ಟ್ವೀಟರ್‌ ಬಳಸುವ ಎಲ್ಲರಿಗೂ ಶುಲ್ಕ: ಎಲಾನ್‌ ಮಸ್ಕ್‌ ಸುಳಿವು

ಜಗತ್ತಿನ ಜನಪ್ರಿಯ ಚುಟುಕು ಜಾಲತಾಣ ವೇದಿಕೆಯಾದ ಟ್ವೀಟರನ್ನು ಖರೀದಿಸಿದ ಬಳಿಕ ಸಾಕಷ್ಟು ಬದಲಾವಣೆಗಳನ್ನು ತಂದಿರುವ ಎಲಾನ್‌ ಮಸ್ಕ್‌ (Elon Musk), ಇನ್ಮುಂದೆ ಟ್ವೀಟರ್‌ ಬಳಕೆಗೆ ಶುಲ್ಕ ವಿಧಿಸಲಾಗುತ್ತದೆ ಎಂಬುದರ ಸುಳಿವು ನೀಡಿದ್ದಾರೆ.

twitter chief elon musk give hints  that every twitter user have to pay money to use social Media App Twitter Or X akb

ನ್ಯೂಯಾರ್ಕ್‌: ಜಗತ್ತಿನ ಜನಪ್ರಿಯ ಚುಟುಕು ಜಾಲತಾಣ ವೇದಿಕೆಯಾದ ಟ್ವೀಟರನ್ನು ಖರೀದಿಸಿದ ಬಳಿಕ ಸಾಕಷ್ಟು ಬದಲಾವಣೆಗಳನ್ನು ತಂದಿರುವ ಎಲಾನ್‌ ಮಸ್ಕ್‌ (Elon Musk), ಇನ್ಮುಂದೆ ಟ್ವೀಟರ್‌ ಬಳಕೆಗೆ ಶುಲ್ಕ ವಿಧಿಸಲಾಗುತ್ತದೆ ಎಂಬುದರ ಸುಳಿವು ನೀಡಿದ್ದಾರೆ.

ಟ್ವೀಟರ್‌ನಲ್ಲಿರುವ ನಕಲಿ ಅಕೌಂಟ್‌ಗಳು (fake accounts) ಮತ್ತು ಬಾಟ್‌ಗಳನ್ನು ನಿರ್ಮೂಲನೆ ಮಾಡಲು ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೂ ಮಾಸಿಕ ಶುಲ್ಕ ವಿಧಿಸಲು ತಿರ್ಮಾನಿಸಲಾಗಿದೆ ಎಂದು ಮಸ್ಕ್‌ ಹೇಳಿದ್ದಾರೆ. ಆದರೆ ಎಷ್ಟು ಪ್ರಮಾಣದಲ್ಲಿ ಶುಲ್ಕ ವಿಧಿಸಲಾಗುತ್ತದೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು (Benjamin Netanyahu) ಅವರ ಜೊತೆ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಜಿ20 ಬಳಿಕ ಮೋದಿ ಜನಪ್ರಿಯತೆ ಹೆಚ್ಚು, ಟ್ವಿಟರ್ ಗರಿಷ್ಠ ಫಾಲೋವರ್ಸ್‌ನಲ್ಲಿ ದಿಗ್ಗಜರ ಹಿಂದಿಕ್ಕಿದ ಪ್ರಧಾನಿ!

ಪ್ರಸ್ತುತ ಟ್ವೀಟರ್‌ನಲ್ಲಿ 55 ಕೋಟಿ ಬಳಕೆದಾರರಿದ್ದು, ಪ್ರತಿನಿತ್ಯ 20 ಕೋಟಿಯಷ್ಟು ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಇದರಲ್ಲಿ ನಕಲಿ ಖಾತೆಗಳು ಎಷ್ಟಿವೆ ಎಂಬುದನ್ನು ಅವರು ಬಹಿರಂಗ ಪಡಿಸಿಲ್ಲ. ಹಾಲಿ ಬ್ಲ್ಯೂಟಿಕ್‌ ಸೇವೆಗೆ ಮಸ್ಕ್‌ ಶುಲ್ಕ ಪ್ರಾರಂಭಿಸಿದ್ದಾರೆ.

ಭಾರತದ ಈ ನೀಲಿಕಣ್ಣಿನ ಬೆಡಗಿ ಎಲಾನ್‌ ಮಸ್ಕ್‌ ಸೀಕ್ರೆಟ್ ಗರ್ಲ್‌ಫ್ರೆಂಡ್, ಅವಳಿ ಮಕ್ಕಳೂ ಇದ್ದಾರೆ!

Latest Videos
Follow Us:
Download App:
  • android
  • ios