Asianet Suvarna News Asianet Suvarna News

'ಒತ್ತೆಯಾಳಾಗಿ ನರಳೋದಕ್ಕಿಂತ ಸತ್ತಿದ್ದೆ ಒಳ್ಳೆಯದಾಯ್ತ..' 8 ವರ್ಷದ ಮಗಳ ಸಾವನ್ನು ಸ್ವಾಗತಿಸಿದ ಇಸ್ರೇಲ್‌ ಪ್ರಜೆ!

ಇಸ್ರೇಲ್‌ನಲ್ಲಿ ಹಮಾಸ್‌ನ ನರರಾಕ್ಷಸರು ನಡೆಸಿದ ಭೀಬತ್ಸ ಕೃತ್ಯದ ಒಂದೊಂದೆ ವಿವರಗಳು ಪ್ರಕಟವಾಗುತ್ತಿವೆ. ಇದರ ನಡುವೆ ಇಸ್ರೇಲ್‌ ಪ್ರಜೆಯೊಬ್ಬರು ತಮ್ಮ ಪುಟ್ಟ ಮಗಳ ಸಾವಿನ ಸಂಕಷ್ಟವನ್ನು ಮಾಧ್ಯಮಗಳ ಎದುರು ತೋಡಿಕೊಂಡಿದ್ದಾರೆ.

Father Thomas Hand WELCOMES the news his 8 year-old daughter Emily was killed by Hamas monsters san
Author
First Published Oct 12, 2023, 3:56 PM IST

ನವದೆಹಲಿ (ಅ.12): ಗಾಜಾದ ಮೇಲೆ ಇಸ್ರೇಲ್‌ ಈ ಪರಿ ಮುಗಿಬಿದ್ದಿರೋದಕ್ಕೆ ಕಾರಣ, ಇಸ್ರೇಲ್‌ನ ಜನರ ಮೇಲೆ ಹಮಾಸ್‌ ಉಗ್ರರು ಮಾಡಿರುವ ಹಿಂಸಾಚಾರ. 40ಕ್ಕೂ ಅಧಿಕ ಮಕ್ಕಳ ಶಿರಚ್ಛೇದ ಮಾಡಿ ಸಾಯಿಸಿದ ಹಮಾಸ್‌ ಉಗ್ರರ ಒಂದೊಂದೇ ಭೀಬತ್ಸ ಕೃತ್ಯಗಳು ವಿಶ್ವದ ಮುಂದೆ ಬರುತ್ತಿವೆ. ಇಸ್ರೇಲ್‌ ವ್ಯಕ್ತಿ ಥಾಮಸ್‌ ಹಾಂಡ್‌ ಇತ್ತೀಚೆಗೆ ಮಾಧ್ಯಮದ ಎದುರು ತಮ್ಮ ಮಗಳ ಸಾವಿನ ಸಂಕಟವನ್ನು ತೋಡಿಕೊಂಡಿದ್ದಾರೆ. ಹಮಾಸ್‌ ಉಗ್ರರು ತಮ್ಮ 8 ವರ್ಷದ ಪುತ್ರಿ ಎಮಿಲಿಯನ್ನು ಸಾಯಿಸಿದ ಸುದ್ದಿ ನನಗೆ ಗೊತ್ತಾದ ಬೆನ್ನಲ್ಲಿಯೇ ನಾನು ಸಮಾಧಾನ ಮಾಡಿಕೊಂಡೆ ಎಂದು ಥಾಮಸ್‌ ಹಾಂಡ್‌ ಹೇಳಿದ್ದಾರೆ. ಒತ್ತೆಯಾಳಾಗಿ ಹಮಾಸ್‌ನ ನರರಾಕ್ಷಸರ ಕೈಯಲ್ಲಿ ನರಳೋದಕ್ಕಿಂತ ಆಕೆ ಸಾವು ಕಂಡಿದ್ದಾಳೆ ಎಂದು ಸುದ್ದಿ ಕೇಳಿದ ತಕ್ಷಣ ನನಗೆ ಸಮಾಧಾನವಾಯಿತು. ಆ ಹಂತದಲ್ಲಿ ನನಗೆ ಆಕೆ ಸಾವು ಕಂಡಿದ್ದೇ ಆಶೀರ್ವಾದ ಎಂದು ಭಾವಿಸಿದ್ದೆ ಎಂದು ಅಳುತ್ತಲೇ ಹೇಳಿದ್ದಾರೆ. ನನ್ನ ಮಗಳು ಕಿಡ್ನಾಪ್‌ ಆದ ಬಳಿಕ ಎರಡು ದಿನಗಳ ಕಾಲ ಅಪ್‌ಡೇಟ್‌ಗಾಗಿ ಕಾದಿದ್ದೆ. ಎರಡು ದಿನಗಳ ಬಳಿಕ ಉಗ್ರರು ಆಕೆಯನ್ನು ಕೊಂದಿದ್ದಾರೆ ಎನ್ನುವ ಸುದ್ದಿ ತಿಳಿಯಿತು. ಆ ಕ್ಷಣ ನಾನು ಸಮಾಧಾನಪಟ್ಟೆ. ಒತ್ತೆಯಾಳಾಗಿ ನರಳೋದಕ್ಕಿಂತ ಆ ಕ್ಷಣದಲ್ಲಿ ಅವಳ ಸಾವು ನನಗೆ ಸಮಾಧಾನ ನೀಡಿತ್ತು ಎಂದು ಭಾವುಕವಾಗಿ ಮಾತನಾಡಿದ್ದಾರೆ.

ಶನಿವಾರ ಬೆಳಗ್ಗೆ ಅಂದಾಜು 7 ಗಂಟೆಯ ಸುಮಾರಿಗೆ ಪ್ಯಾಲೆಸ್ತೇನಿಯನ್‌ ಭಯೋತ್ಪಾದಕರು ಕಿಬ್ಬುಟ್ಜ್ ಪ್ರದೇಶಕ್ಕೆ ನುಗ್ಗಿ ಕನಿಷ್ಠ 100 ಜನರನ್ನು ಕಗ್ಗೊಲೆ ಮಾಡಿದ್ದರು. ಈ ಹಂತದಲ್ಲಿ ತನ್ನ ಮಗಳು ಕಾಣೆಯಾಗಿದ್ದಳು ಎಂದು ಥಾಮಸ್‌ ಹಾಂಡ್‌ ಹೇಳಿದ್ದಾರೆ. ಆಕೆಯ ಬಗ್ಗೆ ಅಪ್‌ಡೇಟ್‌ಗಾಗಿ ನಾನು 2 ದಿನಗಳು ಕಾದಿದ್ದೆ ಎಂದು ತಿಳಿಸಿದ್ದಾರೆ. ಆ ದಿನ ಕಿಬ್ಬುಟ್ಜ್  ಪ್ರದೇಶದಲ್ಲಿ12 ಗಂಟೆಗಳ ಕಾಲ ಗುಂಡಿನ ಕಾಳಗ ನಡೆಯಿತು. ಪಕ್ಕದ ಮನೆಗೆ ಮಲಗಲು ತೆರಳಿದ್ದ ಎಮಿಲಿ ಆ ಬಳಿಕ ಏನಾದಳು ಎನ್ನುವ ಮಾಹಿತಿಯೇ ಸಿಕ್ಕಿರಲಿಲ್ಲ.

ಸಿಎನ್‌ಎನ್‌ಗೆ ನೀಡಿರುವ ಸಂದರ್ಶನದಲ್ಲಿ ಮಗಳನ್ನು ನೆನಪು ಮಾಡಿಕೊಂಡು ಕಣ್ಣೀರಿಟ್ಟ ಥಾಮಸ್‌ ಹಾಂಡ್‌, ಕೊನೆಗೆ ಎರದು ದಿನಗಳ ಬಳಿಕ ಪೊಲೀಸರು ನನ್ನ 8 ವರ್ಷದ ಪುಟ್ಟ ಮಗಳ ಶವವನ್ನು ಪತ್ತೆ ಮಾಡಿ ನಮಗೆ ಮಾಹಿತಿ ನೀಡಿದರು. ಆ ಹಂತದಲ್ಲಿ ನನಗೆ ಅಬ್ಬಾ ಕೊನೆಗೂ ಆ ಉಗ್ರರು ಈಕೆಯನ್ನು ಅಪಹರಣ ಮಾಡಿಲ್ಲ ಎಂದು ಸಮಾಧಾನ ಮಾಡಿಕೊಂಡೆ ಎಂದಿದ್ದಾರೆ. ಪೊಲೀಸರು 'ನಾವು ಎಮಿಲಿಯನ್ನು ಕಂಡುಹಿಡಿದ್ದೇವೆ. ಆದರೆ ಆಕೆ ಸಾವು ಕಂಡಿದ್ದಾಳೆ' ಎಂದು ಅವರು ತಿಳಿಸಿದ ತಕ್ಷಣ, ನಾನು 'ಯೆಸ್‌' ಎನ್ನುತ್ತಾ ನಗು ಬೀರಿದ್ದೆ. ಯಾಕೆಂದರೆ, ಆ ಕ್ಷಣದಲ್ಲಿ ಆಗಬಹುದಾದ ಸಾಧ್ಯತೆಗಳ ಪೈಕಿ ಅದು ಒಳ್ಳೆಯ ಸುದ್ದಿಯಾಗಿತ್ತು ಎಂದು ನಡುಗುವ ಧ್ವನಿಯಲ್ಲೇ ಹಾಂಡ್‌ ಹೇಳಿದ್ದಾರೆ.

ಸಾಮಾನ್ಯವಾಗಿ ಅವಳು ಮನೆ ಬಿಟ್ಟು ಎಲ್ಲೂ ಹೋಗೋದಿಲ್ಲ. ತೀರಾ ಅಪರೂಪ. ಆದರೆ, ಶುಕ್ರವಾರ ರಾತ್ರಿ, ತಾನು ಸ್ನೇಹಿತರ ಮನೆಯಲ್ಲಿ ಮಲಗೋಕೆ ಹೋಗುವುದಾಗಿ ಹೇಳಿ ಹೊರಟಿದ್ದಳು. ಆದರೆ, ಮರುದಿನವೇ ಕಿಬ್ಬುಟ್ಜ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಗುಂಡಿನ ದಾಳಿ ನಡೆಯುವ ಹೊತ್ತಿಗಾಗಲೇ, ದೇಶದ ಸೇನೆ ಕೆಲ ಹೊತ್ತಿನಲ್ಲಿಯೇ ಇಲ್ಲಿಗೆ ಬರಲಿದೆ. ಅಲ್ಲಿಯವರೆಗೂ ನಾವು ಬದುಕಿರಬೇಕು ಅಷ್ಟೇ ಎನ್ನುವ ತೀರ್ಮಾನ ಮಾಡಿದ್ದೆವು' ಎಂದು ಹೇಳಿದ್ದಾರೆ.

Isreal Dispatch: ಗಾಜಾಕ್ಕೆ ವಿದ್ಯುತ್‌, ಇಂಧನ, ಆಹಾರ ಬಂದ್‌; ಈವರೆಗೂ 1 ಸಾವಿರ ಟನ್‌ ಬಾಂಬ್‌ ಗಿಫ್ಟ್‌!

ಉಗ್ರರ ಕೈಗೆ ಸಿಕ್ಕಿದ್ದಾಳೆ ಎಂದಾದರೆ ಆಕೆ ಕಿಬ್ಬುಟ್ಜ್‌ನಲ್ಲಿ ಅಥವಾ ಗಾಜಾದಲ್ಲಿ ಸಾವು ಕಂಡೇ ಕಾಣುತ್ತಿದ್ದಳು. ಇಲ್ಲಿಂದ ಒತ್ತೆಯಾಳುಗಳಾಗಿ ತೆಗೆದುಕೊಂಡು ಹೋದ ವ್ಯಕ್ತಿಗಳಿಗೆ ಗಾಜಾದಲ್ಲಿ ಯಾವ ರೀತಿ ನೋಡಿಕೊಳ್ಳುತ್ತಾರೆ ಎನ್ನೋದು ನಮಗೆ ಗೊತ್ತಿದೆ. ಅದು ಸಾವಿಗಿಂತಲೂ ಹೇಯವಾಗಿರುತ್ತದೆ. ಆಹಾರ ಇರೋದಿಲ್ಲ. ನೀರು ಇರೋದಿಲ್ಲ. ಕಗ್ಗತ್ತಲಿನ ಕೋಣೆಯಲ್ಲಿ ಇರಬೇಕಿತ್ತು. ಆ ಕೋಣೆಯಲ್ಲಿ ಎಷ್ಟು ಜನ ಇರುತ್ತಿದ್ದರೋ ಏನೋ? ಆ ಹಂತದಲ್ಲಿ ನಾನು ಪ್ರತಿ ನಿಮಿಷ, ಗಂಟೆ, ದಿನ ಬಹುಶಃ ವರ್ಷಗಳ ಕಾಲ ಆಕೆಯ ಬಗ್ಗೆ ಯೋಚನೆ ಮಾಡುತ್ತಲೇ ಇರಬೇಕಿತ್ತು.

ಇಸ್ರೇಲ್‌ನದ್ದು ಕದ್ದ ಭೂಮಿ, ಪ್ಯಾಲೆಸ್ತೇನ್‌ ಪರವಾಗಿ ಭಾರತ ನಿಲ್ಲಬೇಕು ಎಂದ ಚೇತನ್‌ ಅಹಿಂಸಾ!

ಹಾಗಾಗಿ ಆಕೆಯ ಪಾಲಿಗೆ ಸಾವು ಅನ್ನದೇ ಆಶೀರ್ವಾದ, ನಿಜಕ್ಕೂ ದೊಡ್ಡ ಆಶೀರ್ವಾದ ಎಂದು ಥಾಮಸ್‌ ಹಾಂಡ್‌ ಹೇಳಿದ್ದಾರೆ. ಹಮಾಸ್‌ನ ಭಯೋತ್ಪಾದಕರು ಇಸ್ರೇಲ್‌ ಪ್ರಜೆಗಳು ಅದರಲ್ಲೂ ಮಹಿಳೆಯರು ಹಾಗೂ ಯುವತಿಯರ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಅವರ ದೇಹಗಳನ್ನು ಬೀದಿಗಳಲ್ಲಿ ಎಳೆದುಕೊಂಡು ಹೋಗಿದ್ದಾರೆ. ಕೆಲವು ಕುಟುಂಬಗಳನ್ನು ಸಜೀವವಾಗಿ ಸುಟ್ಟಿದ್ದಾರೆ. ಶಿಶುಗಳ ಶಿರಚ್ಛೇದನದಂತ ಊಹಿಸಲಾಗದ ಹಿಂಸಾಚಾರ ಮಾಡಿದ್ದಾರೆ.

Follow Us:
Download App:
  • android
  • ios