Watch: ಹಮಾಸ್‌ನಿಂದ ಶಿಶುಗಳ ಶಿರಚ್ಛೇದ ನಿಜ, ಇಸ್ರೇಲ್ ಸೇನೆಯ ವಕ್ತಾರನ ಅಧಿಕೃತ ಹೇಳಿಕೆ!
ಇಸ್ರೇಲ್‌ನ ಕಿಬ್ಬುಟ್ಜ್ ಪ್ರದೇಶದಲ್ಲಿ ಹಮಾಸ್ ಉಗ್ರರು ಶಿಶುಗಳ ಶಿರಚ್ಛೇದ ಮಾಡಿದ ಸುದ್ದಿಯನ್ನು ಇಸ್ರೇಲ್ ಸೇನೆ ಖಚಿತಪಡಿಸಿದೆ. ಒಂದು ದಿನದ ಹಿಂದೆ ವಿದೇಶಿ ಮಾಧ್ಯಮಗಳು ಈ ಸುದ್ದಿಯನ್ನು ವರದಿ ಮಾಡಿದ್ದು, ಜಗತ್ತಿನ ಆಕ್ರೋಶಕ್ಕೆ ಕಾರಣವಾಗಿತ್ತು. ಗುರುವಾರ ಇಸ್ರೇಲ್ ಸೇನೆಯ ವಕ್ತಾರ ಅಧಿಕೃತವಾಗಿ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ನವದೆಹಲಿ (ಅ.12): ಇಸ್ರೇಲ್ ಹಾಗೂ ಗಾಜಾಪಟ್ಟಿಗೆ ಹೊಂದಿಕೊಂಡಿದ್ದ ಗಡಿ ಪ್ರದೇಶದಲ್ಲಿ ಕಳೆದ ಶನಿವಾರ ದಾಳಿ ಮಾಡಿದ್ದ ಹಮಾಸ್ ಉಗ್ರರು ತಮ್ಮ ಭೀಬತ್ಸ್ ಕೃತ್ಯದಲ್ಲಿ 40ಕ್ಕೂ ಅಧಿಕ ಮಕ್ಕಳನ್ನು ಕೊಲೆ ಮಾಡಿದ್ದರೆ, ಕೆಲವು ಶಿಶುಗಳ ಶಿರಚ್ಛೇದವನ್ನೂ ಮಾಡಿದ್ದರು. ವಿದೇಶಿ ಮಾಧ್ಯಮಗಳು ಈ ಸುದ್ದಿ ಪ್ರಕಟ ಮಾಡಿದ್ದ ಬೆನ್ನಲ್ಲಿಯೇ ಜಗತ್ತಿನಲ್ಲಿ ಹಮಾಸ್ ಉಗ್ರರ ನೀಚ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅದರೊಂದಿಗೆ ಪ್ಯಾಲೇಸ್ತೇನ್ ಪರವಾಗಿ ಸುದ್ದಿಮಾಡುವ ಕೆಲ ಅರಬ್ ಸುದ್ದಿವಾಹಿನಿಗಳು ಇದು ಸುಳ್ಳು ಸುದ್ದಿ ಎಂದಿದ್ದವು. ಅದರೆ, ಗುರುವಾರ ಈ ಬಗ್ಗೆ ಇಸ್ರೇಲ್ ಭದ್ರತಾ ಪಡೆಗಳ ವಕ್ತಾರ ಜೊನಾಥನ್ ಕಾನ್ರಿಕಸ್ ಅಧಿಕೃತವಾಗಿ ಹೇಳಿಕೆ ನೀಡಿದ್ದು, ಹಮಾದ್ ಉಗ್ರರು ಶಿಶುಗಳ ಶಿರಚ್ಛೇದ ಮಾಡಿರುವುದು ನಿಜ ಎಂದು ಹೇಳಿದ್ದಾರೆ. ಅದಲ್ಲದೆ, ಇದು ತಾವು ಯುದ್ಧಭೂಮಿಯಲ್ಲಿ ಹಿಂದೆಂದೂ ಕಂಡಿರದ ದೃಶ್ಯ ಎಂದು ಹೇಳಿದ್ದಾರೆ. ಅಮೆರಿದ ಅಧ್ಯಕ್ಷ ಜೋ ಬೈಡೆನ್ ಕೂಡ ಇಸ್ರೇಲ್‌ನಲ್ಲಿ ಶಿಶುಗಳ ಶಿರಚ್ಛೇದ ಮಾಡಿ ಕೊಲ್ಲಲಾಗಿದೆ ಎಂದು ಹೇಳಿದ್ದರು. ಇಸ್ರೇಲಿ ರಕ್ಷಣಾ ಪಡೆಗಳ ವಕ್ತಾರ ಜೊನಾಥನ್ ಕಾನ್ರಿಕಸ್, ಗಾಜಾ ಪಟ್ಟಿಗೆ ಸಮೀಪವಿರುವ ಕಿಬ್ಬುಟ್ಜ್‌ನಲ್ಲಿ ನಡೆದ ಹತ್ಯಾಕಾಂಡದ ನಂತರ ಆಗಿರುವ ಪರಿಣಾಮಗಳ ಬಗ್ಗೆ ತಿಳಿಯಲು ಭೇಟಿ ನೀಡಿದ ಪರಿಶೋಧಕರು ಮಕ್ಕಳ ದೇಹಗಳನ್ನು ನೋಡಿದ್ದಾರೆ ಹಾಗೂ ಅವರು ಹೇಗೆ ಸತ್ತಿದ್ದಾರೆ ಎನ್ನುವುದನ್ನೂ ಖಚಿತಪಡಿಸಿದ್ದಾರೆ.
'ಆ ವರದಿಯನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಮತ್ತು ಪರಿಶೀಲಿಸಲು ನಮಗೆ ಸ್ವಲ್ಪ ಸಮಯ ಹಿಡಿಯಿತು ಎಂದು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಹಮಾಸ್ ಕೂಡ ಇಂತಹ ಅನಾಗರಿಕ ಕೃತ್ಯವನ್ನು ಮಾಡಬಹುದೆಂದು ನಂಬಲು ಕಷ್ಟವಾಗಿತ್ತು,' ಎಂದು ಅವರು ತಿಳಿಸಿರುವ ಮಾಹಿತಿಯನ್ನು ಐಡಿಎಫ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟ ಮಾಡಿದೆ. ಬಹುಶಃ ಈಗ ನಾವು ಬಹಳ ವಿಶ್ವಾಸದಿಂದ ಈ ಕೃತ್ಯಗಳನ್ನು ಮಾಡಿದ್ದು ಹಮಾಸ್ ಎಂದು ಹೇಳಬಹುದು ಎಂದು ಭಾವಿಸುತ್ತೇನೆ. ದೇಹಗಳು ಎಲ್ಲಡೆ ಚದುರಿಹೋಗಿದ್ದು ಮಾತ್ರವಲ್ಲೆ, ಬಹಳ ವಿರೂಪಗೊಂಡಿದ್ದವು ಎಂದು ತಿಳಿಸಿದ್ದಾರೆ.
ಹಮಾಸ್ ದಾಳಿಯ ಬೆನ್ನಲ್ಲಿಯೇ ಪ್ರಕಟವಾದ ಸಾಕಷ್ಟು ವರದಿಯಲ್ಲಿ ಭಯೋತ್ಪಾದಕರು, ಮಹಿಳೆಯರನ್ನುಅತ್ಯಾಚಾರ ಮಾಡಿದ್ದು ಮಾತ್ರವಲ್ಲದೆ, ಮಕ್ಕಳು ಹಾಗೂ ಶಿಶುಗಳ ಶಿರಚ್ಛೇದವನ್ನು ಮಾಡಲಾಗಿದೆ ಎನ್ನಲಾಗಿತ್ತು. ಬಳಿಕ ಕೆಲವು ಅರಬ್ ಮಾಧ್ಯಮಗಳು ಇದು ಸುಳ್ಳು ಸುದ್ದಿ ಎಂದಿದ್ದವು. ಆದರೆ, ಈಗ ಇಸ್ರೇಲ್‌ನ ಸೇನಾಪಡೆ ಹಾಗೂ ಇಸ್ರೇಲ್‌ನ ಪರಿಶೋಧಕರು ಹಮಾಸ್ ಶಿಶುಗಳ ಶಿರಚ್ಛೇದನ ಮಾಡಿದ್ದು ನಿಜ ಎಂದು ಅಧಿಕೃತವಾಗಿ ತಿಳಿಸಿದೆ.
ಇನ್ನು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಕೂಡ ರಕ್ತಸಿಕ್ತವಾಗಿದ್ದ ತೊಟ್ಟಿಲಿನ ಚಿತ್ರವನ್ನು ಹಂಚಿಕೊಂಡು ಆಗಿರಬಹುದಾದ ಭೀಬತ್ಸ ಕೃತ್ಯಕ್ಕೆ ಮರುಕಪಟ್ಟಿದ್ದರು. ಹಮಾಸ್ ಉಗ್ರರು ಹುಡುಗ ಹುಡುಗಿಯರನ್ನು ಬಂಧಿಸಿ ಅವರ ತಲೆಗೆ ಗುಂಡು ಹಾರಿಸಿದ್ದಾರೆ. ನಮ್ಮ ಜನರನ್ನು ಜೀವಂತವಾಗಿ ಸುಟ್ಟಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದರೆ, ನಮ್ಮ ಸೈನಿಕರ ಶಿರಚ್ಛೇದ ಸೇರಿದಂತೆ ವಿವಿಧ ದೌರ್ಜನ್ಯಗಳನ್ನು ಎಸಗಿದ್ದಾರೆ ಎಂದು ನೆತನ್ಯಾಹು ಆರೋಪಿಸಿದ್ದಾರೆ. ಎಷ್ಟು ಶಿಶುಗಳ ಶಿರಚ್ಛೇದ ಮಾಡಲಾಗಿದೆ ಎನ್ನುವುದರ ವಿವರವನ್ನು ತಕ್ಷಣವೇ ನೀಡಲು ಸಾಧ್ಯವಿಲ್ಲ ಎಂದು ಐಡಿಎಫ್‌ನ ಇನ್ನೊಬ್ಬ ವಕ್ತಾರ ಡೋರೋನ್ ಸ್ಪೀಲ್‌ಮನ್ ತಿಳಿಸಿದ್ದಾರೆ.
'ಒತ್ತೆಯಾಳಾಗಿ ನರಳೋದಕ್ಕಿಂತ ಸತ್ತಿದ್ದೆ ಒಳ್ಳೆಯದಾಯ್ತ..' 8 ವರ್ಷದ ಮಗಳ ಸಾವನ್ನು ಸ್ವಾಗತಿಸಿದ ಇಸ್ರೇಲ್ ಪ್ರಜೆ!
ಆದರೆ, ನಾನು ಈ ಹಂತದಲ್ಲಿ ಅತ್ಯಂತ ದೃಢವಾಗಿ ಹೇಳಬಹುದಾದ ಸಂಗತಿ ಏನೆಂದರೆ, ಈ ಪ್ರದೇಶದಲ್ಲಿ ಅತ್ಯಂತ ಕ್ರೂರವಾದ ಹತ್ಯೆಗಳಾಗಿದೆ. ಮಕ್ಕಳು ಹಾಗೂ ಶಿಶುಗಳ ದೇಹದ ಭಾಗಗಳನ್ನು ಬೇರ್ಪಡಿಸಲಾಗಿದೆ ಎನ್ನುವುದಕ್ಕೆ ಸಂಪೂರ್ಣ ಪ್ರಮಾಣದ ಸಾಕ್ಷಿಗಳಿವೆ ಎಂದು ಸ್ಪೀಲ್‌ಮನ್ ತಿಳಿಸಿದ್ದಾರೆ.
ವೋಟ್‌ಬ್ಯಾಂಕ್ ಸಲುವಾಗಿ ಪ್ಯಾಲೆಸ್ತೇನ್ ಪರ ನಿಂತ ಕಾಂಗ್ರೆಸ್, 'ಹಮಾಸ್ ಭಯೋತ್ಪಾದಕರಲ್ಲ' ಎಂದ ತರೂರ್!