ಶಾಲೆಯಲ್ಲಿ ನಮಾಜ್ ಬ್ಯಾನ್, ಯುಕೆ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗೆ ಹಿನ್ನಡೆ!
ಶಾಲಾ ತರಗತಿ, ಆವರಣದಲ್ಲಿ ನಮಾಜ್ ನಿಷೇಧಿಸಿರುವುದನ್ನು ಪ್ರಶ್ನಿಸಿ ಯುಕೆ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗೆ ಹಿನ್ನಡೆಯಾಗಿದೆ. ಶಾಲೆಯಲ್ಲಿ ಧಾರ್ಮಿಕ ಆಚರಣೆಗೆ ಪ್ರಾಶಸ್ತ್ಯವಿಲ್ಲ. ಶಾಲೆಯಲ್ಲಿ ನಮಾಜ್ ಅನಿವಾರ್ಯವಾದರೆ ಶಾಲೆ ತೊರೆಯಲು ಯುಕೆ ಹೈಕೋರ್ಟ್ ಸೂಚಿಸಿದೆ.
ಲಂಡನ್(ಏ.17) ಕರ್ನಾಟಕದಲ್ಲಿ ಹಿಜಾಬ್ ಬ್ಯಾನ್ ಪ್ರಕರಣ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಾಗಿದೆ. ದೇಶ ವಿದೇಶಗಳಲ್ಲಿ ಸಂಚಲನ ಮೂಡಿಸಿದೆ. ಇದೀಗ ಇದೇ ರೀತಿಯ ಪ್ರಕರಣ ಲಂಡನ್‌ನಲ್ಲೂ ನಡೆದು ತೀರ್ಪು ಹೊರಬಿದ್ದಿದೆ. 2023ರ ಪ್ರಕರಣದ ತೀರ್ಪು ಇದೀಗ ಪ್ರಕಟಗೊಂಡಿದೆ. ಯುಕೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಶಾಲೆಯಲ್ಲಿ ನಮಾಜ್‌ಗೆ ಅವಕಾಶವಿಲ್ಲ. ಒಂದು ವೇಳೆ ನಿಮಗೆ ಶಾಲೆಯಲ್ಲಿ ನಮಾಜ್ ಅನಿವಾರ್ಯವಾಗಿದ್ದರೆ ಶಾಲೆ ಬಿಟ್ಟುಬಿಡಿ ಎಂದು ಕೋರ್ಟ್ ಹೇಳಿದೆ.
ಉತ್ತರ ಲಂಡನ್‌ನ ಬ್ರೆಂಟ್‌ನಲ್ಲಿರುವ ಮೈಕೆಲಾ ಕಮ್ಯೂನಿಟಿ ಬ್ರಿಟಿಷ್ ಶಾಲೆಯಲ್ಲಿ ಯಾವುದೇ ಧರ್ಮದ ಆಚರಣೆಗಳಿಗೆ ಅವಕಾಶವಿಲ್ಲ. ಈ ಶಾಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಈ ಪೈಕಿ ಅರ್ಧದಷ್ಟು ಮುಸ್ಲಿಂ ವಿದ್ಯಾರ್ಥಿಗಳು. 2023ರಲ್ಲಿ ಬ್ರಿಟಿಷ್ ಶಾಲೆಯಲ್ಲಿ ಕೆಲಸ ಮುಸ್ಲಿಮ್ ವಿದ್ಯಾರ್ಥಿಗಳು ನಮಾಜ್ ಮಾಡಿದ್ದರು. ಇದು ಶಾಲಾ ಮಾರ್ಗೂಸೂಚಿಗೆ ವಿರುದ್ದವಾಗಿತ್ತು. ಹೀಗಾಗಿ ಶಾಲಾ ಆಡಳಿತ ಮಂಡಳಿ ಖಡಕ್ ವಾರ್ನಿಂಗ್ ನೀಡಿತ್ತು. ಇಷ್ಟೇ ಅಲ್ಲ ಶಾಲಾ ತರಗತಿ, ಆವರಣದಲ್ಲಿ ನಮಾಜ್ ಸೇರಿದಂತೆ ಯಾವುದೇ ಪ್ರಾರ್ಥನೆಗೆ ಅವಕಾಶವಿಲ್ಲ. ಸಂಪೂರ್ಣ ನಿಷೇಧಿಸಲಾಗಿದೆ ಎಂಬ ಅಧಿಸೂಚನೆ ಹೊರಡಿಸಿತ್ತು.
ಮೇರಠ್: ರಸ್ತೆ ಮಧ್ಯೆ ನಮಾಜ್ ಮಾಡಿ ಕಿರಿಕಿರಿ; 200ಕ್ಕೂ ಅಧಿಕ ಮಂದಿ ವಿರುದ್ಧ ಕೇಸ್
ಈ ನಿರ್ಧಾರದ ವಿರುದ್ದ ಪರ ವಿರೋಧಗಳು ವ್ಯಕ್ತವಾಗಿತ್ತು. ಮುಸ್ಲಿಮ್ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾರಿ ಪ್ರತಿಭಟನೆ ನಡೆಸಿದ್ದರು. ಇಷ್ಟೇ ಅಲ್ಲ ಶಾಲಾ ಆವರಣದಲ್ಲಿ ನಮಾಜ್‌ಗೆ ನಿಷೇಧ ಹೇರಿದ ನಿರ್ಧಾರದ ವಿರುದ್ಧ ಯುಕೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಶಾಲಾ ಆವರಣದಲ್ಲಿ ನಮಾಜ್ ನಿಷೇಧಿಸುವ ಮೂಲಕ ಇಸ್ಲಾಂ ಧಾರ್ಮಿಕ ನಂಬಿಕೆಗೆ ಅಡ್ಡಿ ಮಾಡಿದ್ದಾರೆ. ಇಸ್ಲಾಂನಲ್ಲಿ ನಮಾಜ್ ಅತೀ ಮುಖ್ಯ. ಆದರೆ ಈ ಧಾರ್ಮಿಕ ಹಕ್ಕನ್ನು ಶಾಲೆ ಕಸಿದು ಕಂಡಿದೆ. ನನ್ನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
2023ರ ಈ ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ ಲಂಡನ್ ಹೈಕೋರ್ಟ್, ಇದೀಗ ಮಹತ್ವದ ತೀರ್ಪು ನೀಡಿದೆ. ಶಾಲಾ ಆವರಣದಲ್ಲಿ ಶಾಲೆಯ ಮಾರ್ಗಸೂಚಿ ಪಾಲನೆ ಅತಿ ಅಗತ್ಯವಾಗಿದೆ. ಶಾಲೆಯಲ್ಲಿ ಕಲಿಕೆಯ ಜೊತೆಗೆ ಸರ್ವಾಂಗೀಣ ಅಭಿವೃದ್ಧಿ ಅತೀ ಮುಖ್ಯ, ಮೌಲ್ಯಯುತ ಬದುಕು, ಗೌರವ, ವಿದ್ಯಾಭ್ಯಾಸ ಕೇಂದ್ರದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಎಂದು ಶಾಲೆಯಲ್ಲಿ ನಮಾಜ್ ಬ್ಯಾನ್ ನಿರ್ಧಾರವನ್ನು ಎತ್ತಿ ಹಿಡಿದಿದೆ.
ಅರ್ಜಿದಾರರಿಗೆ ಶಾಲೆಯಲ್ಲಿ ನಮಾಜ್ ಮಾಡುವುದೇ ಮುಖ್ಯವಾಗಿದ್ದರೆ,ಆ ಶಾಲೆ ತೊರೆಯುವುದು ಉತ್ತಮ. ನಮಾಜ್‌ಗೆ ಅವಕಾಶವಿರುವ ಬೇರೆ ಶಾಲೆಗೆ ಸೇರಿಕೊಳ್ಳಬಹುದು ಎಂದು ಹೈಕೋರ್ಟ್ ಹೇಳಿದೆ.
ಕಾಲೇಜಿನಲ್ಲಿ ನಮಾಜ್‌ಗೆ ಅನುಮತಿ ನಿರಾಕರಣೆ, ಮುಸ್ಲಿಮ್ ವಿದ್ಯಾರ್ಥಿನಿಯರ ಪ್ರತಿಭಟನೆ!