Asianet Suvarna News Asianet Suvarna News

ಟರ್ಕಿ ಜನರಿಗೆ ಭಾರತದ ಸೇನಾ ಆಸ್ಪತ್ರೆಯೇ ಸಂಜೀವಿನಿ: ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 50000?

ಟರ್ಕಿಯಲ್ಲಿ ಭೂಕಂಪ ಪೀಡಿತ ಜನರಿಗೆ ಚಿಕಿತ್ಸೆ ನೀಡಲು ಭಾರತೀಯ ಸೇನೆಯು ಹಟಾಯ್‌ನಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಕೇವಲ 6 ಗಂಟೆಯೊಳಗಾಗಿ ನಿರ್ಮಿಸಿದೆ. ಇದು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿದ್ದು, ಭೂಕಂಪದಿಂದ ಜರ್ಜರಿತರಾಗಿರುವ ಟರ್ಕಿ ಜನರಿಗೆ ಸಂಜೀವಿನಿಯಾಗಿ ಪರಿಣಮಿಸಿದೆ.

 turkey syria earthquake Indias military hospital is Sanjeevini for people UN said Turkey earthquake death toll will be doubled akb
Author
First Published Feb 13, 2023, 6:17 AM IST

ಅಂಕಾರ: ಟರ್ಕಿಯಲ್ಲಿ ಭೂಕಂಪ ಪೀಡಿತ ಜನರಿಗೆ ಚಿಕಿತ್ಸೆ ನೀಡಲು ಭಾರತೀಯ ಸೇನೆಯು ಹಟಾಯ್‌ನಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಕೇವಲ 6 ಗಂಟೆಯೊಳಗಾಗಿ ನಿರ್ಮಿಸಿದೆ. ಇದು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿದ್ದು, ಭೂಕಂಪದಿಂದ ಜರ್ಜರಿತರಾಗಿರುವ ಟರ್ಕಿ ಜನರಿಗೆ ಸಂಜೀವಿನಿಯಾಗಿ ಪರಿಣಮಿಸಿದೆ.

96 ಭಾರತೀಯ ಸೇನಾ ಸಿಬ್ಬಂದಿಯ (Indian Army personnel) ತಂಡವು ಹಟಾಯ್‌ನ (Hatay) ಇಸ್ಕೆಂಡೆರನ್‌ನಲ್ಲಿನ (Iskenderan)ತಾತ್ಕಾಲಿಕ ಆಸ್ಪತ್ರೆಯಲ್ಲಿ ವೈದೈಕೀಯ ನೆರವು ನೀಡುತ್ತಿದೆ. ಇಲ್ಲಿ ಈವರೆಗೆ 10 ಪ್ರಮುಖ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು 800 ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಲೆಫ್ಟಿನೆಂಟ್‌ ಕರ್ನಲ್‌ ಯದುವೀರ್‌ ಸಿಂಗ್‌ (Lt. Col. Yaduveer Singh) ಹೇಳಿದ್ದಾರೆ. ಅಲ್ಲದೇ ಚಿಕಿತ್ಸೆಗೆ ಅಗತ್ಯವಿರುವಷ್ಟು ಸಮಯದವರೆಗೆ ರೋಗಿಗಳನ್ನು ತಾತ್ಕಾಲಿಕ ಆಸ್ಪತ್ರೆಯಲ್ಲೇ ಇರಿಸುವಂತಹ ವ್ಯವಸ್ಥೆಯನ್ನೂ ಮಾಡಲಾಗಿದೆ.

Turkey Earthquake 104 ಗಂಟೆ ಬಳಿಕ ಮಹಿಳೆ ರಕ್ಷಣೆ, ಆಸ್ಪತ್ರೆ ದಾಖಲಿಸಿದ ಮರುದಿನ ನಿಧನ!

ಸೇನೆಗೆ ಪ್ರಶಂಸೆ:

ಭಾರತೀಯ ಸೇನೆಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಯೋಬ್ಬರು, 'ಧನ್ಯವಾದಗಳು ಹಿಂದೂಸ್ಥಾನ್‌, ನೀವು ನಮ್ಮೊಂದಿಗಿದ್ದೀರಿ ಎಂದು ನಮಗೆ ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ' ಎಂದಿದ್ದಾರೆ. ಟರ್ಕಿ ಮಹಿಳೆಯೊಬ್ಬರು ಭಾರತೀಯ ಸೇನೆಯ ಮಹಿಳಾ ಸಿಬ್ಬಂದಿಗೆ ಮುತ್ತು ನೀಡುತ್ತಿದ್ದ ಫೋಟೊ ಇತ್ತೀಚೆಗೆ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಟರ್ಕಿ ಸಿರಿಯಾ ಭೂಕಂಪಕ್ಕೆ 50000 ಬಲಿ?

ವಿಶ್ವಸಂಸ್ಥೆ: ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ (ಟರ್ಸಿ) ಸಂಭವಿಸಿದ ಭಾರೀ ತೀವ್ರತೆಯ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 50 ಸಾವಿರ ದಾಟುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಪರಿಹಾರ ಸಮಿತಿ ಕಳವಳ ವ್ಯಕ್ತಪಡಿಸಿದೆ. ಈ ಮೂಲಕ ಈಗಾಗಲೇ ಖಚಿತಪಟ್ಟಿರುವ ಸಾವಿನ ಪ್ರಮಾಣವಾದ 28 ಸಾವಿರದ ಡಬಲ್‌ ಅಂದರೆ 50 ಸಾವಿರ ದಾಟಬಹುದು ಎಂದು ಹೇಳಿದೆ.

ಈ ಕುರಿತು ಟರ್ಕಿಯ ಕಹ್ರಾಮನ್ಮಾರಸ್‌ ನಗರದಲ್ಲಿ ಮಾತನಾಡಿರುವ ವಿಶ್ವಸಂಸ್ಥೆಯ ಪರಿಹಾರ ಸಮಿತಿ ಮುಖ್ಯಸ್ಥ ಮಾರ್ಟಿನ್‌ ಗ್ರಿಫ್ರಿತ್‌, ಅವಶೇಷಗಳಡಿ ಸಿಕ್ಕಿಬಿದ್ದಿರುವ ಅಥವಾ ಮೃತರ ಮಾಹಿತಿ ಸಿಗುವವರೆಗೂ ಉಭಯ ದೇಶಗಳಲ್ಲಿನ ಸಾವು ನೋವಿನ ಖಚಿತ ಮಾಹಿತಿ ನೀಡುವುದು ಕಷ್ಟ. ಆದರೆ ಒಂದಂತೂ ಖಚಿತ. ಸಾವಿನ ಪ್ರಮಾಣ ಈಗಿನದ್ದಕ್ಕಿಂತ ಡಬಲ್‌ ಅಥವಾ ಅದಕ್ಕಿಂತ ಹೆಚ್ಚಾಗಲಿದೆ ಎಂದಿದ್ದಾರೆ.

ಟರ್ಕಿಯಲ್ಲಿ 300 ಕಿ.ಮಿ.ಉದ್ದದ ಬಿರುಕು: ಸಿರಿಯಾದಲ್ಲಿ 53 ಲಕ್ಷ ಜನ ನಿರಾಶ್ರಿತ

ಇದುವರೆಗೆ ಉಭಯ ದೇಶಗಳು ನೀಡಿರುವ ಅಧಿಕೃತ ಮಾಹಿತಿ ಅನ್ವಯ ಟರ್ಕಿಯಲ್ಲಿ 24617 ಮತ್ತು ಸಿರಿಯಾದಲ್ಲಿ 3574 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 1 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 1939ರಲ್ಲಿ ಟರ್ಕಿಯಲ್ಲಿ ಸಂಭವಿಸಿ ಭೂಕಂಪದಲ್ಲಿ( earthquake) 32700 ಜನರು ಸಾವನ್ನಪ್ಪಿದ್ದರು. ಅದನ್ನು ಹೊರತುಪಡಿಸಿದರೆ ಈಗಿನದ್ದೇ ಅತಿದೊಡ್ಡ ದುರಂತವಾಗಿದೆ.

Follow Us:
Download App:
  • android
  • ios