ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇಂದು ಸಂಜೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.1ರ ತೀವ್ರತೆ ದಾಖಲಾಗಿದೆ.
ಅಂಕರ(ಮೇ.15) ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಕಾರಣದಿಂದ ಭಾರತದಲ್ಲಿ ಬಾಯ್ಕಾಟ್ ಟರ್ಕಿ ಅಭಿಯಾನ ಜೋರಾಗಿ ನಡೆಯುತ್ತಿದೆ. ಟರ್ಕಿ ವಸ್ತುಗಳು ಬ್ಯಾನ್ ಆಗುತ್ತಿದೆ. ಈ ಆಘಾತ ನಡುವೆ ಇದೀಗ ಟರ್ಕಿಗೆ ಪ್ರಾಕೃತಿಕ ವಿಕೋಪ ಆಘಾತ ಎದುರಾಗಿದೆ. ಟರ್ಕಿಯಲ್ಲಿ ಪ್ರಬಲ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 5.1 ರ ತೀವ್ರತೆ ದಾಖಲಾಗಿದೆ. ಕುಲು ಪ್ರಾಂತ್ಯದ 14 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಪ್ರಭಲ ಭೂಕಂಪದ ಅನುಭವವಾಗಿದೆ ಎಂದು ಚರ್ಕಿ ಸ್ಪಷ್ಟಪಡಿಸಿದೆ.
ಕುಲು ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ಟರ್ಕಿ ರಾಜಧಾನಿ ಅಂಕರದಲ್ಲೂ ಅನುಭವವಾಗಿದೆ ಎಂದು ಜನರು ಹೇಳಿದ್ದಾರೆ. ಅಂಕರದಲ್ಲಿ ಭೂಮಿ ಕಂಪಿಸುತ್ತಿರುವ ಅನುಭವವಾಗುತ್ತಿದ್ದಂತೆ ಜನರು ಹೊರಗೆ ಓಡಿ ಬಂದಿದ್ದರೆ. ಇನ್ನು ಕುಲು ಪ್ರಾಂತ್ಯದಲ್ಲಿನ ಇದರ ತೀವ್ರತೆ ಹೆಚ್ಚಿದೆ. ಕಟ್ಟಡಗಳು ಧರೆಗುರುಳಿದೆ ಎಂದು ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಸಾವು ನೋವಿನ ವರದಿಯಾಗಿಲ್ಲ.
ಭೂಕಂಪಕ್ಕೆ ಚೀನಾ ಪುನಃ ತತ್ತರ: ಅಂದು 87 ಸಾವಿರ ಜನರ ಬಲಿ ಪಡೆದಿತ್ತು ಇದೇ ದಿನ...
ಬುಧವಾರ ಬೆಳಗ್ಗೆ ಗ್ರೀಸ್ ಹಾಗೂ ಸುತ್ತಮುತ್ತಲಿನ ಕೆಲ ಪ್ರದೇಶಗಳಲ್ಲಿ 6.1ರ ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಇದರ ಬೆನ್ನಲ್ಲೇ ಇದೀಗ ಟರ್ಕಿಯಲ್ಲಿ ಭೂಕಂಪನ ಸಂಭವಿಸಿದೆ. ಈ ಭೂಕಂಪನದ ವ್ಯಾಪ್ತಿ 78 ಕಿಲೋಮೀಟರ್ ವ್ಯಾಪಿಸಿತ್ತು. ಪರಿಣಾಮ ಇಸ್ರೇಲ್, ಲೆಬನಾನ್, ಟರ್ಕಿ ಹಾಗೂ ಜೋರ್ಡಾನ್‌ನಲ್ಲೂ ಕಂಪನದ ಅನುಭವಾಗಿದೆ
2023ರಲ್ಲಿ ಟರ್ಕಿಯಲ್ಲಿ ಆಘಾತ
2023ರಲ್ಲಿ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಮೊದಲು 7.8ರ ತೀವ್ರತೆ ಭೂಕಂಪ ಸಂಭಿಸಿದ್ದರೆ, ಬಳಿಕ 7.5ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಬೆನ್ನಲ್ಲೇ ಮತ್ತೆ ಲಘು ಭೂಕಂಪನ ಸಂಭವಿಸಿತ್ತು. ಈ ಭೂಕಂಪದಲ್ಲಿ ಹಲವು ಕಟ್ಟಡ, ಮನೆಗಳು ನೆಲಸಮಗೊಂಡಿತ್ತು. ಈ ಭೂಕಂಪನದಲ್ಲಿ 59,000 ಮಂದಿ ಮೃತಪಟ್ಟಿದ್ದರು. ಈ ಭೂಕಂಪನದ ತೀವ್ರತೆ ಸಿರಿಯಾದ ಮೇಲೂ ಪರಿಣಾಮ ಬೀರಿತ್ತು. ಸಿರಿಯಾದಲ್ಲಿ 8,000 ಮಂದಿ ಮೃತಪಟ್ಟಿದ್ದರು.


