Turkey Earthquake 104 ಗಂಟೆ ಬಳಿಕ ಮಹಿಳೆ ರಕ್ಷಣೆ, ಆಸ್ಪತ್ರೆ ದಾಖಲಿಸಿದ ಮರುದಿನ ನಿಧನ!

ಟರ್ಕಿ ಭೂಕಂಪದ ಬಳಿಕ ಬದುಕುಳಿದವರ ರಕ್ಷಣಾ ಕಾರ್ಯದ ಘಟನೆಗಳು ಮೈಜುಮ್ಮೆನಿಸುವಂತಿದೆ. 80 ಗಂಟೆ, 100 ಗಂಟೆಗಳ ಅವಶೇಷಗಳಡಿ ಸಿಲುಕಿದ್ದ ಕೆಲವರು ಪವಾಡ ಸದೃಶ್ಯ ಬದುಕುಳಿದಿದ್ದಾರೆ. ಹೀಗೆ ಬರೋಬ್ಬರಿ 104 ಗಂಟೆ ತೀವ್ರಗಾಯಗೊಂಡು ಅವಶೇಷಗಳಡಿ ಬದುಕುಳಿದಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಮಹಿಳೆ ಪ್ರಾರ್ಥನೆ ಫಲಿಸಲಿಲ್ಲ.

Turkey Earthquake 40 year old women dies in hospital day after 104 hour rescue operation from rubble ckm

ಟರ್ಕಿ(ಫೆ.11): ಟರ್ಕಿ ಭೂಕಂಪ ನಡೆದು 6 ದಿನಗಳಾಗಿದೆ. ರಕ್ಷಣಾ ಕಾರ್ಯಗಳು ಇನ್ನೂ ಮುಂದುವರಿದಿದೆ. ಕಳೆದ 6 ದಿನಗಳಿಂದ ಅವಶೇಷಗಳಡಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಹಲವರನ್ನು ಸುರಕ್ಷಿತವಾಗಿ ರಕ್ಷಿಸುವ ಕೆಲಸ ನಡೆಯುತ್ತಿದೆ. ಮತ್ತೆ ಕೆಲವರ ರಕ್ಷಣೆ ತಂಡಕ್ಕೂ ಅಸಾಧ್ಯವಾಗಿದೆ. ಇದರ ನಡುವೆ ಬರೋಬ್ಬರಿ 104 ಗಂಟೆ ಕಟ್ಟಡದ ಅವಶೇಷಗಳಿ ಗಾಯಗೊಂಡು ಸಿಲುಕಿದ್ದ 40 ವರ್ಷದ ಮಹಿಳೆಯನ್ನು ರಕ್ಷಿಸಲಾಗಿತ್ತು. ಸತತ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ದಾಖಲಿಸಿದ ಮರುದಿನವೇ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ದಕ್ಷಿಣ ಟರ್ಕಿಯ ಕಿರ್ಖಾನ್ ಬಳಿ ಕಟ್ಟಡದ ಅವಶೇಷಗಳಡಿ 40 ವರ್ಷದ ಮಹಿಳೆ ಝೈನೆಪ್ ಕಹರ್‌ಮ್ಯಾನ್ ಅವರನ್ನು ರಕ್ಷಿಸಲಾಗಿತ್ತು. ಜರ್ಮನಿ ರಕ್ಷಣಾ ತಂಡ ಮಹಿಳೆಯನ್ನು ಅವಶೇಷಗಳಡಿಯಿಂದ ರಕ್ಷಿಸಿತ್ತು. ಇದೀಗ ಈ ಸುದ್ದಿ ತಿಳಿದು ಜರ್ಮನಿ ರಕ್ಷಣಾ ತಂಡ ಬೇಸರ ವ್ಯಕ್ತಪಡಿಸಿದೆ. ನಾವು ಝೈನೆಪ್ ಅವರನ್ನು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದೆವು. ಆದರೆ ಝೈನೆಪ್ ಬದುಕುಳಿಯಲಿಲ್ಲ ಅನ್ನೋ ಸುದ್ದಿ ಆಘಾತ ತಂದಿದೆ ಎಂದು ರಕ್ಷಣಾ ತಂಡದ ನಾಯಕ ಸ್ಟೀವನ್ ಬಾಯರ್ ಹೇಳಿದ್ದಾರೆ.

Turkey Earthquake ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಎಂಜಿನೀಯರ್ ಶವವಾಗಿ ಪತ್ತೆ!

ಭೂಕಂಪ ಸಂಭವಿಸಿದ ಗರಿಷ್ಠ 48 ಗಂಟೆಗಳ ಒಳಗೆ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಗಳನ್ನು ರಕ್ಷಿಸಬೇಕು. ಹೀಗಾದರೆ ಬದುಕಿಸಲು ಸಾಧ್ಯವಿದೆ. ಆದರೆ ಈಗಾಗಲೇ 6 ದಿನಗಳನ್ನು ಕಳೆದಿದೆ. ಇದೀಗ ಗಾಯಗೊಂಡು ಅವಶೇಷಗಳಡಿ ಸಿಲುಕಿರುವವರು ಪರಿಸ್ಥಿತಿ ಶೋಚನೀಯವಾಗಿರುತ್ತದೆ. ಇಷ್ಟೇ ಅಲ್ಲ ಬದುಕುಳಿಯುವ ಸಾಧ್ಯತೆ ತೀರಾ ವಿರಳ ಎಂದು ಸ್ವೀವನ್ ಬಾಯರ್ ಹೇಳಿದ್ದಾರೆ.

ಶತಮಾನದ ಭೀಕರ ಭೂಕಂಪಕ್ಕೆ ತತ್ತರಿಸಿರುವ ಟರ್ಕಿ, ಸಿರಿಯಾ ದೇಶಗಳಲ್ಲಿ ಒಟ್ಟು ಸಾವಿನ ಸಂಖ್ಯೆ 25,000ಕ್ಕೆ ಏರಿಕೆಯಾಗಿದೆ.ಈ ಪೈಕಿ ಟರ್ಕಿಯೊಂದರಲ್ಲೇ 18,342 ಜನರು ಮೃತಪಟ್ಟು 75,000 ಜನ ಗಾಯಗೊಂಡಿದ್ದರೆ, ಸಿರಿಯಾದಲ್ಲಿ 3,300 ಜನ ಸಾವನ್ನಪ್ಪಿದ್ದಾರೆ. ಆದರೆ ಎರಡು ದೇಶಗಳಲ್ಲಿ ಮನೆ ಕಳೆದುಕೊಂಡಿರುವ ಒಟ್ಟು ನಿರಾಶ್ರಿತರ ಅಂಕಿ ಅಂಶ ದೃಢವಾಗಿಲ್ಲ. ಟರ್ಕಿಯಲ್ಲಿ ಸುಮಾರು 12,000 ಕಟ್ಟಡಗಳು ಕುಸಿದಿರುವ ಸಾಧ್ಯತೆಗಳಿದೆ ಎನ್ನಲಾಗಿದೆ.

Turkey Earthquake: ಮೂತ್ರ ಕುಡಿದು ಬದುಕಿ ಬಂದ 17 ವರ್ಷದ ಯುವಕ!

ಈ ನಡುವೆ ಭೂಕಂಪ ಸಂಭವಿಸಿದಾಗಿನಿಂದ 4 ದಿನಗಳ ವರೆಗೆ ಸತತ 101 ಗಂಟೆಗಳ ಕಾಲ ಅವಶೇಷದಡಿ ಸಿಲುಕಿ ಬದುಕಿದ್ದ 6 ಜನರನ್ನು ಸೇರಿ ಬದುಕುಳಿದಿದ್ದ ಅನೇಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅಲ್ಲದೇ ಭೂಕಂಪ ಸಂಭವಿಸಿ ಈಗಾಗಲೇ 4 ದಿನಗಳು ಕಳೆದಿದ್ದು ಕಾಣೆಯಾಗಿರುವವರು ರಕ್ಷಣಾ ಕಾರ್ಯಾಚರಣೆಯಲ್ಲಿ ಜೀವಂತವಾಗಿ ಸಿಗುತ್ತಾರೆ ಎಂಬ ಭರವಸೆಯನ್ನು ಕಳೆದುಕೊಳ್ಳಲಾಗಿದೆ.ಒಟ್ಟು 1,20,000 ರಕ್ಷಣಾ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಕಾರ್ಯಾಚರಣೆಯಲ್ಲಿ 12,000 ವಾಹನಗಳನ್ನು ಬಳಸಲಾಗುತ್ತಿದೆ. ಈಗಾಗಲೇ ಟರ್ಕಿಯಲ್ಲಿ 60 ದೇಶಗಳ 7,000 ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದು ಒಟ್ಟು 95 ದೇಶಗಳು ನೆರವು ನೀಡಿವೆ ಎಂದು ಟರ್ಕಿ ಸರ್ಕಾರ ತಿಳಿಸಿದೆ.

Latest Videos
Follow Us:
Download App:
  • android
  • ios