- Home
- News
- India News
- ಜಿ20 ಬಳಿಕ ಮೋದಿ ಜನಪ್ರಿಯತೆ ಹೆಚ್ಚು, ಟ್ವಿಟರ್ ಗರಿಷ್ಠ ಫಾಲೋವರ್ಸ್‌ನಲ್ಲಿ ದಿಗ್ಗಜರ ಹಿಂದಿಕ್ಕಿದ ಪ್ರಧಾನಿ!
ಜಿ20 ಬಳಿಕ ಮೋದಿ ಜನಪ್ರಿಯತೆ ಹೆಚ್ಚು, ಟ್ವಿಟರ್ ಗರಿಷ್ಠ ಫಾಲೋವರ್ಸ್‌ನಲ್ಲಿ ದಿಗ್ಗಜರ ಹಿಂದಿಕ್ಕಿದ ಪ್ರಧಾನಿ!
ಜಿ20 ಶೃಂಗಸಭೆ ಯಶಸ್ವಿಯಾಗಿ ಆಯೋಜಿಸಿದ ಪ್ರಧಾನಿ ನರೇಂದ್ರ ಮೋದಿ ಇದೀಗ ವಿಶ್ವದ ಮನೆಮಾತಾಗಿದ್ದಾರೆ. ಮೋದಿ ಜನಪ್ರಿಯತೆ, ನಾಯಕತ್ವ ಇದೀಗ ಮತ್ತಷ್ಟು ಹೆಚ್ಚಾಗಿದೆ. ಇದರ ಜೊತೆಗೆ ಮೋದಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಲೇಡಿ ಗಾಗಾ, ಟ್ರಂಪ್ ಸೇರಿದಂತೆ ಹಲವು ದಿಗ್ಗಜರನ್ನು ಮೋದಿ ಹಿಂದಿಕ್ಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಶ್ವದ ಜನಪ್ರಿಯ ನಾಯಕ. ಇದು ಹಲವು ಸಮೀಕ್ಷೆಗಳಲ್ಲಿ ಸಾಬೀತಾಗಿದೆ. ಇದೀಗ ಜಿ20 ಶೃಂಗಸಭೆ ಬಳಿಕ ಮೋದಿ ಜನಪ್ರಿಯತೆ ಹಾಗೂ ಫಾಲೋವರ್ಸ್ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ದೇಶ ವಿದೇಶದಲ್ಲಿ ಮೋದಿಗೆ ಫಾಲೋವರ್ಸ್ ಇದ್ದಾರೆ. ಅದರಲ್ಲೂ ಟ್ವಿಟರ್ ಮೂಲಕ ಮೋದಿ ಗರಿಷ್ಠ ಫಾಲೋವರ್ಸ್ ಹೊಂದಿದೆ ವಿಶ್ವದ ಮೊದಲ ಸಕ್ರೀಯ ರಾಜಕೀಯ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ನರೇಂದ್ರ ಮೋದಿ ಟ್ವಿಟರ್‌ನಲ್ಲಿ 91.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇದು ಸಕ್ರೀಯ ರಾಜಕೀಯ ನಾಯಕನೊಬ್ಬ ಪಡೆದಿರುವ ಅತ್ಯಂತ ಗರಿಷ್ಠ ಹಿಂಬಾಲಕರ ಸಂಖ್ಯೆ ಆಗಿದೆ. ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 87.3 ಮಿಲಿಯನ್ ಫಾಲೋವರ್ಸ್ ಮೂಲಕ 2ನೇ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಟ್ವಿಟರ್ ಗರಿಷ್ಠ ಹಿಂಬಾಲಕರ ಸಂಖ್ಯೆಯಲ್ಲಿ ನರೇಂದ್ರ ಮೋದಿ ವಿಶ್ವದಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 9ನೇ ಸ್ಥಾನದಲ್ಲಿದ್ದಾರೆ.
ಗರಿಷ್ಠ ಟ್ವಿಟರ್ ಹಿಂಬಾಲಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಟ್ವಿಟರ್ ಮಾಲೀಕ ಎಲಾನ್ ಮಸ್ಕ್. ಉದ್ಯಮಿ ಮಸ್ಕ್, 156ಮಿಲಿಯನ್ ಟ್ವಿಟರ್ ಫಾಲೋವರ್ಸ್ ಹೊಂದಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ 131.9 ಮಿಲಿಯನ್ ಟ್ವಿಟರ್ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಒಟ್ಟಾರೆ ರಾಜಕೀಯ ನಾಯಕರ ಪೈಕಿ ಒಬಾಮ ಮೊದಲ ಸ್ಥಾನದಲ್ಲಿದ್ದರೆ, ಸಕ್ರೀಯ ರಾಜಕೀಯ ನಾಯಕರ ಪೈಕಿ ಮೋದಿ ಮೊದಲ ಸ್ಥಾನದಲ್ಲಿದ್ದಾರೆ.
ಕೆನಡಿಯನ್ ಸಿಂಗ್ ಜಸ್ಟೀನ್ ಬೀಬರ್ ಟ್ವಿಟರ್ ಫಾಲೋವರ್ಸ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಜಸ್ಟಿನ್ 111.7 ಮಿಲಿಯನ್ ಟ್ವಿಟರ್ ಫಾಲೋವರ್ಸ್ ಹೊಂದಿದ್ದಾರೆ.
Cristiano Ronaldo
109.5 ಮಲಿಯನ್ ಫಾಲೋವರ್ಸ್‌ನೊಂದಿಗೆ ಫುಟ್ಬಾಲ್ ದಿಗ್ಗದ ಕ್ರಿಸ್ಟಿಯಾನೋ ರೋನಾಲ್ಡೋ 4ನೇ ಸ್ಥಾನದಲ್ಲಿದ್ದರೆ, ಬಾರ್ಬೇಡಿಯನ್ ಸಿಂಗ್ ರೊಬಿ ರಿಹಾನ್ನಾ 5ನೇ ಸ್ಥಾನದಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ