Asianet Suvarna News Asianet Suvarna News

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ; ಸುನಾಮಿ ಆತಂಕ: 11,000 ಜನರ ಸ್ಥಳಾಂತರಕ್ಕೆ ಸರ್ಕಾರ ಆದೇಶ

ಇಂಡೋನೇಷ್ಯಾ ಉತ್ತರ ದಿಕ್ಕಿನಲ್ಲಿರುವ ಸುಲವೇಸಿ ದ್ವೇಪದರುವಾಂಗ್ ಪರ್ವತದಲ್ಲಿ ಜ್ವಾಲಮುಖಿ ಸ್ಫೋಟಗೊಂಡಿದೆ. ಈ ಜ್ವಾಲಾಮುಖಿ ಒಂದೇ ದಿನದಲ್ಲಿ ಐದು ಬಾರಿ ಜೋರಾಗಿ ಚಿಮ್ಮಿದೆ. ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಆಡಳಿತ ಜೋರಾದ ಎಚ್ಚರಿಕೆ ನೀಡಿದೆ. 

Tsunami anxiety due to Volcanic Eruption in Indonesia  grg
Author
First Published Apr 18, 2024, 8:01 AM IST

ಜಕಾರ್ತ(ಏ.18):  ಇಂಡೋನೇಷ್ಯಾದ ದ್ವೀಪವೊಂದರಲ್ಲಿ ಬುಧವಾರ ಜ್ವಾಲಾಮುಖಿಯೊಂದು ಸ್ಪೋಟಗೊಂಡಿದೆ. ಪರಿಣಾಮ ಪರ್ವತದ ಸುತ್ತಮುತ್ತಲು ಇರುವ 11,000 ಜನರನ್ನು ಕೂಡಲೇ ಸ್ಥಳಾಂತರಮಾಡಲು ಇಲ್ಲಿನ ಇಂಡೋನೇಷ್ಯಾ ಸರ್ಕಾರ ಆದೇಶಿಸಿದೆ. ಜ್ವಾಲಾಮುಖಿಯಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ಇಂಡೋನೇಷ್ಯಾ ಉತ್ತರ ದಿಕ್ಕಿನಲ್ಲಿರುವ ಸುಲವೇಸಿ ದ್ವೇಪದರುವಾಂಗ್ ಪರ್ವತದಲ್ಲಿ ಜ್ವಾಲಮುಖಿ ಸ್ಫೋಟಗೊಂಡಿದೆ. ಈ ಜ್ವಾಲಾಮುಖಿ ಒಂದೇ ದಿನದಲ್ಲಿ ಐದು ಬಾರಿ ಜೋರಾಗಿ ಚಿಮ್ಮಿದೆ. ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಆಡಳಿತ ಜೋರಾದ ಎಚ್ಚರಿಕೆ ನೀಡಿದೆ. ಸಮುದ್ರದ ಉತ್ತರ ಬದಿಯಲ್ಲಿ ತಗುಲಂಡಂಗ್‌ ದ್ವೀಪದಲ್ಲಿರುವ 11,000 ಜನರನ್ನು ಸ್ಥಳಾಂತರ ಮಾಡುವಂತೆ ಜನರಿಗೆ ಪರ್ವತದಿಂದ 6 ಕಿ.ಮೀ.ದೂರದಲ್ಲಿರುವಂತೆ ಎಚ್ಚರಿಕೆ ನೀಡಿದೆ.

ಶಾಲೆಯಲ್ಲಿ ನಮಾಜ್ ಬ್ಯಾನ್, ಯುಕೆ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗೆ ಹಿನ್ನಡೆ!

2018ರಲ್ಲಿ ಅನಾಕ್ ಕ್ರಕತಾವ್ ಜ್ವಾಲಾಮುಖಿ ಸ್ಪೋಟದಿಂದಾಗಿ ಸುನಾಮಿ ಎದ್ದು, 430 ಮಂದಿ ಸಾವನ್ನಪ್ಪಿದ್ದರು.

Follow Us:
Download App:
  • android
  • ios