೋಬ್ಬರಿ 30 ಅಂತಸ್ತಿನ ಕಟ್ಟಡ ಹತ್ತುವ ಸಾಹಸ ಮಾಡಿದ್ದಾನೆ. ಇದಕ್ಕೂ ಮುನ್ನ ಗಗನಸಚುಂಬಿ ಕಟ್ಟಡ ಸುಲಭವಾಗಿ ಹತ್ತಿ ಇಳಿದಿದ್ದ ಈತನಿಗೆ ಈ ಬಾರಿ 25 ಮಹಡಿ ಹತ್ತಿದ ಬಳಿಕ ಮೇಲೆ ಹತ್ತಲು ಸಾಧ್ಯವಾಗಿಲ್ಲ. ಕಾರಣ ಇಷ್ಟೇ 25ನೇ ಮಹಡಿಯಲ್ಲಿ ಪೊಲೀಸರು, ಅಗ್ನಿಶಾಮಕ ದಳ ಈತನ ವಶಕ್ಕೆ ಪಡೆದ ಘಟನೆ ಅರ್ಜೆಂಟೈನಾದಲ್ಲಿ ನಡೆದಿದೆ.
ಪೊಲೆಂಡ್‌ನ ಸಿಲೇಶಿಯಾದ ಸ್ಪೈಡರ್ ಮ್ಯಾನ್ ಎಂದೇ ಜನಪ್ರಿಯವಾಗಿರುವ ಮ್ಯಾಕಿನ್ ಬ್ಯಾನೋಟ್ ಅರ್ಜೆಂಟೈನಾ ಫುಟ್ಬಾಲ್ ತಂಡದ ಜರ್ಸಿ ಹಾಕಿ ಗ್ಲೋಬ್ಯಾಂಟ್ ಬಿಲ್ಡಿಂಗ್ ಹತ್ತುವ ಸಾಹಸಕ್ಕೆ ಮುಂದಾಗಿದ್ದಾನೆ. ಮ್ಯಾಕಿನ್ ಬ್ಯಾನೋಟ್ ಹಲವು ಬಾರಿ ಇತರರಿಗೆ ನೆರವಾಗಲು ಕಟ್ಟಡ ಹತ್ತುವ ಸಾಹಸ ಮಾಡಿದ್ದಾನೆ. ಈ ಮೂಲಕ ಹಣ ಸಂಗ್ರಹಿಸಿ ಚಿಕಿತ್ಸೆಗಾಗಿ ನೀಡಿದ್ದಾನೆ. ಈ ಬಾರಿ ಸಾಮಾಜಿಕ ಕಳಕಳಿಯೊಂದಿಗೆ 30 ಅಂತಸ್ತಿನ ಕಟ್ಟಡ ಹತ್ತಲು ಆರಂಭಿಸಿದ್ದಾನೆ.
ಜಾಲಿ ರೈಡ್ ಹೋದ ಸ್ಪೈಡರ್‌ಮ್ಯಾನ್-ಸ್ಪೈಡರ್‌ವುಮೆನ್‌ಗೆ ಶಾಕ್, ವಿಡಿಯೋ ಪೋಸ್ಟ್ ಮಾಡಿ ಅರೆಸ್ಟ್ ಆದ ಜೋಡಿ!
ಬ್ಯಾನೋಟ್ ಕಟ್ಟಡ ಹತ್ತಲು ಆರಂಭಿಸುತ್ತಿದ್ದಂತೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಅಷ್ಟರ ವೇಳೆಗೆ ಬ್ಯಾನೋಟ್ 25 ಮಹಡಿ ಹತ್ತಿದ್ದಾನೆ. ಆದರೆ 25 ನೇ ಮಹಡಿಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಹಾಜರಾಗಿತ್ತು. 25ನೇ ಮಹಡಿಯಲ್ಲಿ ಬ್ಯಾನೋಟ್ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡದು ವಿಚಾರಣೆ ನಡೆಸಿದ ಪೊಲೀಸರು ಬ್ಯಾನೋಟ್ ಅರೆಸ್ಟ್ ಮಾಡಿದ್ದಾರೆ.
ಬ್ಯಾನೋಟ್ ಪದೇ ಪದೇ ಕಟ್ಟಡ ಹತ್ತಿ ಸುದ್ದಿಯಾಗಿದ್ದಾರೆ. 36 ವರ್ಷದ ಸಾಹಸಿ, ಲಂಡನ್‌ನಲ್ಲಿರುವ 500 ಅಡಿ ಎತ್ತರದ ಹಂಬರ್ ಬ್ರಿಡ್ಜ್ ಹತ್ತಿ ಸಾಹಸ ಮಾಡಿದ್ದ. ಬಾಲಕಿಯ ಚಿಕಿತ್ಸೆಗಾಗಿ ಈ ಬ್ರಿಡ್ಜ್ ಹತ್ತಿ ಹಣ ಸಂಗ್ರಹಿಸಿದ್ದ. 2019ರಲ್ಲಿ 557 ಅಡಿ ಎತ್ತರದ ಮ್ಯಾರಿಯೆಟ್ ಹೊಟೆಲ್ ಬಿಲ್ಡಿಂಗ್ ಹತ್ತಿ ಸುದ್ದಿಯಾಗಿದ್ದ. ಈ ವೇಳೆಯೂ ಪೊಲೀಸರು ಬ್ಯಾನೋಟ್ ಬಂಧಿಸಿದ್ದರು.
ಸ್ಪೈಡರ್‌ಮ್ಯಾನ್ ಸಾಹಸ... ಮುಂಬೈ ಲೋಕಲ್ ಟ್ರೈನೊಳಗಿನ ವಿಡಿಯೋ ವೈರಲ್
ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸಾಹಸದ ಮೂಲಕವೇ ಭಾರಿ ಜನಪ್ರಿಯವಾಗಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ 302K ಫಾಲೋವರ್ಸ್ ಹೊಂದಿರುವ ಸಾಹಸಿ ಹಲವು ದಾಖಲೆ ಬರೆದಿದ್ದಾನೆ.
