Drone Attack in Abu Dhabi: ಅಬುಧಾಬಿಯಲ್ಲಿ ಡ್ರೋಣ್ ದಾಳಿ, ಟ್ಯಾಂಕರ್ ಸ್ಫೋಟ, ಇಬ್ಬರು ಭಾರತೀಯರ ಸಾವು
* ಅಬುದಾಭಿಯಲ್ಲಿ ಡ್ರೋಣ್ ಬಳಸಿ ದಾಳಿ
* ಆಯಿಲ್ ಟ್ಯಾಂಕರ್ ಗಳ ಸ್ಫೋಟ
* ಘಟನೆಯಲ್ಲಿ ಮೂರು ಸಾವು
* ಅಬುದಾಭಿ ವಿಮಾನ ನಿಲ್ದಾಣದ ಬಳಿಯೂ ಬೆಂಕಿ
ಅಬುಧಾಬಿ (ಜ. 17) ಅಬುಧಾಬಿಯಲ್ಲಿ (Abu Dhabi) ಡ್ರೋಣ್ (Drone) ಮೂಲಕ ದಾಳಿ ಮಾಡಲಾಗಿದ್ದು ಘಟನೆಯಲ್ಲಿ ಇಬ್ಬರು ಭಾರತೀಯರು (Indians) ಸೇರಿ ಮೂವರು (Death)
ಸಾವನ್ನಪ್ಪಿದ್ದಾರೆ. ಡ್ರೋಣ್ ಮೂಲಕ ದಾಳಿ ಮಾಡಿ ಮೂರು ಆಯಿಲ್ ಟ್ಯಾಂಕರ್ ಗಳನ್ನು ಬ್ಲಾಸ್ಟ್ ಮಾಡಲಾಗಿದೆ. ಇನ್ನೊಂದು ಕಡೆ ಪ್ರತ್ಯೇಕ ಬೆಂಕಿ ಅವಘಡವನ್ನು ಸೃಷ್ಟಿ ಮಾಡಲಾಗಿದೆ. ಇಬ್ಬರು ಭಾರತೀಯರು ಹಾಗೂ ಒಬ್ಬ ಪಾಕಿಸ್ತಾನಿ (Pakistan) ಜೀವ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Rohini Court Blast: ನೆರೆ ಮನೆಯ ವಕೀಲನನ್ನು ಕೊಲ್ಲಲು ಕೋರ್ಟ್‌ನಲ್ಲಿ ಬಾಂಬ್ ಇಟ್ಟ DRDO ವಿಜ್ಞಾನಿ!
ಅಬುಧಾಬಿ ಸುದ್ದಿ ಮಾಧ್ಯಮ ಒಂದು ವರದಿ ಮಾಡಿರುವಂತೆ ಮೂವರು ಸಾವನ್ನಪ್ಪಿದ್ದು ಆರು ಜನ ಗಂಭೀರ ಗಾಯಗೊಂಡಿದ್ದಾರೆ. ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಬೆಂಕಿ ಸಾಮಾನ್ಯದಾಗಿತ್ತು. ವಿಮಾನ ನಿಲ್ದಾಣದ ಕಾಮಗಾರಿ ಕೆಲಸ ನಡೆಯುತ್ತಿದೆ. ಆದರೆ ಇನ್ನೊಂದು ಕಡೆ ಆಯಿಲ್ ಟ್ಯಾಂಕರ್ ಗಳನ್ನು ಸ್ಫೋಟಿಸಲಾಗಿದೆ. ಹೆಚ್ಚಿನ ಅವಘಡ ಆಗಿಲ್ಲದಿರುವುದು ಮೇಲು ನೋಟಕ್ಕೆ ಗೊತ್ತಾಗಿದ್ದು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅಬುಧಾಬಿ ಪೊಲೀಸರು ತಿಳಿಸಿದ್ದಾರೆ.
ದಾಳಿ ಮಾಡುತ್ತೇವೆ ಎಂದಿದ್ದರು: ಯಮೆನ್ ನ ಹೌಥಿ ರೆಬೆಲ್ಸ್ ಈ ಹಿಂದೆ ದಾಳಿ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. 2015 ರಿಂದಲೂ ಕೀಟಲೆ ನೀಡುತ್ತಿರುವ ಗುಂಪು ಆಗಾಗ ದಾಳಿ ಮಾಡಿಕೊಂಡೇ ಬಂದಿದೆ. ಈ ದಾಳಿಯ ಹೊಣೆಯನ್ನು ಈಗ ಹೊತ್ತುಕೊಂಡಿದೆ.. ಡ್ರೋಣ್ ಬಳಸಿ ಆಯಿಲ್ ಟ್ಯಾಂಕರ್ ಸ್ಫೋಟ ಮಾಡಿದ್ದಾರೆ
ಯುಎಇಯನ್ನು ಒಳಗೊಂಡಿರುವ ಸೌದಿ ನೇತೃತ್ವದ ಒಕ್ಕೂಟದೊಂದಿಗೆ ಹೋರಾಡುತ್ತಿರುವ ಹೌತಿ ರೆಬೆಲ್ಸ್ ಹೊರಾಟ ಮಾಡಿಕೊಂಡೇ ಬಂದಿದ್ದಾರೆ. ಸೌದಿ ಅರೇಬಿಯಾದ ಮೇಲೆ ಆಗಾಗ್ಗೆ ಗಡಿಯಾಚೆಗಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಲೇ ಇವೆ. ಈಗ ಯುಎಇ ಮೇಲೆ ಅಂತಹದೇ ದಾಳಿ ಮಾಡಿದೆ.
ತೈಲ ಸಂಸ್ಥೆಯಾದ ಎಡಿಎನ್‌ಒಸಿಯ ಶೇಖರಣಾ ಸೌಲಭ್ಯಗಳ ಬಳಿಯ ಕೈಗಾರಿಕಾ ಮುಸಾಫ್ಹಾ ಪ್ರದೇಶದಲ್ಲಿ ಮೂರು ಇಂಧನ ಟ್ಯಾಂಕರ್ ಟ್ರಕ್‌ಗಳು ಸ್ಫೋಟಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಹ ಘಟನೆಯ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ.
ಗಣರಾಜ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು:
ಗಣರಾಜ್ಯೋತ್ಸವಕ್ಕೆ (Republic Day) ಇನ್ನೇನು ಕೆಲವೇ ದಿನ ಉಳಿದಿರುವಾಗ ದಿಲ್ಲಿಯ (New Delhi)ಪೇಟೆಯೊಂದರಲ್ಲಿ 3 ಕೇಜಿ ತೂಕದ ‘ಟೈಂ ಬಾಂಬ್’ (Time Bomb) ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ದೆಹಲಿಯ ಗಾಜಿಪುರ ಹೂವು ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕಗಳನ್ನು ಒಳಗೊಂಡಿದ್ದ ಬಾಂಬ್ ಕಂಡುಬಂದಿತು. ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಅಧಿಕಾರಿಗಳು ಈ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ.
‘ಪ್ರವೇಶ ದ್ವಾರದ ಬಳಿ ಆರ್‌ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟ್ ಮಿಶ್ರಣದ 3 ಕೇಜಿಯ ಬಾಂಬ್ ಅನ್ನು ಲೋಹದ ಪೆಟ್ಟಿಗೆಯೊಳಗೆ ಅಳವಡಿಸಿ ಅದನ್ನು ಬ್ಯಾಗ್‌ನಲ್ಲಿ ಇಡಲಾಗಿತ್ತು. ಅನುಮಾನಾಸ್ಪದ ಬ್ಯಾಗ್ ಬಗ್ಗೆ ಬೆಳಗ್ಗೆ 11 ಗಂಟೆಗೆ ಮಾಹಿತಿ ಲಭಿಸಿತು. ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಎನ್‌ಎಸ್‌ಜಿಯ ಬಾಂಬ್ ನಿಷ್ಕಿ್ರಯ ದಳ ಸ್ಥಳಕ್ಕೆ ಆಗಮಿಸಿ, 1 ಗಂಟೆ ಸುಮಾರಿಗೆ ಅದನ್ನು ನಿಷ್ಕ್ರಿಯ ಮಾಡಲಾಯಿತು ಎಂದು ಎನ್‌ಎಸ್‌ಜಿ ಮುಖ್ಯಸ್ಥ ಎಂ.ಎ.ಗಣಪತಿ ತಿಳಿಸಿದ್ದರು.
ಬಾಂಬ್ ಇಟ್ಟವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಇದಕ್ಕೆ ಟೈಮರ್ ಅಳವಡಿಸಲಾಗಿತ್ತು. ಭಾರೀ ವಿನಾಶದ ಸಂಚು ರೂಪಿಸಲಾಗಿತ್ತು’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಇರುವುದರಿಂದ ಪೊಲೀಸರನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಾಂಬ್‌ನ ಮಾದರಿಯನ್ನು ಸಂಗ್ರಹಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದರು.