Asianet Suvarna News Asianet Suvarna News

ಕ್ರಿಸ್ಮಸ್‌ ಸಂಭ್ರಮದಲ್ಲಿದ್ದವರಿಗೆ ಶಾಕ್‌: ಇಬ್ಬರು ಹುಡುಗಿಯರನ್ನು ಇರಿದು ಬಿಳಿಯರನ್ನೆಲ್ಲ ಸಾಯಿಸ್ಬೇಕೆಂದ ದಾಳಿಕೋರ

ಸೋಮವಾರ ಬೆಳಿಗ್ಗೆ 11:25 ರ ಸುಮಾರಿಗೆ ಗ್ರ್ಯಾಂಡ್ ಸೆಂಟ್ರಲ್ ಡೈನಿಂಗ್ ಕಾನ್ಕೋರ್ಸ್‌ನಲ್ಲಿರುವ ಟಾರ್ಟಿನರಿಯಲ್ಲಿ ಇಬ್ಬರು ಹುಡುಗಿಯರು ತಮ್ಮ ಪೋಷಕರೊಂದಿಗೆ ಕ್ರಿಸ್ಮಸ್ ಭೋಜನವನ್ನು ಆನಂದಿಸುತ್ತಿದ್ದಾಗ ಈ ಘಟನೆ ನಡೆದಿದೆ

two girls stabbed in us cafe attacker shouted want all white people dead on christmas ash
Author
First Published Dec 27, 2023, 10:54 AM IST

ವಾಷಿಂಗ್ಟನ್‌ ಡಿಸಿ (ಡಿಸೆಂಬರ್ 27, 2023): ಬಿಳಿಯರೆಲ್ಲ ಸಾಯಬೇಕು ಎಂದು ಕೂಗಾಡುತ್ತಿದ್ದ ವ್ಯಕ್ತಿಯೊಬ್ಬರು ಅಮೆರಿಕದ ಕೆಫೆಯೊಂದರಲ್ಲಿ ಇಬ್ಬರು ಹುಡುಗಿಯರಿಗೆ ಇರಿದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಕ್ರಿಸ್ಮಸ್ ದಿನ ಬೆಳಗ್ಗೆ ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಕೆಫೆಯೊಂದರಲ್ಲಿ ಈ ಘಟನೆ ನಡೆದಿದೆ.

ಸೋಮವಾರ ಬೆಳಿಗ್ಗೆ 11:25 ರ ಸುಮಾರಿಗೆ ಗ್ರ್ಯಾಂಡ್ ಸೆಂಟ್ರಲ್ ಡೈನಿಂಗ್ ಕಾನ್ಕೋರ್ಸ್‌ನಲ್ಲಿರುವ ಟಾರ್ಟಿನರಿಯಲ್ಲಿ ಇಬ್ಬರು ಹುಡುಗಿಯರು ತಮ್ಮ ಪೋಷಕರೊಂದಿಗೆ ಕ್ರಿಸ್ಮಸ್ ಭೋಜನವನ್ನು ಆನಂದಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಬಾಲಕಿಯರಿಗೆ ಗಾಯಗಳಾಗಿದ್ದರೂ ಅವರ ಪ್ರಾಣಾಪಾಯಕ್ಕೆ ಯಾವುದೇ ತೊಂದರೆಯಾಗಿಲ್ಲ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಬಾಲ್ಯದ ಗೆಳತಿ ಮದ್ವೆಯಾಗಲು ಹುಡುಗನಾಗಿ ಬದಲಾದ: ಆದ್ರೂ ಒಪ್ಪದ ಯುವತಿಯ ಕತ್ತು ಸೀಳಿ ಕೊಂದ ಪಾಪಿ!

16 ವರ್ಷದ ಬಾಲಕಿಯ ಬೆನ್ನಿಗೆ ಚಾಕುವಿನಿಂದ, ಆಕೆಯ ಶ್ವಾಸಕೋಶವನ್ನು ಚುಚ್ಚಿದ್ದಾನೆ. ಮತ್ತು 14 ವರ್ಷದ ಬಾಲಕಿಯ ತೊಡೆಗೆ ಇರಿದಿದ್ದಾನೆ ಎಂದು ಪೊಲೀಸರು ಮತ್ತು ಕಾನೂನು ಜಾರಿ ಮೂಲಗಳು ತಿಳಿಸಿವೆ. ಆರೋಪಿಯನ್ನು 36 ವರ್ಷದ ಸ್ಟೀವನ್ ಹಚರ್ಸನ್ ಎಂದು ತಿಳಿದುಬಂದಿದ್ದು, ನನಗೆ ಎಲ್ಲಾ ಬಿಳಿಯರು ಸಾಯಬೇಕು ಎಂದು ಕೂಗಿದ್ದು, ನಾನು ಕ್ರ್ಯಾಕರ್ಸ್ ಪಕ್ಕದಲ್ಲಿ ಕುಳಿತುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾಗಿಯೂ ವರದಿಯಾಗಿದೆ. 

ಆರೋಪಿ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಪೊಲೀಸರು, ಆತನನ್ನು ಈ ಹಿಂದೆಯೂ ಬಂಧಿಸಲಾಗಿದೆ ಮತ್ತು ಆತನಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳ ಇತಿಹಾಸವಿದೆ ಎಂದು ಹೇಳಿದ್ದಾರೆ. ಆತ ಇದ್ದಕ್ಕಿದ್ದಂತೆ ಕೆಫೆಯಲ್ಲಿ ಕಾಣಿಸಿಕೊಂಡಿದ್ದು, ಟೇಭಲ್‌ ಬೇಕು ಎಂದಿದ್ದಾನೆ. ಆದರೆ, ತಿನ್ನಲು ಏನು ಬೇಕು ಎಂದರೆ ಏನನ್ನೂ ಆರ್ಡರ್‌ ಮಾಡಲ್ಲ ಎಂದೂ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಲೈಂಗಿಕ ದೌರ್ಜನ್ಯಕ್ಕೆ ಸೇಡು: 25 ವರ್ಷದ ಯುವಕನ ಇರಿದು ಕೊಂದ ಮೂವರು ಅಪ್ರಾಪ್ತರು

ಇದಕ್ಕೂ ಮೊದಲು, ಬ್ರಾಂಕ್ಸ್‌ನಲ್ಲಿ ಅಪರಿಚಿತರನ್ನು "ಶೂಟ್" ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಹಚರ್ಸನ್‌ನನನ್ನು ನವೆಂಬರ್ 7 ರಂದು ಬಂಧಿಸಲಾಯಿತು. ನಾನು ನಿನ್ನನ್ನು ಶೂಟ್ ಮಾಡಲಿದ್ದೇನೆ. ಸರ್ಕಾರ ನಿಮಗೆ ಯಾವ ರೀತಿಯ ಗ್ರೀನ್ ಕಾರ್ಡ್ ನೀಡಿದೆ ಎಂಬುದರ ಬಗ್ಗೆ ನನಗೆ ಕಾಳಜಿ ಇಲ್ಲ. ಬಾಯಿ ತೆರೆದು ಏನಾದರೂ ಹೇಳು. ನಾನು ಈಗಲೇ ನಿನ್ನನ್ನು ಶೂಟ್ ಮಾಡುತ್ತೇನೆ ಎಂದು ಆತ ಹೇಳಿದ್ದ ಬಗ್ಗೆ ದೂರು ದಾಖಲಾಗಿತ್ತು.

ನಂತರ ದೂರಿನ ಪ್ರಕಾರ ಆತನ ಪ್ಯಾಂಟ್‌ನ ಬದಿಯಿಂದ ಬಂದೂಕನ್ನು ತೆಗೆದುಕೊಂಡಿದ್ದ. ಆದರೆ, ಪೊಲೀಸರು ಮಾತ್ರ ತಾವು ಚಾಕುವನ್ನು ವಶಪಡಿಸಿಕೊಂಡಿದ್ದೇವೆ, ಬಂದೂಕು ಪತ್ತೆಯಾಗಿಲ್ಲ ಎಂದಿದ್ದಾರೆ. ಆ ವೇಳೆ, ಆತನ ಮೇಲೆ ಕ್ರಿಮಿನಲ್ ಆಯುಧ ಹೊಂದಿದ್ದು, ಬೆದರಿಕೆ, ಕಿರುಕುಳ ಮತ್ತು ಹಲ್ಲೆ ಆರೋಪ ಹೊರಿಸಲಾಗಿತ್ತು.

ಇದನ್ನು ಓದಿ: ಪತ್ನಿಗೆ ವರದಕ್ಷಿಣೆ ಕಿರುಕುಳದ ಜತೆ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸಿದ ಪ್ರಮುಖ ಉದ್ಯಮಿ!

Follow Us:
Download App:
  • android
  • ios