ಪಹಲ್ದಾಂ ನರಮೇಧಕ್ಕೆ ಕಾರಣ ಎನ್ನಲಾದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಂ ಮುನೀರ್ ಅವರನ್ನು ಪದಚ್ಯುತಿಗೊಳಿಸುವಂತೆ ಪಾಕಿಸ್ತಾನಿ ನಾಗರಿಕರು ಮತ್ತು ನಿವೃತ್ತ ಸೇನಾಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.
ಇಸ್ಲಾಮಾಬಾದ್: ಪಹಲ್ಗಾಂ ನರಮೇಧಕ್ಕೆ ನೇರ ಕಾರಣ ಎಂದು ಹೇಳಲಾದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಂ ಮುನೀರ್ ಪದಚ್ಯುತಿಗೆ ಇದೀಗ ಪಾಕಿಸ್ತಾನಿ ನಾಗರಿಕರು ಮತ್ತು ಪಾಕ್ ನಿವೃತ್ತ ಸೇನಾಧಿಕಾರಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. ರಿಸೈನ್ ಆಸಿಂ ಮುನೀರ್, ಪಾಕಿಸ್ತಾನ್ ಅಂಡರ್ ಮಿಲಿಟರಿ ಫ್ಯಾಸಿಸಂ, ಬಾಯ್ಕಾಟ್ ಫೌಜಿ ದಂಡಾ ಹೆಸರಿನ ಹ್ಯಾಷ್ ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿವೆ.
ನಿವೃತ್ತ ಸೇನಾಧಿಕಾರಿ ಆದಿಲ್ ರಾಜಾ, 'ಸ್ವತಃ ಮುನೀರ್ ಐಎಸ್‌ಐ ಮೂಲಕ ಪಹಲ್ಗಾಮ್ ಹತ್ಯಾಕಾಂಡ ನಡೆಸಿದ್ದಾರೆ. ಅವರನ್ನು ತಕ್ಷಣವೇ ಪದಚ್ಯುತಿಗೊಳಿಸಿ ಎಂದು ಆಗ್ರಹಿಸಿದ್ದಾರೆ. ಸುಫಿಸಾಲ್ ಎಂಬ ಇನ್ನೊಂದು ಖಾತೆಯಲ್ಲಿ 'ಮುನೀರ್ ತೆಗೆದುಹಾಕಿ ಪಾಕ್ ಉಳಿಸಿ' ಎಂದು ಒತ್ತಾಯಿಸಿದ್ದಾರೆ. 'ಮುನೀರ್ ನಮ್ಮ ದೇಶಕ್ಕೆ ಆಪಾಯಕಾರಿಯಾದ ಕಾರಣ ಮೊದಲು ಕಿತ್ತುಹಾಕಿ' ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ. ಪಾಕಿಸ್ತಾನದ ಒಳಿತಿಗಾಗಿ ಅಸೀಮ್ ಮುನೀರ್‌ನನ್ನು ಕೂಡಲ ಪಾಕಿಸ್ತಾನದ ಸೇನಾಧಿಕಾರಿ ಹುದ್ದೆಯಿಂದ ವಜಾ ಮಾಡಬೇಕು ಆತ ಆತನ ದೇಶಕ್ಕೆ ತುಂಬಾ ಅಪಾಯಕಾರಿ ಎಂದು ಮತ್ತೊಬ್ಬರು ಪೋಸ್ಟ್ ಮಾಡಿ ಮುನೀರ್ ಪದಚ್ಯುತಿಗೆ ಆಗ್ರಹಿಸಿದ್ದಾರೆ.
ನೀವು ನಿಮ್ಮ ಕೆಲಸವನ್ನು ಮಾಡಲು ವಿಫಲವಾಗಿದ್ದೀರಿ, ನೀವು ಯಾಕೆ 26 ನವಂಬರ್‌ನಲ್ಲಿ ಮುಗ್ಧ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದೀರೀ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ
ಭಾರತೀಯರ ಕತ್ತು ಸೀಳುವ ಸನ್ನೆಮಾಡಿದ ಪಾಕ್ ರಕ್ಷಣಾ ಅಧಿಕಾರಿ
ಲಂಡನ್: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರದಾಳಿ ಖಂಡಿಸಿ ಇಲ್ಲಿನ ಪಾಕಿಸ್ತಾನ ದೂತಾವಾಸದ ಮುಂದೆ ಪ್ರತಿಭಟಿಸುತ್ತಿದ್ದ 500ಕ್ಕೂ ಅಧಿಕ ಭಾರತ ಮೂಲದವರನ್ನುದ್ದೇಶಿಸಿ ಪಾಕ್ ಸೇನಾಧಿಕಾರಿಯೊಬ್ಬರು ಕತ್ತು ಕತ್ತರಿಸುವಂತೆ ಸನ್ನೆ ಮಾಡಿ ಉದ್ಧಟತನ ಮೆರೆದ ಘಟನೆ ಶನಿವಾರ ನಡೆದಿದೆ.ಈ ವೀಡಿಯೋ ವೈರಲ್ ಆಗಿ ಭಾರೀ ಟೀಕೆಗೆ ಗ್ರಾಸವಾಗುತ್ತಿದೆ. ವಿಡಿಯೋದಲ್ಲಿ ಪಾಕ್ ದೂತಾವಾಸದ ಮೇಲೆ ನಿಂತ ಕರ್ನಲ್ ತೈಮೂರ್ ರಾಹತ್, ಈ ಹಿಂದೆ ಪಾಕ್ ವಶವಾಗಿದ್ದ ಭಾರತೀಯ ವಾಯುಪಡೆಯ ಯೋಧ ಅಭಿನಂದನ್ ಅವರ ಫೋಟೋ ಹಿಡಿದುಕೊಂಡು ಅವರ ಕತ್ತು ಕತ್ತರಿಸುವ ರೀತಿಯಲ್ಲಿ ಸನ್ನೆ ಮಾಡಿ ಭಾರತೀಯ ಪ್ರತಿಭಟನಾಕಾರರತ್ತ ಎಚ್ಚರಿಕೆ ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಲಾಹೋರ್ ಕಸಿಯುತ್ತೀರಾ? ಕೆಲವೇ ಗಂಟೆಗಳಲ್ಲಿ ನೀವೇ ವಾಪಸ್ ಕೊಡ್ತೀರಾ: ಪಾಕಿಗಳಿಂದಲೇ ಪಾಕ್ ಸರ್ಕಾರ ಟ್ರೋಲ್!
ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪೌಲ್, ಎಲ್ಲಾ ಪಾಕಿಸ್ತಾನಿಗಳು, ಜಿಯಾ ಉಲ್‌ಹಕ್ ಸ್ಥಾಪಿತ ಮದರಸಾಗಳಲ್ಲಿ ಪಳಗಿದ ಕುತಂತ್ರಿಗಳು. ಸೇನಾಧಿಕಾರಿ, ರಾಜತಾಂತ್ರಿಕ, ವೈದ್ಯ, ಯಾರೇ ಆಗಲಿ, ಅವರೆಲ್ಲ ಇದೇ ಮನಃಸ್ಥಿತಿಯವರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಈ ಆಕ್ರಮಣಕಾರಿ ವರ್ತನೆ ತೋರಿದವರ ವಿರುದ್ಧ ಬ್ರಿಟನ್ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಾವಿರಾರು ವರ್ಷ ಹಳೆಯ ಕಾಶ್ಮೀರ ಸಮಸ್ಯೆ ಭಾರತ, ಪಾಕಿಂದ ಇತ್ಯರ್ಥ: ಟ್ರಂಪ್
ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವಾಗಲೂ ಉದ್ವಿಗ್ನತೆ ಇದೆ. ಎರಡೂ ದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಬಗೆಹರಿಸಿಕೊಳ್ಳುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, 'ನಾನು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ತುಂಬಾ ಹತ್ತಿರವಾಗಿದ್ದೇನೆ. 1000 ವರ್ಷಗಳಿಂದ ಕಾಶ್ಮೀರಕ್ಕಾಗಿ ಎರಡೂ ದೇಶಗಳು ಹೋರಾಡುತ್ತಿವೆ. ಗಡಿಯಲ್ಲಿ 1,500 ವರ್ಷಗಳಿಂದ ಉದ್ವಿಗ್ನತೆ ಇದೆ. ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಅವರು ಬಗೆಹರಿಸುತ್ತಾರೆ ಎಂಬುದು ನನಗೆ ಗೊತ್ತಿದೆ' ಎಂದರು.
ಇದನ್ನೂ ಓದಿ: ಭಾರತದ ಉಗ್ರ ಬೇಟೆಗೆ ನಮ್ಮ ಪೂರ್ಣ ಬೆಂಬಲ : ಅಮೆರಿಕ
