18 ವರ್ಷದ ಡಾನಿಯಾ ಷಾ ಜೊತೆ ಅಮೀರ್ ಲಿಯಾಕತ್ ಮದುವೆ49 ವರ್ಷದ ಅಮೀರ್ ಲಿಯಾಕತ್ ಗೆ ಇದು ಮೂರನೇ ಮದುವೆಟ್ವಿಟರ್ ನಲ್ಲಿ ಅಮೀರ್ ಲಿಯಾಕತ್ ಮದುವೆಯ ಸಖತ್ ಮೀಮ್ಸ್

ಬೆಂಗಳೂರು (ಫೆ. 11): ಜನಪ್ರಿಯ ಟೆಲಿವಿಷನ್ ನಿರೂಪಕ ಮತ್ತು ಪಾಕಿಸ್ತಾನ ಸಂಸದ (Pakistani politician )ಹಾಗೂ ಸಚಿವ ಡಾ ಅಮೀರ್ ಲಿಯಾಕತ್ ಹುಸೇನ್ (Aamir Liaquat Hussain) 18 ವರ್ಷದ ಸಯೀದಾ ದಾನಿಯಾ ಷಾ (Syeda Dania Shah) ಅವರೊಂದಿಗೆ ವಿವಾಹವಾದರು. ಇದು ಅಮೀರ್ ಲಿಯಾಕತ್ ಗೆ ಮೂರನೇ ಮದುವೆ. ಸಾಕಷ್ಟು ಊಹಾಪೋಹಗಳ ನಡುವೆ ಅವರ ಎರಡನೇ ಪತ್ನಿ ನಟಿ ಟುಬಾ ಅನ್ವರ್ (Syeda Tuba Anwar), ವಿಚ್ಚೇದನವನ್ನು ದೃಢಪಡಿಸಿದ ಕೆಲವೇ ಗಂಟೆಗಳಲ್ಲಿಯೇ ಅಮೀರ್ ಲಿಯಾಕತ್ ತಮ್ಮ ಮೂರನೇ ಮದುವೆಯನ್ನು ಖಚಿತಪಡಿಸಿದರು. 

ಕಳೆದ ಕೆಲವು ದಿನಗಳಿಂದ ಅಮೀರ್ ಲಿಯಾಕತ್ ತಮ್ಮ ಇನ್ಸ್ ಟಾಗ್ರಾಮ್ (Instagram)ಪುಟದಲ್ಲಿ ಡಾನಿಯಾ ಷಾ ಅವರ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಇನ್ನೊಂದೆಡೆ ಡಾನಿಯಾ ಷಾ ಕೂಡ ತಮ್ಮ ಮದುವೆಯನ್ನು ಇನ್ಸ್ ಟಾಗ್ರಾಮ್ ನಲ್ಲಿ ಘೋಷಣೆ ಮಾಡಿದ್ದು, ಟಿವಿಯ ಜನಪ್ರಿಯ ನಿರೂಪಕರಾಗಿರುವ ಅಮೀರ್ ಲಿಯಾಕತ್, ಬಾಲ್ಯದಲ್ಲಿ ನನ್ನ ಆದರ್ಶವಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

ಅಮೀರ್ ಲಿಯಾಕತ್ ತಮ್ಮ ಮದುವೆಯನ್ನು ಘೋಷಣೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ ಗಳ ಹಬ್ಬ ಆರಂಭವಾಗಿದೆ. ಅಮೀರ್ ಲಿಯಾಕತ್ ಮದುವೆಯ ಕುರಿತಾಗಿ ಟ್ವಿಟರ್ ನಲ್ಲಿ ಸಾಕಷ್ಟು ಹ್ಯಾಶ್ ಟ್ಯಾಗ್ ಸೃಷ್ಟಿಯಾಗಿದ್ದು ಮಾತ್ರವಲ್ಲದೆ, ಪಾಕಿಸ್ತಾನದಲ್ಲಿ ಟಾಪ್ 10 ಟ್ರೆಂಡ್ ಗಳ ಪೈಕಿ ಒಂದಾಗಿತ್ತು. ಅದರಲ್ಲೂ ಬಹುತೇಕ ಮೀಮ್ಸ್ ಗಳು ಅವರ ವಯಸ್ಸಿನ ಅಂತರದ ಕುರಿತಾಗಿಯೇ ಬಂದಿವೆ.

Scroll to load tweet…


Ek Love Ya Trailer: ಜೋಗಿ ಪ್ರೇಮ್ ದೃಶ್ಯ ವೈಭವದಲ್ಲಿ ಮಿಂಚಿದ ರಾಣಾ-ರಚಿತಾ-ರೀಷ್ಮಾ!
ಅಮೀರ್ ಲಿಯಾಕತ್ ಅವರ ಮದುವೆಗೆ ಅಭಿನಂದನೆ ಸಲ್ಲಿಸಿರುವ ಪಾಕಿಸ್ತಾನದ ನಟ ಅರ್ಸಲನ್ ನಾಸಿರ್, ದೇಶದ ಯುವ ಜನರು ಇನ್ನೂ ಒಂದು ಮದುವೆಯಾಗಲು ಕಷ್ಟಪಡುತ್ತಿರುವಾಗ, 49 ವರ್ಷದ ಅಮೀರ್ ಲಿಯಾಕರ್ ಮೂರನೇ ಬಾರಿಗೆ ಮದುವೆಯಾಗಿದ್ದಾರೆ ಎನ್ನುವ ಮೂಲಕ ಕಾಲೆಳೆದಿದ್ದಾರೆ.

Scroll to load tweet…


ಯುವಕರ ಹೃದಯ ಬಡಿತ ಹೆಚ್ಚಿಸಿದ ಮಿಯಾ ಖಲೀಫಾ; Topless ಶವರ್ ಫೋಟೋ ವೈರಲ್‌!
ಮದುವೆಯ ನಂತರ, ಅಮೀರ್ ಮತ್ತು ಸಯೀದಾ ಒಟ್ಟಿಗೆ ಸಂದರ್ಶನವನ್ನು ನೀಡಿದ್ದು, ಅದರಲ್ಲಿ ಸಯೀದಾ ಅವರು ಆಮಿರ್ ಅನ್ನು ಬಾಲ್ಯದಿಂದಲೂ ಇಷ್ಟಪಡುತ್ತಿದ್ದರು ಎಂದು ಹೇಳಿದ್ದಾರೆ. ಅವಳು ಡಾನಿಷ್ ಬಾಲ್ಯದಲ್ಲಿ ಅಳುತ್ತಿದ್ದಾಗ, ಅವರ ತಾಯಿ ಮತ್ತು ತಂದೆ ಅಮೀರ್ ಅವರ ಕಾರ್ಯಕ್ರಮವನ್ನು ಟಿವಿಯಲ್ಲಿ ಹಾಕುತ್ತಿದ್ದರು ಮತ್ತು ಅವರು ಅವನನ್ನು ನೋಡಿದ ನಂತರ ಸುಮ್ಮನಾಗುತ್ತಿದ್ದರಂತೆ. ಈ ವಿಚಾರವನ್ನು ಹಿಡಿದುಕೊಂಡೂ ಮೀಮ್ಸ್ ಗಳು ಬಂದಿವೆ.

Scroll to load tweet…


"ಇಂದಿನಿಂದ ನನ್ನ ಮಗು ಏನಾದರೂ ಅಳಲು ಆರಂಭಿಸಿದರೆ, ನಾನು ಟಿವಿಯಲ್ಲಿ ಕೈಲಿ ಜೆನ್ನರ್ ಅವರನ್ನು ತೋರಿಸುತ್ತೇನೆ" ಎಂದು ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ್ದಾನೆ. ಬಹುಶಃ ಅಮೀರ್ ಲಿಯಾಕತ್ ಪ್ರತಿ "ಆರು ತಿಂಗಳಿಗೊಮ್ಮೆ, ನನಗೆ ಮದುವೆಯಾಗುವ ಆಸೆ ಇದೆ" ಎಂದು ಹೇಳಬಹುದು ಎಂದು ಟ್ವೀಟ್ ಮಾಡಿದ್ದಾರೆ.