ಅತೀ ಎತ್ತರ ಪ್ರದೇಶದ ಪ್ರವಾಸಿ ತಾಣದಲ್ಲಿರುವ ತೂಗಯ್ಯಾಲೆ ತೂಗುತ್ತಿರುವ ವೇಳೆ ಕಂಬಕ್ಕೆ ಬಡಿದು ಜಾರಿದ ಇಬ್ಬರು ಯುವತಿಯರು 6,000 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದ ಯುವತಿಯರು  

ರಷ್ಯಾ(ಜು.18): ಪ್ರವಾಸಿ ತಾಣ, ಫ್ಯಾಂಟಸಿ ಪಾರ್ಕ್‌, ಜಾಯಿಂಟ್ ವ್ಹೀಲ್ ಸೇರಿದಂತೆ ಹಲವು ಮನರಂಜನೆ ತಾಣಗಳಲ್ಲಿ ಅತೀಯಾದ ಎಚ್ಚರಿಕೆ ಅಗತ್ಯ. ಒಂದು ಸಣ್ಣ ಎಡವಟ್ಟು ಬಹುದೊಡ್ಡ ದುರಂತಕ್ಕೆ ಕಾರಣವಾಗಲಿದೆ. ಹೀಗೆ ರಷ್ಯಾದ ಡಗೆಸ್ಟಾನ್ ಪ್ರವಾಸಿ ತಾಣದ ತೂಗುಯ್ಯಾಲೆ ತೂಗುವ ಯಡವಟ್ಟಿನಿಂದ ಇಬ್ಬರು ಯುವಯಿತರು 6,000 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದ ಘಟನೆ ನಡೆದಿದೆ. ಮೈ ಜುಮ್ಮೆನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

3 ಮಕ್ಕಳು ಸೇರಿ ಐವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಡಿದ ಸಿಡಿಲು; ಭಯಾನಕ ವಿಡಿಯೋ!

6,300 ಅಡಿ ಎತ್ತರದಲ್ಲಿರುವ ಸುಲಾಕ್ ಕ್ಯಾನ್ಯನ್ ಮೆಲಿರುವ ತೂಗುಯ್ಯಾಲೆ ಹೆಚ್ಚು ಜನಪ್ರೀಯ. ಇಲ್ಲಿ ಪ್ರವಾಸಿಗರು ತೂಗುಯ್ಯಾಲೆಯಲ್ಲಿ ಕುಳಿತು ಆನಂದ ಅನುಭವಿಸುತ್ತಾರೆ. ಹೀಗೆ ಇಬ್ಬರು ಯುವತಿಯರು ಆನಂದ ಅನುಭವಿಸುತ್ತಿರುವಾಗ ತೂಗುವಿಕೆಯಲ್ಲಿ ಆದ ಯಡವಟ್ಟಿನಿಂದ ಉಯ್ಯಾಲೆ ಕಂಬಕ್ಕೆ ಬಡಿದಿದೆ. ಇದರಿಂದ ಇಬ್ಬರು ಯುವತಿಯರು ಪ್ರಪಾತಕ್ಕೆ ಉರುಳಿದ್ದಾರೆ.

Scroll to load tweet…

ಮಧ್ಯರಾತ್ರಿ ಬಾಗಿಲು ತೆರೆಯಲು ಡೋರ್ ಬೆಲ್ ಮಾಡಿದ ಕಾಣೆಯಾಗಿದ್ದ ನಾಯಿ; ವಿಡಿಯೋ ವೈರಲ್!

ಅದೃಷ್ಟವಶಾತ್ ಯುವತಿಯರು ಸಂಪೂಣಕ್ಕೆ ಕೆಳಕ್ಕೆ ಬಿದ್ದಿಲ್ಲ. ಬಂಡೆಯ ಅಂಚಿನಲ್ಲಿ ಸಿಲುಕಿಕೊಂಡಿದ್ದಾರೆ. ಮುಖ, ಮೂಗು, ಕೈ ಸೇರಿದಂತೆ ಹಲವು ಗಾಯಗಳಾಗಿದೆ. ಆದರೆ ಸಾವಿನಿಂದ ಪಾರಾಗಿದ್ದಾರೆ. ನೆರೆದಿದ್ದವರು ಚೀರಾಡಿದ್ದಾರೆ. ತಕ್ಷಣವೇ ರಕ್ಷಣಾ ತಂಡ ಯುವತಿಯ ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಪೊಲೀಸರು ಘಟನೆ ಕುರಿತು ತನಿಖೆಗೆ ಮುಂದಾಗಿದ್ದಾರೆ.