ಮುದ್ದಿನ ನಾಯಿ ಕಾಣೆಯಾಗಿ ಹುಡುಕಾಟ ನಡೆಸಿದ ಮಾಲೀಕ ಮಧ್ಯ ರಾತ್ರಿ ಮನೆಗೆ ಮರಳಿದ ಕಾಣೆಯಾಗದ್ದ ನಾಯಿ ಬಾಗಿಲು ತೆರೆಯಲು ಡೋರ್ ಬೆಲ್ ಒತ್ತಿ, ಮಾಲೀಕನ ಎಚ್ಚರಿಸಿದ ಘಟನೆ  

ದಕ್ಷಿಣ ಕ್ಯಾರೋಲಿನಾ(ಜು.05): ನಾಯಿ ಕಾಣೆಯಾಗಿ ಪತ್ತೆಗಾಗಿ ಮಾಲೀಕರು ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿದ ಉದಾಹರಣೆಗಳಿವೆ. ನಾಯಿಯನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ ಅದೆಷ್ಟೋ ಪ್ರಸಂಗಗಳಿವೆ. ಇನ್ನು ಒಂದು ವಾರ, ಒಂದು ತಿಂಗಳ ಬಳಿಕ ನಾಯಿ ವಾಪಸ್ ಬಂದ ಘಟನೆಗಳು ಇವೆ. ಆದರೆ ವಿಚಿತ್ರ ಪ್ರಸಂಗ ನಡೆದಿದೆ. ಕಾಣೆಯಾಗಿದ್ದ ನಾಯಿ, ಮಧ್ಯರಾತ್ರಿ ಮನೆಗೆ ಬಂದು ಡೋರ್ ಬೆಲ್ ಮಾಡಿದ ಘಟನೆ ನಡೆದಿದೆ. 

Add Asianetnews Kannada as a Preferred SourcegooglePreferred

ಮಾಲೀಕನ ಕಾರು ಪಾರ್ಕ್ ಮಾಡಲು ನೆರವಾದ ಮುದ್ದು ನಾಯಿ; ವಿಡಿಯೋ ವೈರಲ್!.

ಅಮೆರಿಕದ ಸೌಥ್ ಕ್ಯಾರೋಲಿನಾದ ನಿವಾಸಿಯಾಗಿರುವ ಮೆರಿ ಲಿನ್ ಮುದ್ದಿನ ಸಾಕು ನಾಯಿ ಕಾಣೆಯಾಗಿದೆ. ಸುತ್ತಮುತ್ತಲು ಸೇರಿ ಎಲ್ಲಾ ಕಡೆ ಹುಡುಕಾಡಿದ ಮೆರಿ, ರಾತ್ರಿ ಮನೆಗೆ ಮರಳಿ ನಿರಾಸೆಯೊಂದಿಗೆ ಮಲಿದ್ದಾರೆ. ಮಧ್ಯರಾತ್ರಿ ಕಾಣೆಯಾಗಿದ್ದ ನಾಯಿ ಮನೆಗೆ ಮರಳಿದೆ. 

ಮನೆಗೆ ಬಂದ ನಾಯಿ ಬಾಗಿಲು ತರೆಯಲು ಡೋರ್ ಬೆಲ್ ಮಾಡಿದೆ. ಡೋರ್ ಬೆಲ್ ಶಬ್ದಕ್ಕೆ ಎಚ್ಚರಗೊಂಡ ಮಾಲೀಕ ಲಿನ್, ಬಾಗಿಲು ತೆರೆದಾಗ ಅಚ್ಚರಿ ಕಾದಿತ್ತು, ಸಾಕು ನಾಯಿ ನೋಡಿ ಸಂತಸ ಇಮ್ಮಡಿಗೊಂಡಿದೆ. ಆದರೆ ಡೋರ್ ಬೆಲ್ ಮಾಡಿದ್ದು ಯಾರು ಎಂದು ತಿಳಿದುಕೊಳ್ಳುವ ಕುತೂಹಲದಿಂದ, ಮನೆ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದ್ದಾನೆ. 

ಮಾಲೀಕನ ಜೊತೆ ನಾಯಿಯನ್ನು ಅರೆಸ್ಟ್ ಮಾಡಿದ ಪೊಲೀಸ್; ಕಾರಣ ಕೊರೋನಾ ರೂಲ್ಸ್!.

ಈ ವೇಳೆ ಮಧ್ಯರಾತ್ರಿ ಮನೆಗೆ ಬಂದ ನಾಯಿಯೇ ಡೋರ್ ಬೆಲ್ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.


YouTube video player