ಇಲ್ಲಿರುವ ಟ್ವೀಟರ್‌ ಕಚೇರಿಯ ಜಾಗಕ್ಕೆ ಬಾಡಿಗೆ ಕಟ್ಟಿಲ್ಲ ಎಂದು ಕಂಪನಿಯ ವಿರುದ್ಧ ಕಟ್ಟಡದ ಮಾಲೀಕರು ಪ್ರಕರಣ ದಾಖಲಿಸಿದ್ದಾರೆ. ಮಸ್ಕ್ ಸುಮಾರು 1.12 ಕೋಟಿ ರು. ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮಾಲೀಕ ದೂರಿದ್ದಾರೆ. 

ಸ್ಯಾನ್‌ಫ್ರಾನ್ಸಿಸ್ಕೋ: ಇಲ್ಲಿರುವ ಟ್ವೀಟರ್‌ ಕಚೇರಿಯ ಜಾಗಕ್ಕೆ ಬಾಡಿಗೆ ಕಟ್ಟಿಲ್ಲ ಎಂದು ಕಂಪನಿಯ ವಿರುದ್ಧ ಕಟ್ಟಡದ ಮಾಲೀಕರು ಪ್ರಕರಣ ದಾಖಲಿಸಿದ್ದಾರೆ. ಮಸ್ಕ್ ಸುಮಾರು 1.12 ಕೋಟಿ ರು. ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮಾಲೀಕ ದೂರಿದ್ದಾರೆ. ಹಾರ್ಚ್‌ಫೋರ್ಡ್‌ (Horchford) ಕಟ್ಟಡದ 30ನೇ ಮಹಡಿಯದಲ್ಲಿರುವ ಟ್ವೀಟರ್‌ ಕಚೇರಿಯ ಬಾಡಿಗೆಯನ್ನು 5 ದಿನಗಳಲ್ಲಿ ಕಟ್ಟಬೇಕು ಎಂದು ಮಾಲಿಕ ಕೊಲಂಬಿಯಾ ರಿಯಾಟ್‌, ಚುಟುಕು ಜಾಲತಾಣ ಟ್ವೀಟರ್‌ಗೆ ಡಿ.16ರಂದು ಸೂಚನೆ ನೀಡಿದ್ದರು. ಆದರೆ ಮಸ್‌್ಕ ಬಾಡಿಗೆ ಕಟ್ಟಲು ವಿಫಲರಾದ ಕಾರಣ ಸ್ಯಾನ್‌ಫ್ರಾನ್ಸಿಸ್ಕೋ ಸ್ಟೇಟ್‌ ಕೋರ್ಟ್‌ನಲ್ಲಿ ಟ್ವೀಟರ್‌ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಟ್ವೀಟರ್‌ (Twitter) ತನ್ನ ಜಾಗತಿಕ ಕಚೇರಿಗಳ ಬಾಡಿಗೆಯನ್ನು ಕಟ್ಟಿಲ್ಲ ಎಂದು ಡಿಸೆಂಬರ್‌ ಮೊದಲ ವಾರದಲ್ಲಿ ನ್ಯೂಯಾರ್ಕ್ ಟೈಮ್ಸ್‌ (New york Times) ವರದಿ ಮಾಡಿತ್ತು. ಅಲ್ಲದೇ ಚಾರ್ಟರ್‌ ವಿಮಾನಗಳಿಗೆ (charter flights) ಮಸ್ಕ್ 1.6 ಕೋಟಿ ರು. ಹಣ ಪಾವತಿಸಿಲ್ಲ ಎಂದು ಖಾಸಗಿ ವಿಮಾನ ಕಂಪನಿಯೊಂದು (private airlines)ಮೊಕದ್ದಮೆ ದಾಖಲಿಸಿದೆ ಎಂದು ಮತ್ತೊಂದು ಮಾಧ್ಯಮ ವರದಿ ಮಾಡಿದೆ.

ಟ್ವಿಟ್ಟರ್‌ ಕಚೇರಿಗೆ ಸ್ವಂತ ಟಾಯ್ಲೆಟ್ ಪೇಪರ್ ತರುತ್ತಿರುವ ಉದ್ಯೋಗಿಗಳು: ಕಾರಣ ಹೀಗಿದೆ..

1.6 ಲಕ್ಷ ಕೋಟಿ ರು. ನಷ್ಟ ಮಾಡಿಕೊಂಡ ಮೊದಲ ವ್ಯಕ್ತಿ ಮಸ್ಕ್